ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರುನಕಲಿ ಆಧಾರ್ ಕಾರ್ಡ್ ತಯಾರಿಸಿ ಕೊಡುತ್ತಿದ್ದಾರೆಂಬ ದೂರಿನ ಮೇಲೆ ತಾಲೂಕಿನ ಬಿಕ್ಕೋಡು ಸೈಬರ್ ಕೇಂದ್ರ ಹಾಗೂ ಗ್ರಾಮ ಒನ್ ಸೆಂಟರ್ ಮೇಲೆ ತಹಸೀಲ್ದಾರ್ ದಾಳಿ ನಡೆಸಿ ಪರಿಶೀಲಿಸಿದರು.ಬಿಕ್ಕೋಡಿನ ಕರ್ನಾಟಕ ಜೆರಾಕ್ಸ್ ಆಂಡ್ ಕಂಪ್ಯೂಟರ್ ಸೆಂಟರ್ ಹಾಗೂ ಗ್ರಾಮ ಒನ್ ಕೇಂದ್ರ ಪರಿಶೀಲಿಸಿದರು. ಹಾಸನ ಜಿಲ್ಲೆಯಲ್ಲಿ ನಖಲಿ ಆಧಾರ್ ಕಾರ್ಡುಗಳ ಹಾವಳಿ ಹೆಚ್ಚಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲಾ ತಹಸೀಲ್ದಾರ್ ಅವರಿಗೆ ಪರಿಶೀಲನೆಗೆ ಸ್ಪಷ್ಟ ಸೂಚನೆ ನೀಡಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಮಮತಾ ಅವರು, ಬಿಕ್ಕೋಡು ಉಪ ತಹಸೀಲ್ದಾರ್ ಪ್ರದೀಪ್, ಅರೇಹಳ್ಳಿ ಪಿಎಸ್‌ಐ ಶೋಭ ಅವರೊಂದಿಗೆ ದಾಳಿ ನಡೆಸಿ ಪರಿಶೀಲಿಸಿದರು. ಹೊರ ರಾಜ್ಯದವರಿಗೆ ನಖಲಿ ದಾಖಲೆಗಳ ಸೃಷ್ಠಿಸಿ, ಅಧಿಕಾರಿಗಳ ಸಹಿಯನ್ನು ಫೋರ್ಜರಿ ಮಾಡಿ, ನಖಲಿ ಆಧಾರ್ ಮಾಡಿಕೊಡುತ್ತಿರುವ ಬಗ್ಗೆ ದೂರು ಬಂದಿದ್ದು ನಖಲಿ ಆಧಾರ್ ಕಾರ್ಡುಗಳ ಮಾಡಿಕೊಡಬಾರದೆಂದು ಒಂದು ವೇಳೆ ಮಾಡಿಕೊಟ್ಟರೆ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಜೆರಾಕ್ಸ್ ಸೆಂಟರ್ ಮಾಲೀಕ ಮೂರ್ತಿ ಹಾಗೂ ಗ್ರಾಮ ಒನ್ ಕೇಂದ್ರದ ದೀಕ್ಷಿತ್ ಕುಮಾರ್ ಅವರಿಗೆ ಎಚ್ಚರಿಕೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್, ಬಿಕ್ಕೋಡು, ಅರೇಹಳ್ಳಿ ಭಾಗದಲ್ಲಿ ಹೊರರಾಜ್ಯದಿಂದ ಬಂದಿರುವ ಕೂಲಿಕಾರ್ಮಿಕರಿಗೆ ಇತರರಿಗೆ ದಲ್ಲಾಳಿಗಳ ಮೂಲಕ ನಖಲಿ ಆಧಾರ್ ಕಾರ್ಡುಗಳನ್ನು ಮಾಡಿಕೊಡುತ್ತಿದ್ದಾರೆಂದು ದೂರು ಬಂದಿದ್ದರಿಂದ ದಾಳಿ ನಡೆಸಲಾಗಿದೆ. ಆಧಾರ್ ಕಾರ್ಡ್ ಮಾಡಿಕೊಡಲು ಅಗತ್ಯವಿರುವ ಕೆಲವೊಂದು ಜೆರಾಕ್ಸ್ ದಾಖಲೆಗಳಿಗೆ ಅಧಿಕಾರಿಗಳು, ವೈದ್ಯರು ಸಹಿ ಮಾಡಿಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಸೈಬರ್ ಸೆಂಟರ್‌ನವರು ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆ ಖಲೆಗಳ ಜೆರಾಕ್ಸ್ ಪ್ರತಿಗೆ ಸಹಿ ಹಾಕುವ ಮುಂಚೆ ಮೂಲ ದಾಖಲೆ ಪರಿಶೀಲಿಸದೆ ಸಹಿ ಹಾಕಬಾರದೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆಧಾರ್ ಕಾರ್ಡು ಪಡೆದವರ ಮೂಲ ದಾಖಲಾತಿ ಪರಿಶೀ. ದಾಖಲೆಗಳ ಜೆರಾಕ್ಸ್ ಪ್ರತಿಗೆ ಸಹಿ ಹಾಕುವ ಮುಂಚೆ ಮೂಲ ದಾಖಲೆ ಪರಿಶೀಲಿಸದೆ ಸಹಿ ಹಾಕಬಾರದೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆಧಾರ್ ಕಾರ್ಡು ಪಡೆದವರ ಮೂಲ ದಾಖಲಾತಿ ಪರಿಶೀಲಿಸಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಕಾಫಿ ಬೆಳೆಗಾರ ಅಭಿಗೌಡ, ಬೇಲೂರು ತಾಲೂಕಿನಲ್ಲಿ ಅಸ್ಲಾಂ, ಬಾಂಗ್ಲಾ ಮೂಲದ ವ್ಯಕ್ತಿಗಳು ಇದ್ದಾರೆ. ಕಾಫಿ ತೋಟದ ಕೆಲಸಕ್ಕೆಂದು ಇಲ್ಲಿಗೆ ಬಂದು ಸೇರಿಕೊಂಡಿದ್ದಾರೆ. ಇವರುಗಳು ಇಲ್ಲದಿದ್ದರೆ ಬೆಳೆಗಾರರಿಗೆ ತೊಂದರೆ ಏನೂ ಆಗುವುದಿಲ್ಲ. ಜೀವನೋಪಾಯಕ್ಕಾಗಿ ಶೇ.೨೦ ಜನರ ಬಂದರೆ ದೇಶದ್ರೋಹದ ಕೆಲಸಕ್ಕೆ ಶೇ.೮೦ ಬರುತ್ತಾರೆ. ಇವರುಗಳ ಬಗ್ಗೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಗಮನ ಹರಿಸಬೇಕಿದೆ ಎಂದರು.