ಪುಷ್ಪಗಿರಿ ಕ್ಷೇತ್ರದಿಂದ ಸಮಾಜದ ಸೇವೆ : ಪುಷ್ಪಗಿರಿ ಶ್ರೀಗಳು

| Published : Oct 01 2024, 01:18 AM IST

ಪುಷ್ಪಗಿರಿ ಕ್ಷೇತ್ರದಿಂದ ಸಮಾಜದ ಸೇವೆ : ಪುಷ್ಪಗಿರಿ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ದೇಶದಲ್ಲಿ ಹಲವಾರು ಧರ್ಮ, ಜಾತಿ ಪಂಗಡಗಳು ಹೊಂದಿದ್ದು ಆಯಾಯ ಕ್ಷೇತ್ರಕ್ಕೆ ಧರ್ಮಗಳ ಪಾಲನೆ ಮಾಡುತ್ತಾ ಬರುತ್ತಿದ್ದಾರೆ. ಆದರೆ ನಮ್ಮ ಕ್ಷೇತ್ರ ಎಲ್ಲಾ ಧರ್ಮಕ್ಕೂ ಅವಲಂಬನೆ ಒಳಗೊಂಡು ಕ್ಷೇತ್ರವಾಗಿದೆ.

ಕನ್ನಡಪ್ರಭ ವಾರ್ತೆ ಹಳೇಬೀಡು

ಪುಷ್ಪಗಿರಿ ಮಹಾ ಸಂಸ್ಥಾನದ ಚಿಕ್ಕಮಗಳೂರಿನ ಐದು ಎಕರೆ ಜಮೀನಲ್ಲಿ ಸಮಾಜದ ಏಳಿಗೆಗಾಗಿ ನಮ್ಮ ಸಂಸ್ಥಾನದಿಂದ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಲಾಗುವುದು ಎಂದು ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದರು.

ಇಲ್ಲಿನ ಪುಷ್ಪಗಿರಿ ಮಹಾ ಸಂಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಗ್ರಹಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಪುಷ್ಪಗಿರಿ ಕ್ಷೇತ್ರವು ಎಲ್ಲಾ ಸಮಾಜದ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಇದು ಜಾತಿ ಪದ್ಧತಿ ಹೊರಪಡಿಸಿದ ಕ್ಷೇತ್ರವಾಗಿದೆ. ಸಮಾಜದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಆದರ್ಶ, ಶಾಂತಿ, ಸಮಯ ಪಾಲನೆ ಅತಿ ಮುಖ್ಯವಾಗಿರಬೇಕು ತನ್ನ ವೈಯಕ್ತಿಕ ವಿಷಯದಿಂದ ಸಮಾಜವನ್ನು ಹಾಳ ಮಾಡಬಾರದು. ಉದಾಹರಣೆ ಜೇನುತುಪ್ಪವನ್ನು ನೆಕ್ಕಿದರೆ ಸಿಹಿ ಬರುವುದು ಅದರ ಹಿಂದೆ ಎಷ್ಟು ಮುಳ್ಳು ಇರುತ್ತದೆ ಎಂಬುದರ ಯೋಚನೆ ಇರಬೇಕು.

ಭಾರತ ದೇಶದಲ್ಲಿ ಹಲವಾರು ಧರ್ಮ, ಜಾತಿ ಪಂಗಡಗಳು ಹೊಂದಿದ್ದು ಆಯಾಯ ಕ್ಷೇತ್ರಕ್ಕೆ ಧರ್ಮಗಳ ಪಾಲನೆ ಮಾಡುತ್ತಾ ಬರುತ್ತಿದ್ದಾರೆ. ಆದರೆ ನಮ್ಮ ಕ್ಷೇತ್ರ ಎಲ್ಲಾ ಧರ್ಮಕ್ಕೂ ಅವಲಂಬನೆ ಒಳಗೊಂಡು ಕ್ಷೇತ್ರವಾಗಿದೆ. ಉದಾಹರಣೆ ಪುಷ್ಪಗಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಮುಸ್ಲಿಂ ಸಮುದಾಯವರಿಗೂ ಸಹಕಾರವನ್ನು ನೀಡುತ್ತಾ ಬಂದಿರುವ ಏಕೈಕ ಸಂಸ್ಥೆ ಪುಷ್ಪಗಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇಲ್ಲಿ ಜಾತಿಯ ಹೊರಪಡಿಸಿ ಸಮಾಜದ ಕೆಲಸ ಆಗಬೇಕು. ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣಬೇಕು. ಸಮಾಜದಲ್ಲಿ ಯಾವ ಅಧಿಕಾರದ ದಾಹವನ್ನು ಇಟ್ಟುಕೊಳ್ಳಬಾರದು ಆಗ ಸಮಾಜ ಅಭಿವೃದ್ಧಿ ಕಾಣುತ್ತದೆ.ನಮ್ಮ ಹಿಂದಿನ ಋಷಿ-ಮುನಿಗಳು ಸಮಾಜಕ್ಕೆ ಕೆಲಸ ಮಾಡಿದ್ದಾರೆ. ಜಾತಿ ಚರ್ಚೆ ಅವಶ್ಯಕತೆ ಇಲ್ಲ ಎಲ್ಲರೂ ಒಂದೇ ಸಮಾಜದ ಏಳಿಗೆಗಾಗಿ ಕಷ್ಟಪಡುವ ವ್ಯಕ್ತಿಯನ್ನು ಆಯ್ಕೆ ಮಾಡಿ. ಪುಷ್ಪಗಿರಿ ಮಹಾ ಸಂಸ್ಥಾನದಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಆಸ್ಪತ್ರೆ ಕಾರ್ಯಕೈಗೊಂಡಿದೆ ಅದರ ಸಹಕಾರ ಇರಬೇಕು ಎಂದು ತಿಳಿಸಿದರು.

ಬೇಲೂರು ಕ್ಷೇತ್ರ ಶಾಸಕ ಎಚ್.ಕೆ. ಸುರೇಶ್ ಮಾತನಾಡುತ್ತಾ, ಕರ್ನಾಟಕ ರಾಜ್ಯದಲ್ಲಿ ಸಿದ್ದಗಂಗಾ ಮಠ, ತೆರಳು ಬಾಳು ಮಠ ಹಾಗೂ ಜೆ.ಎಸ್.ಎಸ್ ಮಠಗಳಿಂದ ಹಲವಾರು ಜನರು ವಿದ್ಯಾಭ್ಯಾಸ ಜೊತೆಗೆ ಜೀವನದ ಪಾಠ, ಒಳ್ಳೆಯ ಹುದ್ದೆಯನ್ನು ಸ್ವೀಕರಿಸಿದ್ದಾರೆ. ಸಿದ್ದಗಂಗಾ ಸ್ವಾಮಿಗಳನ್ನು ನಡೆದಾಡುವ ದೇವರು ಅವರು ವ್ಯಕ್ತಿಯಾಗಿ ಕೆಲಸವನ್ನು ಮಾಡಿದ್ದಾರೆ. ತರಳುಬಾಳು ಸ್ವಾಮಿಗಳು ಸಮಯದ ಪಾಲನೆ ನ್ಯಾಯದ ಸಿದ್ಧಾಂತವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಜೆ.ಎಸ್.ಎಸ್ ಶ್ರೀಗಳು ವಿದ್ಯೆಗೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದಾರೆ. ಅದೇ ರೀತಿಯಲ್ಲಿ ಪುಷ್ಪಗಿರಿ ಮಹಾ ಸಂಸ್ಥಾನವು ಕರ್ನಾಟಕ ರಾಜ್ಯದಲ್ಲಿ ಶ್ರೀ ಪುಷ್ಪಗಿರಿ ಗ್ರಾಮೀಣ ಅಭಿವೃದ್ಧಿಯ ಸ್ವಸಹಾಯ ಸಂಘವನ್ನು ತೆರೆದು ರಾಜ್ಯಾದ್ಯಂತ ಕೆಲಸವನ್ನು ಮಾಡುತ್ತ ಬಂದಿರುವುದು ಸಂತೋಷದ ವಿಚಾರವಾಗಿದೆ. ಈ ಕ್ಷೇತ್ರವು ಯಾವ ಧರ್ಮಕ್ಕೂ ಸೇರದ ಕ್ಷೇತ್ರವಾಗಿದೆ ಎಂದು ಶ್ರೀಗಳು ಪದೇ ಪದೆ ತಿಳಿಸುತ್ತಾ ಬಂದಿರುವುದು ಸಂತೋಷ ವಿಚಾರವಾಗಿದೆ.

ಈ ಸಮಾಜದ ಏಳಿಗೆಗಾಗಿ ದುಡಿಯುತ್ತೇನೆ. ನಾನು ಶಾಸಕನಾಗಲು ಇಲ್ಲಿಯ ಸಮಾಜ ಹಾಗೂ ಅನ್ಯ ಸಮಾಜ ಸಹಕಾರ ನೀಡಿದೆ. ನಿಮ್ಮ ಸೇವೆಗಾಗಿ ಸದಾ ಸಿದ್ಧನಾಗಿರುತ್ತೇನೆ. ನಮ್ಮ ಧೀಮಂತ ನಾಯಕ ಯಡಿಯೂರಪ್ಪ ಕಾಲದಲ್ಲಿ ಅಭಿವೃದ್ಧಿಯ ಕೆಲಸ ಹಲವಾರು ಮಠಮಾನ್ಯಗಳಿಗೆ, ಸಂಘ ಸಂಸ್ಥೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದ ವ್ಯಕ್ತಿ ಎಂದರು.

ಅಖಿಲ ಭಾರತ ವೀರ ಶೈವ ಲಿಂಗಾಯತ ಬೇಲೂರು ಘಟಕದ ಅಧ್ಯಕ್ಷ ಬಸವರಾಜು ಮಾತನಾಡುತ್ತಾ, ನಾನು ಚಿಕ್ಕನಿಂದಲೂ ಸಂಘ ಸಂಸ್ಥೆಯಲ್ಲಿ ಬೆಳೆದ ವ್ಯಕ್ತಿ. ಹಲವಾರು ಅಭಿವೃದ್ಧಿ ಸಮಿತಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ನನ್ನನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಬೇಲೂರು ಘಟಕದ ಅಧ್ಯಕ್ಷರಾಗಿ ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತಾ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಬೇಲೂರು ಕ್ಷೇತ್ರ ಒಳ್ಳೆಯ ಹೆಸರನ್ನು ತರಬೇಕು ಎಂಬುದು ನನ್ನ ಕನಸು. ಮುಂದಿನ ದಿನಗಳಲ್ಲಿ ಕ್ಷೇತ್ರದಿಂದ ೧೦,೦೦೦ ಸದಸ್ಯತ್ವ ಕೆಲಸವನ್ನು ಮಾಡಿ ರಾಜ್ಯದಲ್ಲಿ ಸನ್ಮಾನ ಸ್ವೀಕರಿಸುತ್ತೇನೆ ಎಂದು ವೇದಿಕೆಯಲ್ಲಿ ತಿಳಿಸಿದರು.

ಇದೇ ವೇಳೆ ಸಮಾಜದ ಮುಖಂಡರಾದ ನವಿಲೇ ಪರಮೇಶ್, ರಾಜೇಶ್ವರಿ ನಾಗರಾಜು, ಶಿವಪ್ಪ, ಕಟ್ಟಾಯ ಶಿವಕುಮಾರ್‌, ಚಿಕ್ಕಣಗಾಲು ಅಜೀತ್, ಹಾಗೂ ಚೇತನ್, ಪ್ರಸನ್ನ, ಎಚ್.ಪರಮೇಶ್ ಎಲ್ಲಾ ಮುಖಂಡರು ಹಾಜರಿದ್ದರು.