ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಅಗತ್ಯ

| Published : Apr 29 2024, 01:41 AM IST

ಸಾರಾಂಶ

ಇಂದಿನ ವಿದ್ಯಾರ್ಥಿಗಳಲ್ಲಿ ಓದು ಬರಹದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನೋಭಾವನೆ ಅಗತ್ಯವಾಗಿದೆ ಎಮದು ಎಂದು ಶ್ರೀ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಇಂದಿನ ವಿದ್ಯಾರ್ಥಿಗಳಲ್ಲಿ ಓದು ಬರಹದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನೋಭಾವನೆ ಅಗತ್ಯವಾಗಿದೆ ಎಮದು ಎಂದು ಶ್ರೀ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಹೇಳಿದರು.

ಪಟ್ಟಣದ ಎಸ್.ಎಸ್.ವಿದ್ಯಾ ಸಂಸ್ಥೆಯ ಶ್ರೀ ಎಚ್.ಎಸ್.ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾ ವಿದ್ಯಾಲಯ ಹಾಗೂ ಪ್ರಗ್ಯಾ ಐಐಟಿ ಮೆಡಿಕಲ್ ಅಕಾಡೆಮಿ ದಾವಣಗೇರಿ ಇವರ ವತಿಯಿಂದ ಪಿಯುಸಿ ಸೈನ್ಸ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಟ್ಯಾಲೆಂಟ್ ಸರ್ಚ್ ಎಕ್ಸಾಂ-೨೦೨೪ ಪರೀಕ್ಷಾ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟುವಾಗ ಏನು ಇರುವುದಿಲ್ಲ. ಹುಟ್ಟಿದ ಮೇಲೆ ಹೆಸರು ಬರುತ್ತದೆ. ಆ ಹೆಸರು ಚಿರಸ್ಮರಣೀಯವಾಗಿ ಉಳಿಯುವಂತೆ ಬದುಕಬೇಕು. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹಜವಾಗಿದೆ. ಅದನ್ನು ಮೆಟ್ಟಿ ನಿಲ್ಲುವಂತಹ ಸ್ಪರ್ಧೆಗಳಲ್ಲಿ ಒಂದಾಗಿರುವ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ದೇಶದ ಇತಿಹಾಸ ಪುಟಗಳಲ್ಲಿ ಉಳಿಯುವಂತಹ ಕಾರ್ಯ ವಿಧ್ಯಾರ್ಥಿಗಳು ಮಾಡಬೇಕು. ಪಾಲಕರು ಮಕ್ಕಳಿಗೆ ಓದು ಬರಹ ಕಲಿಸಿದರೆ ಸಾಲದು ಇಂತಹ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪ್ರೇರೇಪಿಸುವಂತಹ ಕೆಲಸ ಮಾಡಬೇಕು. ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರಿಯ ಪ್ರಗ್ಯಾ ನೀಟ್-ಮೆಡಿಕಲ್ ಅಕಾಡೆಮಿಯ ಪ್ರಗ್ಯಾ ನೀಟ್ ಮತ್ತು ಮೆಡಿಕಲ್ ಅಕಾಡೆಮಿ ದಾವಣಗೆರೆಯ ನಿರ್ದೇಶಕ ಸಾಗರ ನಯ್ಯಮ್ ಅವರು ಮಾತನಾಡಿ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ತಪ್ಪು ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಅವರನ್ನು ಸರಿದಾರಿಗೆ ತರುವ ಕಾರ್ಯ ಮಾಡಬೇಕಾಗಿದೆ. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ಉನ್ನತ ಶಿಕ್ಷಣದ ಕಡೆಗೆ ವಿದ್ಯಾರ್ಥಿಗಳು ದಾಪುಗಾಲು ಹಾಕಬೇಕು ಎಂದು ಹೇಳಿದರು.ಇನ್ನೋರ್ವ ಅತಿಥಿ ಬೆಂಗಳೂರಿನ ಮೈಪಾಲ್‌ ಸಂಸ್ಥೆಯ ಎಚ್‌ಒಡಿ ರಮೇಶ ಬಿ.ಕೆ. ಅವರು ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂತಹ ಪರೀಕ್ಷೆಗಳು ಅಗತ್ಯವಾಗಿದೆ. ಬಡವ, ಶ್ರೀಮಂತರೆನ್ನದೇ ಎಲ್ಲರನ್ನು ಸಮಾನರನ್ನಾಗಿ ಕರೆದುಕೊಂಡು ಹೋಗುವಂತಹ ಕೆಲಸಗಳನ್ನು ಮಾಡಲು ಎಚ್.ಎಸ್.ಪಾಟೀಲ ಶಿಕ್ಷಣ ಸಂಸ್ಥೆಯು ಯಾವಾಗಲು ಮುಂದೆ ಸಾಗಿದೆ. ನೀಟ್-ಜೆಇಇ-ಸಿಇಟಿ ಕೋಚಿಂಗ್‌ಗಾಗಿ ದೂರದ ಊರಿಗೆ ಅಲೆದಾಡುವದನ್ನು ತಪ್ಪಿಸಲು ಕಾಲೇಜಿನಲ್ಲಿಯೇ ಉತ್ತಮ ನುರಿತ ತಜ್ಞ ಶಿಕ್ಷಕರೊಂದಿಗೆ ಮುಂದಾಗಿರುವದು ಸಂತಸದ ಸಂಗತಿಯಾಗಿದೆ ಎಂದರು.

ಇದೇ ಸಮಯದಲ್ಲಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇ.೯೭ ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ ಭವಾನಿ ಘೋರ್ಪಡೆ, ಮಲ್ಲಿಕಾರ್ಜುನ ಚಿಕ್ಕಮಠ, ಶಿವರಾಜ ಪೂಜಾರಿ, ಝಮೀರಾ ಅವಟಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಸ್.ಎಸ್.ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಚಿನ ಎಚ್.ಪಾಟೀಲ ಅವರು ವಹಿಸಿದ್ದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದೇ ಸಮಯದಲ್ಲಿ ಬಿ.ಕೆ.ಅಕಾಡೆಮಿಯ ಡೀನ್‌ ಐಐಟಿ ಮಾಸ್ಟರ್ ರಮೇಶ ಮಾತನಾಡಿದರು. ವೇದಿಕೆಯ ಮೇಲೆ ಕಿರಣ ಎಚ್ ಪಾಟೀಲ. ರವಿ ಪಾಟೀಲ, ಐ ಮಾಸ್ಟರ್ ಅಕಾಡೆಮಿಯ ನಿರ್ದೇಶಕರಾದ ವಿರೇಶ ಬಳ್ಳೂರ, ಮೈಪಾಲ ಸಂಸ್ಥೆಯ ಮಯೂರ, ಮೊದಲಾದವರು ಉಪಸ್ಥಿತರಿದ್ದರು. ಶ್ರುತಿ ಕೊಳೂರ ಪ್ರಾರ್ಥಿಸಿದರು. ಎಸ್.ವ್ಹಿ.ಜಾಮಗೊಂಡಿ ಸ್ವಾಗತಿಸಿದರು. ಶಿಕ್ಷಕ ಬಿ.ಆಯ್. ಹಿರೇಹೊಳಿ ನಿರೂಪಿಸಿ ವಂದಿಸಿದರು.