ಅಮೀರ್‌ ಜಾನ್‌ ರಸ್ತೆ ಚರಂಡಿ ಕೂಡಲೇ ಪೂರ್ಣಗೊಳಿಸಿ

| Published : Jul 18 2025, 12:56 AM IST / Updated: Jul 18 2025, 12:57 AM IST

ಸಾರಾಂಶ

ಪಟ್ಟಣದ ಅಮೀರ್ ಜಾನ್ ರಸ್ತೆಯ ಬದಿ ಚರಂಡಿ ಕಾಮಗಾರಿಗೆ ಅನುದಾನವಿಲ್ಲ ಎಂದು ಅರ್ಧಕ್ಕೆ ನಿಲ್ಲಿಸಿದ್ದಾರೆ. ಕಾಮಗಾರಿ ಪೂರ್ಣಗೊಳಿಸದೆ ರಸ್ತೆ ಕಾಮಗಾರಿಗೆ ನಡೆಸಲು ಮುಂದಾಗಿರುವುದಕ್ಕೆ ಬಡಾವಣೆ ನಿವಾಸಿಗಳು ಆಕ್ಷೇಪ ಎತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಅಮೀರ್ ಜಾನ್ ರಸ್ತೆಯ ಬದಿ ಚರಂಡಿ ಕಾಮಗಾರಿಗೆ ಅನುದಾನವಿಲ್ಲ ಎಂದು ಅರ್ಧಕ್ಕೆ ನಿಲ್ಲಿಸಿದ್ದಾರೆ. ಕಾಮಗಾರಿ ಪೂರ್ಣಗೊಳಿಸದೆ ರಸ್ತೆ ಕಾಮಗಾರಿಗೆ ನಡೆಸಲು ಮುಂದಾಗಿರುವುದಕ್ಕೆ ಬಡಾವಣೆ ನಿವಾಸಿಗಳು ಆಕ್ಷೇಪ ಎತ್ತಿದ್ದಾರೆ.

ಅಮೀರ್‌ ಜಾನ್‌ ರಸ್ತೆ ಬದಿ ಚರಂಡಿ ಮಾಡುತ್ತೇವೆ ಎಂದು ಪುರಸಭೆ ಡ್ಯಾಮೇಜ್‌ ಇರುವ ಕಡೆ ಸಿಮೆಂಟ್‌ ಇಟ್ಟಿಗೆಯಿಂದ ಚರಂಡಿ ಕಾಮಗಾರಿ ನಡೆಸಿದೆ. ಇನ್ನೂ ಕೆಲವೆಡೆ ಮನೆಯ ಮುಂದಿನ ಜಗುಲಿ, ಗಾರೆ ಕಿತ್ತು ಹಾಕಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ.

6 ಮತ್ತು7ನೇ ವಾರ್ಡ್‌ಗೆ ಈ ಕೆಲಸ ಸೇರಿದ್ದು, ಪುರಸಭೆಯಲ್ಲಿ ವಿಚಾರಿಸಿದರೆ ಅನುದಾನ ಇಲ್ಲ ಎಂದು ಹೇಳುತ್ತಿದ್ದಾರೆ. ಮೊದಲೂ ರಸ್ತೆ ಕೆಲಸ ಆಗಲಿ ನಂತರ ಚರಂಡಿ ಕಾಮಗಾರಿ ಮಾಡಿಸೋಡೋಣ ಅಂತ ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಎಂದು ಪುರಸಭೆಯನ್ನು ಮುಖಂಡ ಸೈಯ್ಯದ್‌ ಅಕ್ರಂ ಪಾಷ ಪ್ರಶ್ನಿಸಿದ್ದಾರೆ.

ಚರಂಡಿಗಾಗಿ ಮನೆಗಳ ಮುಂದೆ ಇದ್ದಂತಹ ಜಗಲಿಗಳು, ಕಟ್ಟಿಕೊಂಡಿದಂತ ಗಾರೆಗಳು, ತಿರುಗಾಡಲು ಹಾಕಿದ ಚಪ್ಪಡಿ ಕಲ್ಲುಗಳನ್ನು ಕಿತ್ತು ಹಾಕಿರುವ ಕಾರಣ ಮನೆಯವರು ತಿರುಗಾಡಲು ಆಗುತ್ತಿಲ್ಲ. ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ ಕೂಡಲೇ ಆರಂಭಿಸದಿದ್ದರೆ ಪುರಸಭೆ ಮುಂದೆ ವಾಸಿಗಳು ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.