ಪ್ರತಿಭೆ ಅನಾವರಣಕ್ಕೆ ಸ್ಪರ್ಧೆಗಳು ಪೂರಕ: ಮಹೇಶ ಹೆಗಡೆ

| Published : Aug 26 2024, 01:34 AM IST

ಸಾರಾಂಶ

ಮುಂಡಗೋಡದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನವಚೇತನ ಯುವಕ ಮಂಡಳ ಟ್ರಸ್ಟ್‌ನ ಆಶ್ರಯದಲ್ಲಿ ಬಾಲಕೃಷ್ಣನ ವೇಷಭೂಷಣ ಸ್ಪರ್ಧೆ ನಡೆಯಿತು.

ಮುಂಡಗೋಡ: ಮಕ್ಕಳಿಗಾಗಿ ಹೆಚ್ಚೆಚ್ಚು ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಹಾಕಲು ಸಹಕಾರಿಯಾಗುತ್ತದೆ. ಅಲ್ಲದೇ ಮಕ್ಕಳಲ್ಲಿ ವೇದಿಕೆ ಸಾಮರ್ಥ್ಯ ಕೂಡ ಬರುತ್ತದೆ ಎಂದು ಉದ್ಯಮಿ ಮಹೇಶ ಹೆಗಡೆ ತಿಳಿಸಿದರು.ಶನಿವಾರ ಸಂಜೆ ಪಟ್ಟಣದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನವಚೇತನ ಯುವಕ ಮಂಡಳ ಟ್ರಸ್ಟ್‌ನ ಆಶ್ರಯದಲ್ಲಿ ನಡೆದ ಬಾಲಕೃಷ್ಣನ ವೇಷಭೂಷಣ ಸ್ಪರ್ಧೆ ಹಾಗೂ ಯಶೋದಾ ಮಯ್ಯಾ ರೂಪಕ ಸ್ಪರ್ಧೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪಪಂ ಮಾಜಿ ಅಧ್ಯಕ್ಷ ಎಂ.ಕೆ. ಗಡವಾಲೆ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ಸಾಮಾನ್ಯವಾದ ಕೆಲಸವಲ್ಲ ಎಂದ ಅವರು, ಸತತ ೩೫ ವರ್ಷಗಳಿಂದ ಪ್ರತಿವರ್ಷ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಸಂಘಟಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನವಚೇತನ ಯುವಕ ಮಂಡಳ ಟ್ರಸ್ಟ್‌ನ ಅಧ್ಯಕ್ಷ ಮಾರುತಿ ಓಂಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ವ್ಯವಸ್ಥಾಪಕ ಡಾ. ಕಿರಣ ಹೂಲಗೂರ, ಅಗರವಾಲ್ ಐ ಕೇರ್ ವ್ಯಪಸ್ಥಾಪಕ ಪ್ರತಾಪ, ಶ್ರೀಧರ ಛಬ್ಬಿ, ಸತೀಶ ಹರಿಹರ, ಮಂಜುನಾಥ ಕುಲಮಕರ, ಜಗದೀಶ ವಾಲಿಶೆಟ್ಟರ ಉಪಸ್ಥಿತರಿದ್ದರು. ಅದಿತಿ ಕಾನಡೆ ಪ್ರಾರ್ಥನೆ ಗೀತೆ ಹಾಡಿದರು. ಟ್ರಸ್ಟ್‌ನ ಸದಸ್ಯ ಜಗದೀಶ ಕಾನಡೆ ಸ್ವಾಗತಿಸಿದರು. ದಿನೇಶ ವೆರ್ಣೇಕರ ನಿರೂಪಿಸಿದರು. ಮಂಜುನಾಥ ಎಚ್. ಕಲಾಲ ವಂದಿಸಿದರು. ಪ್ರಶಸ್ತಿ ವಿಜೇತರು: ಬಾಲಕೃಷ್ಣ ವೇಷಭೂಷಣ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಆದ್ಯಾ ರಾಘವೇಂದ್ರ ರಾಯ್ಕರ, ದ್ವಿತೀಯ ಬಹುಮಾನವನ್ನು ತ್ರಿಷಾ ರಾಜು ಇಂಗಳೆ, ತೃತೀಯ ಬಹುಮಾನವನ್ನು ಸಾತ್ವಿಕಾ ರಾಜೇಶ ನಿಡಗುಂದಿ ಪಡೆದರು.ಹಿರಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಧನ್ವಿ ವೈ. ಭುಜಂಗಿ, ದ್ವಿತೀಯ ಬಹುಮಾನವನ್ನು ಅಮೂಲ್ಯ ನಾರಾಯಣ ದೈವಜ್ಞ, ತೃತೀಯ ಬಹುಮಾನವನ್ನು ಅಜಯಸೂರ್ಯ ಎ.ಕೆ. ಗಳಿಸಿದರು.ಯಶೋದಾ ಮಯ್ಯಾ ರೂಪಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪೂಜಾ, ತಾಯಿ- ರಿಶಿತ ರಾಂಪುರೆ, ದ್ವಿತೀಯ ಬಹುಮಾನವನ್ನು ವೃಷ್ಥಿ, ತಾಯಿ- ಅರುಣಾ ಪಿ.ಕೆ., ತೃತೀಯ ಬಹುಮಾನವನ್ನು ಭುವನ, ತಾಯಿ- ಶ್ವೇತಾ ಎನ್. ಮಡಿವಾಳರ ಪಡೆದರು. ವಿನಾಯಕ ಶೇಟ್, ದಯಾನಂದ ನಾಯ್ಕ, ವಿದ್ಯಾ ಸಣ್ಣಕ್ಕಿ, ಶಶಿಕಾಂತ ರಾಠೋಡ, ಪಾಂಡುರಂಗ ಟಿಕ್ಕೋಜಿ ಹಾಗೂ ಕವಿತಾ ಚವ್ಹಾಣ ಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಬಾಲಕೃಷ್ಣ ವೇಷಭೂಷಣ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ೨೨ ಹಾಗೂ ಹಿರಿಯರ ವಿಭಾಗದಲ್ಲಿ ೩೨ ಸ್ಪರ್ಧಾಳುಗಳು ಭಾಗವಹಿಸಿದ್ದರೆ, ಯಶೋದಾ ಮಾಯ್ಯಾ ರೂಪಕ ಸ್ಪರ್ಧೆಯಲ್ಲಿ ೩ ಸ್ಪರ್ಧಾಳುಗಳು ಭಾಗವಹಿಸಿದ್ದರು.