ಸಾರಾಂಶ
ಅಕ್ರಮ ಸಕ್ರಮ ಯೋಜನೆಯಡಿ ಕೃಷಿ ನಿರಾವರಿ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕಕ್ಕೆ ಕಂಬ ಹಾಗೂ ವಿದ್ಯುತ್ ಪರಿವರ್ತಕ ಅಳವಡಿಸಲು ತಾಲೂಕಿನ ಬೆಸ್ಕಾಂ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಹಿರಿಯ ಗುತ್ತಿಗೆದಾರ ಭಾನುವಳ್ಳಿ ಮಂಜುನಾಥ್ ಹರಿಹರದಲ್ಲಿ ಆರೋಪಿಸಿದ್ದಾರೆ.
ಹರಿಹರ: ಅಕ್ರಮ ಸಕ್ರಮ ಯೋಜನೆಯಡಿ ಕೃಷಿ ನಿರಾವರಿ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕಕ್ಕೆ ಕಂಬ ಹಾಗೂ ವಿದ್ಯುತ್ ಪರಿವರ್ತಕ ಅಳವಡಿಸಲು ತಾಲೂಕಿನ ಬೆಸ್ಕಾಂ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಹಿರಿಯ ಗುತ್ತಿಗೆದಾರ ಭಾನುವಳ್ಳಿ ಮಂಜುನಾಥ್ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ ಘೋಷಿಸಿದ್ದ ಯೋಜನೆಯಡಿ ರೈತರು ಪಂಪ್‍ಸೆಟ್‍ಗಳ ವಿದ್ಯುತ್ ಸಕ್ರಮಕ್ಕೆ ದಂಡ, ಇನ್ನಿತರೆ ಶುಲ್ಕದ ರೂಪದಲ್ಲಿ ತಲಾ ₹18 ಸಾವಿರ ಪಾವತಿಸಿ, ಆರ್.ಆರ್. ನಂಬರ್ ಪಡೆದಿದ್ದಾರೆ. ಆದರೀಗ ವಿದ್ಯುತ್ ಕಂಬ, ಕೇಬಲ್, ಟಿಸಿ ಅಳವಡಿಕೆಗೆ ಲಂಚ ಕೇಳುತ್ತಿದ್ದಾರೆ ಎಂದರು.ಅತಿವೃಷ್ಟಿ, ಅನಾವೃಷ್ಟಿ ತೊಂದರೆ, ಕೃಷಿ ಖರ್ಚುಗಳಿಂದಾಗಿ ರೈತರು ಸಾಲದ ಸುಳಿಗೆ ಸಿಲುಕಿ ಹೈರಾಣಾಗಿದ್ದಾರೆ. ಹಣ ನೀಡಲು ಆಗದ ರೈತರಿಗೆ ಈಗ ಕಂಬಗಳಿಲ್ಲ, ಪರಿಕರಗಳು ಬಂದಿಲ್ಲ. ಸಮೀಪದ ಟಿಸಿಗಳಿಂದ ಬೇಕಿದ್ದರೆ ಸಂಪರ್ಕ ಕಲ್ಪಿಸಿಕೊಳ್ಳಿ ಎಂದು ಸಬೂಬು ಹೇಳುತ್ತಿದ್ದಾರೆ. ರೈತರ ಶೋಷಿಸುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ, ತನಿಖೆ ಕೈಗೊಳ್ಳುವಂತೆ ಬೆಸ್ಕಾಂ ನಿರ್ದೆಶಕರಿಗೆ ದೂರು ನೀಡಲಾಗುವುದು ಎಂದರು.
ಗುತ್ತಿಗೆದಾರ ಬಸವರಾಜ್ ಗೋಷ್ಠಿಯಲ್ಲಿ ಭಾಗವಹಿಸಿದ್ದರು.- - - -19ಎಚ್‍ಆರ್‍ಆರ್05: