ಮೌಲ್ಯಯುತ ಕೋರ್ಸ್‌ಗಳನ್ನು ಮುಗಿಸಿದರೆ ಬದುಕಿಗೆ ಸಹಕಾರಿ: ಪುಲಿಗೆರಯ್ಯ

| Published : Mar 23 2025, 01:33 AM IST

ಮೌಲ್ಯಯುತ ಕೋರ್ಸ್‌ಗಳನ್ನು ಮುಗಿಸಿದರೆ ಬದುಕಿಗೆ ಸಹಕಾರಿ: ಪುಲಿಗೆರಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮೌಲ್ಯಯುತ ಕೋರ್ಸ್‌ಗಳನ್ನು ಹೊಂದುವುದು ಅತ್ಯವಶ್ಯಕ. ಈ ಪ್ರಮಾಣ ಪತ್ರವು ವಿದ್ಯಾರ್ಥಿಗಳ ಮುಂದಿನ ಔದ್ಯೋಗಿಕ ಜೀವನಕ್ಕೆ ಸಹಕಾರಿಯಾಗಲಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪದವಿ ಪಡೆದ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರದೊಂದಿಗೆ ಮೌಲ್ಯಯುತ ಕೋರ್ಸ್‌ಗಳನ್ನು ಮುಗಿಸಿಕೊಳ್ಳುವುದರಿಂದ ಅವರ ಮುಂದಿನ ಔದ್ಯೋಗಿಕ ಬದುಕಿಗೆ ಸಹಕಾರಿಯಾಗಲಿದೆ ಎಂದು ಉಪನ್ಯಾಸಕ ಪುಲಿಗೆರಯ್ಯ ಹೇಳಿದರು.

ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ, ತರಬೇತಿ ಮತ್ತು ಉದ್ಯೋಗ ಕೋಶ, ಆಂತರಿಕ ಗುಣಮಟ್ಟಕೋಶ ಮತ್ತು ಟ್ಯಾಲಿ ಅಕಾಡೆಮಿ ಮುಂಬೈ ಇವರ ಸಹಯೋಗದೊಂದಿಗೆ ನಡೆದ 2023-24ನೇ ಶೈಕ್ಷಣಿಕ ಸಾಲಿನ ಮೌಲ್ಯಯುತ ಕೋರ್ಸ್‌ನ ಟ್ಯಾಲಿ ಪ್ರೈಮ್ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಟ್ಯಾಲಿ ಪ್ರೈಮ್ ಕೋರ್ಸ್ ವಾಣಿಜ್ಯ ಮತ್ತು ನಿರ್ವಹಣ ವಿಭಾಗದ ವಿದ್ಯಾರ್ಥಿಗಳಿಗೆ ಅತ್ಯವಶ್ಯಕ. ಕೌಶಲ್ಯ ಮತ್ತು ಜ್ಞಾನದೊಂದಿಗೆ ಮುಂದಿನ ಔದ್ಯೋಗಿಕ ಜಗತ್ತಿಗೆ ಸಜ್ಜುಗೊಳಿಸುತ್ತದೆ ಎಂದರು.

ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮೌಲ್ಯಯುತ ಕೋರ್ಸ್‌ಗಳನ್ನು ಹೊಂದುವುದು ಅತ್ಯವಶ್ಯಕ. ಈ ಪ್ರಮಾಣ ಪತ್ರವು ವಿದ್ಯಾರ್ಥಿಗಳ ಮುಂದಿನ ಔದ್ಯೋಗಿಕ ಜೀವನಕ್ಕೆ ಸಹಕಾರಿಯಾಗಲಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತದೆ ಎಂದರು.

ಟ್ಯಾಲಿ ಪ್ರೈಮ್ ಬ್ಯಾಚ್ ಎಪ್ರಿಲ್ 2024ರಂದು ಪ್ರಾರಂಭಗೊಂಡು ಸೆಪ್ಟೆಂಬರ್ 2024ರಂದು ಅಂತ್ಯಗೊಂಡಿತು. ಹಾಗೂ 21ನೇ ಅಕ್ಟೋಬರ್ 2024ರಂದು ಪರೀಕ್ಷೆಗಳನ್ನು ನಡೆಸಲಾಯಿತು. ಈ ತರಬೇತಿಯಲ್ಲಿ ಒಟ್ಟು 51 ವಿದ್ಯಾರ್ಥಿಗಳು ಯಶಸ್ವಿಯಾಗಿ ತೇರ್ಗಡೆ ಹೊಂದಿ ತಮ್ಮ ಪ್ರಮಾಣ ಪತ್ರವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ತರಬೇತಿ ಮತ್ತು ಉದ್ಯೊಗ ಕೋಶದ ಅಧಿಕಾರಿ ಎಚ್.ಚರಣ್‌ರಾಜ್, ಐಕ್ಯೂಎಸಿ ಸಂಯೋಜಕ ರಘುನಂದನ್, ಸಹಾಯಕ ಪ್ರಾಧ್ಯಾಪಕಿ ಕೃತಿಕ, ವಾಣಿಜ್ಯ ವಿಭಾಗದ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.