ಸರ್ಕಾರಿ ಶಾಲೆಗಳು ಸಬಲೀಕರಣವಾಗಲು ಸಮುದಾಯದ ಸಹಭಾಗಿತ್ವ ಅವಶ್ಯ. ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಪ್ರಗತಿಗೆ ಕೈ ಜೋಡಿಸಬೇಕು ಎಂದು ಹಿರಿಯ ತೆರಿಗೆ ಸಲಹೆಗಾರ ಮುಕುಂದ ಪೋತ್ನೀಸ್ ಹೇಳಿದರು.

ಗದಗ: ಸರ್ಕಾರಿ ಶಾಲೆಗಳು ಸಬಲೀಕರಣವಾಗಲು ಸಮುದಾಯದ ಸಹಭಾಗಿತ್ವ ಅವಶ್ಯ. ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಪ್ರಗತಿಗೆ ಕೈ ಜೋಡಿಸಬೇಕು ಎಂದು ಹಿರಿಯ ತೆರಿಗೆ ಸಲಹೆಗಾರ ಮುಕುಂದ ಪೋತ್ನೀಸ್ ಹೇಳಿದರು.

ಶನಿವಾರ ಗದುಗಿನ ಶತಮಾನೋತ್ಸವದ ಶಾಲೆ ಸರ್ಕಾರಿ ಗಂಡು ಮಕ್ಕಳ ಶಾಲೆ ನಂ. 1ರಲ್ಲಿ ದಾನಿಗಳಿಂದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣಾ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದರು.

ದಾನಿಗಳು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುವಲ್ಲಿ ಶಿಕ್ಷಕರೊಂದಿಗೆ ಮುಂದೆ ಹೆಜ್ಜೆ ಇಡಬೇಕು. ಗದುಗಿನ ಎಂ.ಜಿ. ಕವಾಡ ಎಜ್ಯುಕೇಶನ್ ಟ್ರಸ್ಟ್ ಮುಲ್ತಾನಮಲಜಿ ಗುಮಾನಮಲಜಿ ಕವಾಡ ನೆನಪಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದು ಅಭಿನಂದನೀಯ ಎಂದರು.

ದಾನಿಗಳಾದ ಜಯಂತಿಲಾಲ್ ಕವಾಡ ಮಾತನಾಡಿ, ಶತಮಾನೋತ್ಸವ ಶಾಲೆಗಳು ನಮ್ಮೆಲ್ಲರ ಹೆಮ್ಮೆ. ಗದುಗಿನ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಹಾಗೂ ಗಂಡು ಮಕ್ಕಳ ಶಾಲೆ ನಂ. 1 ಹಾಗೂ ಶಾಲೆ ನಂ. 11ರ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ನಮ್ಮ ಕುಟುಂಬದಿಂದ ಸ್ಕೂಲ್ ಬ್ಯಾಗ್ ವಿತರಿಸಿದ್ದು, ಅವುಗಳು ಸದುಪಯೋಗ ಆಗಬೇಕು ಎಂದರು.

ಗದಗ ಶಹರ ಬಿಇಒ ಜಿ.ಎಂ. ಮುಂದಿನಮನಿ, ಸಮನ್ವಯ ಅಧಿಕಾರಿ ಎಸ್.ಪಿ. ಪ್ರಭಯ್ಯನಮಠ, ಶಿಕ್ಷಣ ಸಂಯೋಜಕ ಮುರಳಿ ಸೊಲ್ಲಾಪೂರ, ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ, ಹೇಮಾದೇವಿ ಕವಾಡ ಹಾಗೂ ಪ್ರಥ್ವಿರಾಜ್ ಬಾಫಣಾ, ಬಾವೇಶ, ಪ್ರಿಯಲ್ ಕವಾಡ, ಶೈಲೇಶ್ ಬಾಗಮಾರ, ಪರವೀನ್ ಸಂಕಲೇಚಾ, ಮೋಹಿತ್, ಅಕ್ಷತಾ ಕವಾಡ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಆರ್.ಬಿ. ಹೊಸಮನಿ, ಹೇಮಲತಾ ಆಸಂಗಿ ಹಾಗೂ ಶಿಕ್ಷಕಿಯರಾದ ಪವಿತಾ ಹಿರೇಮಠ, ಸರ್ವಮಂಗಳಾ ಗುಜಮಾಗಡಿ ಸೇರಿದಂತೆ ಶಾಲೆಯ ಮಕ್ಕಳ ಪಾಲಕ ಪೋಷಕರು ಭಾಗವಹಿಸಿದ್ದರು. ಮೂರೂ ಶಾಲೆಗಳ ವತಿಯಿಂದ ದಾನಿಗಳನ್ನು ಸನ್ಮಾನಿಸಲಾಯಿತು. ಉತ್ತಮಕುಮಾರ ಜೈನ್, ಪ್ರಕಾಶ ತುಂಬರಮಟ್ಟಿ, ನಾಗೇಶ ಕುಂಬಾರ, ರವಿಕಿರಣ ಹುಬ್ಬಳ್ಳಿ, ಸಂತೋಷ ಸಂಗೋಳ್ಳಿ, ಸವಿತಾ ಮಾನೇದ, ಸುಪ್ರಿಯಾ ಬಾಗಲಕೋಟಮಠ, ಮಲ್ಲಮ್ಮ ಹೊನ್ನಕೇರಿ, ಶರೀಫ ನದಾಫ ಮುಂತಾದವರಿದ್ದರು. ಮುಖ್ಯೋಪಾಧ್ಯಾಯರಾದ ವಿಜಯಾ ಜಕರಡ್ಡಿ ಸ್ವಾಗತಿಸಿದರು. ಕಾವ್ಯಾ ದಂಡಿನ ನಿರೂಪಿಸಿದರು.

ಶಿಕ್ಷಕಿ ಸುನಂದಾ ಕುಂಟೋಜಿ ವಂದಿಸಿದರು.