ವಲಸಿಗರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಡಿಸಿಗೆ ದೂರು

| Published : Jul 06 2025, 01:48 AM IST

ವಲಸಿಗರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಡಿಸಿಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ತಾಲೂಕಿನ ಕಾಫಿ ತೋಟಗಳಲ್ಲಿ ಕೂಲಿ ಕೆಲಸಕ್ಕೆ ಅಸ್ಸಾಂ ಹಾಗೂ ಬಾಂಗ್ಲಾದ ವಲಸಿಗರು ಸುಮಾರು ೫ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಅನಧಿಕೃತವಾಗಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಇವರು ಬೆಳೆಗಾರರು ಹಾಗು ಸ್ಥಳೀಯರಿಗೆ ಬಹಳ ತೊಂದರೆ ಕೊಡುತ್ತಿದ್ದಾರೆ. ಅಲ್ಲದೆ ರಾತ್ರಿ ೧೨ ಗಂಟೆ ನಂತರ ಕುಡಿದು ಗಲಾಟೆ ಮಾಡುವುದರ ಜೊತೆಗೆ ಒಂಟಿ ಮನೆಗಳ ಮೇಲೆ ದಾಂಧಲೆ ನಡೆಸುವುದು ಕಂಡುಬರುತ್ತಿದೆ. ವಲಸಿಗರು ತಮ್ಮ ಸಂಘಟನೆ ಕಟ್ಟಿಕೊಂಡು ತೋಟದ ಮಾಲೀಕರನ್ನು ಹೆದರಿಸುವುದು ಅಲ್ಲದೆ ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಕಾಫಿ ತೋಟಗಳಿಗೆ ಹೊರ ರಾಜ್ಯಗಳಿಂದ ಬಂದಿರುವ ವಲಸಿಗರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಚೇತನ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕಾಫಿ ತೋಟಗಳಲ್ಲಿ ಕೂಲಿ ಕೆಲಸಕ್ಕೆ ಅಸ್ಸಾಂ ಹಾಗೂ ಬಾಂಗ್ಲಾದ ವಲಸಿಗರು ಸುಮಾರು ೫ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಅನಧಿಕೃತವಾಗಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಇವರು ಬೆಳೆಗಾರರು ಹಾಗು ಸ್ಥಳೀಯರಿಗೆ ಬಹಳ ತೊಂದರೆ ಕೊಡುತ್ತಿದ್ದಾರೆ. ಅಲ್ಲದೆ ರಾತ್ರಿ ೧೨ ಗಂಟೆ ನಂತರ ಕುಡಿದು ಗಲಾಟೆ ಮಾಡುವುದರ ಜೊತೆಗೆ ಒಂಟಿ ಮನೆಗಳ ಮೇಲೆ ದಾಂಧಲೆ ನಡೆಸುವುದು ಕಂಡುಬರುತ್ತಿದೆ. ವಲಸಿಗರು ತಮ್ಮ ಸಂಘಟನೆ ಕಟ್ಟಿಕೊಂಡು ತೋಟದ ಮಾಲೀಕರನ್ನು ಹೆದರಿಸುವುದು ಅಲ್ಲದೆ ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೆಂಡೇಹಳ್ಳಿ ಬೆಳೆಗಾರ ಸಂಘದ ಸಿದ್ದೇಗೌಡ ಹಾಗು ಶ್ರೀನಿವಾಸ್ ಮಾತನಾಡಿ, ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದು, ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಾಗು ಯಾವುದೇ ಅನುಮತಿ ಪಡೆಯದೆ ಕೆಲ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದು, ಕೂಡಲೇ ಇದನ್ನು ತಪ್ಪಿಸಬೇಕು ಹಾಗು ಅವರನ್ನು ಇಲ್ಲಿಂದ ಗಡಿಪಾರು ಮಾಡುವಂತೆ ಬೆಳೆಗಾರರ ಒಕ್ಕೂಟದ ಪರವಾಗಿ ಮನವಿ ಮಾಡಿದರು.ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ ಎಸ್ ಲತಾಕುಮಾರಿ, ತಕ್ಷಣ ತಹಸೀಲ್ದಾರ್‌ ಶ್ರೀಧರ್ ಕಂಕನವಾಡಿ ಅವರಿಗೆ, ಸಂಪೂರ್ಣ ಮಾಹಿತಿ ಪಡೆದು ನನಗೆ ಮಾಹಿತಿ ನೀಡಬೇಕು. ಎಷ್ಟು ವಲಸಿಗರು ಇಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ಯಾರು ವಸತಿ ಸವಲತ್ತು ನೀಡಿದ್ದಾರೆ ಅವರ ಆಧಾರ್‌ ಕಾರ್ಡ್ ಪರಿಶೀಲಿಸಿ ನನಗೆ ಮಾಹಿತಿ ಕೊಡಿ. ಕಂದಾಯ ಇಲಾಖೆ ಅಧಿಕಾರಿಗಳನ್ನು ಎಲ್ಲಾ ಗ್ರಾಮಗಳಿಗೆ ಕಳಿಸಿ ವಾರದಲ್ಲಿ ನಮಗೆ ಮಾಹಿತಿ ನೀಡಿ.ಇ ನ್ನು ೧೫ ದಿನದಲ್ಲಿ ನಾನೇ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಜೊತೆ ಚರ್ಚಿಸಿ ನಿಮ್ಮ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗೆಂಡೆಹಳ್ಳಿ ಕಾಫಿ ಬೆಳೆಗಾರ ಸಂಘದ ಅಧ್ಯಕ್ಷ ರತನ್, ದರ್ಶನ್, ವಿಕಾಸ್, ವಿಜಯ್, ರಂಜಿತ್, ಗುರುವೇಗೌಡ, ಕುಮಾರ್, ನವೀನ, ದೀಪು ಮಂಜೇಗೌಡ ಇತರರು ಇದ್ದರು.