ಕುಡಚಿ-ಬಾಗಲಕೋಟ ರೈಲ್ವೆ ಮಾರ್ಗ ಪೂರ್ಣಗೊಳಿಸಿ

| Published : May 03 2024, 01:05 AM IST / Updated: May 03 2024, 01:06 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಕುಡಚಿ-ಬಾಗಲಕೋಟ ರೈಲ್ವೆ ಮಾರ್ಗ ಸ್ವತಂತ್ರ ಪೂರ್ವದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಸರ್ಕಾರ ಯಾವುದೇ ಇದ್ದರೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಬಾಗಲಕೋಟ ರೇಲ್ವೆ ಹೋರಾಟ ಸಮಿತಿ ಮುಖಂಡ ಕುತುಬುದ್ದೀನ್‌ ಖಾಜಿ ನೇರ ಪ್ರಶ್ನೆ ಮಾಡಿದರು.

ಸ್ಥಳೀಯ ಚನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ತಾಲೂಕು ಹೋರಾಟ ವೇದಿಕೆಗೆ ಬೆಂಬಲ ಸೂಚಿಸಿದ ಅವರು, ಬಾಗಲಕೋಟ- ಕುಡಚಿ ರೇಲ್ವೆ ಹೋರಾಟ ಜನಜಾಗೃತಿ ಕುರಿತು ಮಾತನಾಡಿದರು. ನೂರಾರು ವರ್ಷದ ಬೇಡಿಕೆಯನ್ನು ಯಾವೊಬ್ಬ ಸಂಸದರು ಎದ್ದು ನಿಂತು ಗಟ್ಟಿಯಾಗಿ ಕೇಳುವ ಧೈರ್ಯ ಮಾಡುತ್ತಿಲ್ಲ. ಇದು ಕೇವಲ 142 ಕಿ.ಮೀ ಉದ್ದದ ಯೋಜನೆಯಾಗಿದ್ದು, ಸುಮಾರು ಒಂದು ಶತಮಾನ ಕಂಡರು ಬೇಡಿಕೆ ಕೇವಲ 30 ಕಿ.ಮೀ ಮಾತ್ರ ಮಾರ್ಗ ಸಿದ್ದವಾಗಿದೆ. ಈ ಸಣ್ಣ ಯೋಜನೆ ಬ್ರಿಟಿಷರ ಕಾಲದಿಂದಲೂ ನನೆಗುದಿಗೆ ಬಿದ್ದಿದೆ ಎಂದರೆ ಈ ಭಾಗದ ಜನ ಪ್ರತಿನಿಧಿಗಳ ಇಚ್ಛಾಶಕ್ತಿ ಇಲ್ಲದಿರುವುದೇ ಕಾರಣ ಎಂದು ದೂರಿದರು.

ಈ ಸಂದರ್ಭದಲ್ಲಿ ತಾಲೂಕ ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಶಿವಲಿಂಗ, ಸಿದ್ದು ಬೆಣ್ಣೂರ, ಶುಭಾಷ ಶಿರಬೂರ, ಸಿದ್ದು ಶಿರೋಳ, ಮೋದಿನ ಬಿಸ್ತಿ, ರಫಿಕ್ ಮಲ್ದಾರ, ಸುರೇಶ ಮಿಜರ್‌, ಮಲ್ಲಪ್ಪಾ ಮಿಜರ್‌, ದುಂಡಪ್ಪ ಇಟ್ನಾಳ ಸೇರಿ ಹಲವರು ಇದ್ದರು.