ನಕಲಿ ವೈದ್ಯಕೀಯ ಪ್ರಮಾಣ ಪತ್ರ ಮಾರುತ್ತಿದ್ದ ವ್ಯಕ್ತಿಯ ವಿರುದ್ಧ ದೂರು

| Published : Sep 08 2025, 01:00 AM IST

ಸಾರಾಂಶ

ಡಿ.ಚಂದರ್ ಎಂಬುವರು ದೃಢೀಕರಣ ಪ್ರಮಾಣ ಪತ್ರಗಳಿಗೆ ವೈದ್ಯರ ನಕಲಿ ಸಹಿ ಹಾಗೂ ಸೀಲ್ ಹಾಕಿ ಅಕ್ರಮವಾಗಿ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಡಿಎಲ್ ಮತ್ತು ಸರ್ಕಾರಿ ನೌಕರರು ರಜೆ ಪಡೆಯಲು ಹಾಗೂ ಇನ್ನಿತರೆ ಸರ್ಕಾರಿ ಸೌಲತ್ತುಗಳನ್ನು ಪಡೆಯಲು ಸಾರ್ವಜನಿಕರಿಗೆ ೧೦೦ ರಿಂದ ೨೦೦ ರುಪಾಯಿಗಳಿಗೆ ಮಾರಾಟ ಮಾಡುತ್ತಿದ್ದನೆಂದು ವೈದ್ಯಾಧಿಕಾರಿ ರಾಬರ್ಟ್ ಸನ್ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಕೆಜಿಎಫ್: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಡಿ.ಗ್ರೂಪ್ ನೌಕರನೊಬ್ಬ ನಕಲಿ ವೈದ್ಯಕೀಯ ಪ್ರಮಾಣ ಪತ್ರಗಳಿಗೆ ವೈದ್ಯರ ನಕಲಿ ಸಹಿ ಮತ್ತು ಸೀಲ್‌ಅನ್ನು ಹಾಕಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಕುರಿತು ಪೊಲೀಸರಿಗೆ ಸಾರ್ವಜನಿಕ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‌ ಕುಮಾರ್ ದೂರು ನೀಡಿದ್ದಾರೆ. ಎಸ್.ಟಿ.ಬ್ಲಾಕ್ ನಿವಾಸಿ ಡಿ. ಚಂದರ್ ಎಂಬುವವರ ಬೈಕ್ ನಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದ ಸೀಲ್‌ ಮತ್ತು ದೃಢೀಕರಣ ಪ್ರಮಾಣ ಪತ್ರಗಳು, ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದ ಮಾತ್ರೆಗಳು, ಔಷಧಿಗಳು ಪತ್ತೆಯಾಗಿದ್ದು, ಪೊಲೀಸರು ಸರ್ಕಾರಿ ವೈದ್ಯರ ಸಮ್ಮುಖದಲ್ಲಿ ಬೈಕ್ ನಲ್ಲಿನ ನಕಲಿ ಪತ್ರಗಳ ಮಹಜರು ನಡೆಸಿದ್ದು, ಡಿ.ಚಂದರ್ ಎಂಬುವರು ದೃಢೀಕರಣ ಪ್ರಮಾಣ ಪತ್ರಗಳಿಗೆ ವೈದ್ಯರ ನಕಲಿ ಸಹಿ ಹಾಗೂ ಸೀಲ್ ಹಾಕಿ ಅಕ್ರಮವಾಗಿ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಡಿಎಲ್ ಮತ್ತು ಸರ್ಕಾರಿ ನೌಕರರು ರಜೆ ಪಡೆಯಲು ಹಾಗೂ ಇನ್ನಿತರೆ ಸರ್ಕಾರಿ ಸೌಲತ್ತುಗಳನ್ನು ಪಡೆಯಲು ಸಾರ್ವಜನಿಕರಿಗೆ ೧೦೦ ರಿಂದ ೨೦೦ ರುಪಾಯಿಗಳಿಗೆ ಮಾರಾಟ ಮಾಡುತ್ತಿದ್ದನೆಂದು ವೈದ್ಯಾಧಿಕಾರಿ ರಾಬರ್ಟ್ ಸನ್ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.