ಮಹಾತ್ಮಗಾಂಧಿ ವೃತ್ತ, ಕಾಳಿಕಾಂಬಾ ದೇವಸ್ಥಾನ ರಸ್ತೆ, ಡಿಪೋ ರಸ್ತೆ, ಹೌಸಿಂಗ್ ಬೋರ್ಡ್ ಸರ್ಕಲ್ ಜತೆಗೆ ಅಲ್ಲಿಯ ಮುಖ್ಯ ರಸ್ತೆಯೂ ಗುಂಡಿಗಳಿಂದ ಕೂಡಿದ್ದು, ನಾಗರಿಕರ ಸಮಸ್ಯೆ ನಿರ್ವಹಣೆಯಲ್ಲಿ ಪುರಸಭೆಯ ವಿಳಂಬ ಧೋರಣೆಗೆ ನಾಗರೀಕರು ಬೇಸರ ವ್ಯಕ್ತಪಡಿಸಿ, ಪುರಸಭೆಗೆ ಮನವಿ ಪತ್ರ ನೀಡಿದ್ದಾರೆ. ಜತೆಗೆ ನಾಗರಿಕರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಶಿವಶಂಕರ್ ಅವರು ಸದ್ಯಕ್ಕೆ ತಾತ್ಕಾಲಿಕ ರಿಪೇರಿ, ಅನುದಾನ ಬಂದೊಡನೆ ನೂತನ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಹೃದಯ ಭಾಗದಲ್ಲಿರುವ ಮಹಾತ್ಮಗಾಂಧಿ ವೃತ್ತ, ಕಾಳಿಕಾಂಬಾ ದೇವಸ್ಥಾನ ರಸ್ತೆ, ಡಿಪೋ ರಸ್ತೆ, ಹೌಸಿಂಗ್ ಬೋರ್ಡ್ ಸರ್ಕಲ್ ಜತೆಗೆ ಅಲ್ಲಿಯ ಮುಖ್ಯ ರಸ್ತೆಯೂ ಗುಂಡಿಗಳಿಂದ ಕೂಡಿದ್ದು, ನಾಗರಿಕರ ಸಮಸ್ಯೆ ನಿರ್ವಹಣೆಯಲ್ಲಿ ಪುರಸಭೆಯ ವಿಳಂಬ ಧೋರಣೆಗೆ ನಾಗರೀಕರು ಬೇಸರ ವ್ಯಕ್ತಪಡಿಸಿ, ಪುರಸಭೆಗೆ ಮನವಿ ಪತ್ರ ನೀಡಿದ್ದಾರೆ. ಜತೆಗೆ ನಾಗರಿಕರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಶಿವಶಂಕರ್ ಅವರು ಸದ್ಯಕ್ಕೆ ತಾತ್ಕಾಲಿಕ ರಿಪೇರಿ, ಅನುದಾನ ಬಂದೊಡನೆ ನೂತನ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ ತಿಳಿಸಿದ್ದಾರೆ.ಪಟ್ಟಣದ ಕಾಳಿಕಾಂಬಾ ದೇವಸ್ಥಾನದ ರಸ್ತೆ ಸಂಪೂರ್ಣವಾಗಿ ಹಾಳಾಗಿ ಐದಾರು ವರ್ಷಗಳೇ ಕಳೆದಿದ್ದರೂ ಸರಿಪಡಿಸದ ಪುರಸಭೆಯ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ಹೊರಹಾಕಿರುವ ನಾಗರಿಕರು, ಪುರಸಭೆ ಕಚೇರಿಗೆ ಆಗಮಿಸಿ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ತಮ್ಮ ಅಳಲನ್ನು ತೋಡಿಕೊಂಡರು. ಮುಖ್ಯಾಧಿಕಾರಿ ಶಿವಶಂಕರ್ ಮನವಿ ಸ್ವೀಕರಿಸಿ ಮಾತನಾಡಿ, ಸದ್ಯ ಪುರಸಭೆಯಲ್ಲಿ ಅನುದಾನದ ಕೊರತೆ ಇರುವುದರಿಂದ ತಕ್ಷಣವೇ ಹೊಸ ರಸ್ತೆ ನಿರ್ಮಿಸಲು ತೊಡಕಾಗಿದೆ. ನಾಗರಿಕರ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ತಕ್ಷಣವೇ ತಾತ್ಕಾಲಿಕವಾಗಿ ರಸ್ತೆ ರಿಪೇರಿ ಮಾಡಿಸಿಲಾಗುವುದು. ಮುಂದಿನ ಹಂತದಲ್ಲಿ ಸರ್ಕಾರದ ಅನುದಾನ ಬಂದ ತಕ್ಷಣವೇ ನೂತನ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್. ಕೆ. ಪ್ರಸನ್ನ, ಮುತ್ತುರಾಜ್, ಮೆಡಿಕಲ್ ರಾಘವೇಂದ್ರ, ಗುತ್ತಿಗೆದಾರ ಮುತ್ತುರಾಜ್, ರೋಹಿತ್, ಮಂಜುನಾಥ ಶೆಟ್ಟಿ, ನಾಗೇಂದ್ರ, ವೆಂಕಟೇಶ್ ಬಾಬು, ಪತ್ರಕರ್ತ ಸುದರ್ಶನ್, ಇತರರು ಇದ್ದರು.