ಪೂಜ್ಯರ ಆಶೀರ್ವಾದಿಂದ ಕಷ್ಟಕಾರ್ಪಣ್ಯಗಳು ದೂರು: ಅಮರೇಶ್ವರ ಶ್ರೀ

| Published : Nov 26 2024, 12:51 AM IST

ಸಾರಾಂಶ

ಅತ್ತೆಯಾದವಳು ಸೊಸೆಯನ್ನು ಮಗಳಂತೆ ನೋಡಬೇಕು. ಸೊಸೆ ಅತ್ತೆ-ಮಾವನನ್ನು ತಂದೆ ತಾಯಿಯೆಂತೆ ನೋಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹುನಗುಂದ

ಮನುಷ್ಯನ ಜೀವನದಲ್ಲಿ ಕಷ್ಟಕಾರ್ಪಣ್ಯಗಳು ದೂರಾಗಬೇಕೆಂದರೆ ಶ್ರೀ ಬಸವೇಶ್ವರ ಹಾಗೂ ಪೂಜ್ಯರ ಆಶೀರ್ವಾದ ಪಡೆಯಬೇಕು ಎಂದು ಹುನಗುಂದದ ಗಚ್ಚಿನಮಠದ ಅಮರೇಶ್ವರ ದೇವರು ಹೇಳಿದರು.

ತಾಲೂಕಿನ ಬೇವಿನಮಟ್ಟಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ, ಕಾರ್ತಿಕೋತ್ಸವ, ಪುರಾಣ ಮಂಗಲೋತ್ಸವ ಹಾಗೂ ರಥೋತ್ಸವದ ಅಂಗವಾಗಿ ಸೋಮವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗ್ರಾಮಸ್ಥರು ಎಲ್ಲರೂ ಸೇರಿ ಜಾತ್ರೆಗಳನ್ನು ಒಗ್ಗಟ್ಟಾಗಿ ಮಾಡಿದರೆ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎಂದರು.

ಅಮೀನಗಡದ ಗಚ್ಚಿನಮಠದ ಪ್ರಭು ಶಂಕರರಾಜೇಂದ್ರ ಸ್ವಾಮೀಜಿ ಮಾತನಾಡಿ, ಅತ್ತೆಯಾದವಳು ಸೊಸೆಯನ್ನು ಮಗಳಂತೆ ನೋಡಬೇಕು. ಸೊಸೆ ಅತ್ತೆ-ಮಾವನನ್ನು ತಂದೆ ತಾಯಿಯೆಂತೆ ನೋಡಿಕೊಳ್ಳಬೇಕು. ಗುರುಗಳು ಮತ್ತು ಭಕ್ತರ ನಡುವೆ ಅವಿನಾಭವ ಸಂಬಂಧವಿದ್ದಾಗ ಲೋಕ ಕಲ್ಯಾಣ ಕಾರ್ಯಗಳು ನೆರವೇರುವುದು. ಗ್ರಾಮಸ್ಥರು ಹಮ್ಮಿಕೊಂಡಿರುವ ಸಾಮೂಹಿಕ ವಿವಾಹ ಕಾರ್ಯಕ್ರಮ ಶ್ಲಾಘನೀಯ ಎಂದರು.ಪುರಗಿಯ ಹಿರೇಮಠದ ಶಿವಸಂಗಮೇಶ್ವರ ದೇವರು ಮಾತನಾಡಿ, ನೂತನವಾಗಿ ದಾಪಂತ್ಯ ಜೀವನಕ್ಕೆ ಕಾಲಿಟ್ಟ ನೂತನ ಸತಿಪತಿ ಆರತಿಗೊಬ್ಬಳು ಮಗಳು ಕೀರ್ತಿಗೊಬ್ಬಳು ಮಕ್ಕಳನ್ನು ಹೆತ್ತು ಅವರಿಗೆ ಉತ್ತಮ ಶಿಕ್ಷಣ ನೀಡಿ ದೇಶಕ್ಕೆ ಕೀರ್ತಿ ತರುವಂತೆ ಮಾಡಬೇಕೆಂದರು.

ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಸ್ವಾಮೀಜಿ ಮಹಾದಾಸೋಹಿ ಬರಕಾಲದ ಬಂಟ ಕಲಬುರ್ಗಿ ಶ್ರೀ ಶರಣಬಸವೇಶ್ವರ 23 ದಿನಗಳ ನಿರಂತರ ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು. ಸಾಮೂಹಿಕ ವಿವಾಹದಲ್ಲಿ ನೂತನವಾಗಿ ಜೀವನಕ್ಕೆ 6 ಜೋಡಿಗಳು ಕಾಲಿಟ್ಟರು. ದೇವಸ್ಥಾನ ಕಮಿಟಿ ಅಧ್ಯಕ್ಷರಾದ ರಾಜಣ್ಣ ಕಡೆಕೊಪ್ಪ ದಾವಣಗೇರಿ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ಮಹಾಂತಪ್ಪ ತೋಳಮಟ್ಟಿ, ಶಿವಪ್ರಸಾದ ಗದ್ದಿ, ಮಹೇಶ ಪಾಟೀಲ, ಶರಣಪ್ಪ ತೋಳಮಟ್ಟಿ, ಮಂಜುನಾಥ ನೂಲಿನವರ, ಬಸವರಾಜ ತೋಳಮಟ್ಟಿ, ವೆಂಕಪ್ಪ ಗುಡದಪ್ಪನವರ, ವಿರುಪಾಕ್ಷ ಹಡಗಲಿ, ಮಲ್ಲನಗೌಡ ನಡುವುನಮನಿ, ಷಣ್ಮಖಪ್ಪ ಹಿರೇಮಠ, ಸಂಗಪ್ಪ ಮರಡಿ ಸೇರಿದಂತೆ ಗ್ರಾಮಸ್ಥರು ಇದ್ದರು.