ಅತ್ಯಾಚಾರಕ್ಕೆ ಸಹಕಾರ: ಆರೋಪಿಗೆ 3 ವರ್ಷ ಜೈಲು

| Published : Feb 13 2025, 12:46 AM IST

ಸಾರಾಂಶ

ಬಟ್ಟೆ ಹೊಲಿಸಲು ಹೋಗುತ್ತಿದ್ದ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಕೃತ್ಯ ಎಸಗಲು ಸಹಕರಿಸಿದ್ದ ಅಪರಾಧಿಗೆ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ತೀರ್ಪು ನೀಡಿದೆ.

ದಾವಣಗೆರೆ: ಬಟ್ಟೆ ಹೊಲಿಸಲು ಹೋಗುತ್ತಿದ್ದ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಕೃತ್ಯ ಎಸಗಲು ಸಹಕರಿಸಿದ್ದ ಅಪರಾಧಿಗೆ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ತೀರ್ಪು ನೀಡಿದೆ.

ನಗರದ ಇಸ್ಮಾಯಿಲ್ ಖಾನ್ ಅಲಿಯಾಸ್ ಇಸ್ಮಾಯಿಲ್ ಜಬೀವುಲ್ಲಾ (22) ಶಿಕ್ಷೆಗೆ ಗುರಿಯಾದ ಅಪರಾಧಿ. 1ನೇ ಆರೋಪಿ ಷಜಾಮ್ ಅಲಿಯಾಸ್‌ ಮಹಮ್ಮದ್ ಅಲಾಂ ಎಂಬಾತ ಪಿರ್ಯಾದಿ ಮನೆಗೆ ಆಗಾಗ ಬಟ್ಟೆ ಹೊಲಿಸಲು ಹೋಗುತ್ತಿದ್ದು, ಆಗ ಪಿರ್ಯಾದಿಯ ಮಗಳನ್ನು ಪ್ರೀತಿಸುತ್ತೇನೆಂದು ನಂಬಿಸಿ, ಹಲವಾರು ಬಾರಿ ಅತ್ಯಾಚಾರ ಎಸಗಿದ್ದ.

2021ರ ಜೂ.27ರಂದು ಬೆಳಗಿನ ಜಾವ ಮಗಳು ನಾಪತ್ತೆಯಾಗಿದ್ದ ಹಿನ್ನೆಲೆ ಮಹಿಳಾ ಪೊಲೀಸ್ ಠಾಣೆಗೆ ಪಾಲಕರು ದೂರು ನೀಡಿದ್ದರು. ಇನ್‌ಸ್ಪೆಕ್ಟರ್ ವೈ.ಎಸ್.ಶಿಲ್ಪಾ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಾಗ, 1ನೇ ಆರೋಪಿ ಷಜಾಮ್ ಅಲಿಯಾಸ್ ಮಹಮ್ಮದ್ ಅಲಾಂ ಅಪ್ರಾಪ್ತೆಯನ್ನು ದೆಹಲಿಗೆ ಕರೆದೊಯ್ದಿದ್ದು, ವಿಮಾನದಲ್ಲಿ ದೆಹಲಿಗೆ ತೆರಳಲು ನೆರವಾದ 2ನೇ ಆರೋಪಿ ಇಸ್ಮಾಯಿಲ್‌ನ ಎಲ್ಲ ವಿಚಾರ ಬಯಲಾಗಿ, ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಪ್ರಕರಣ ವಿಚಾರಣೆ ನಡೆಸಿ, ಅಪರಾಧಿ ಇಸ್ಮಾಯಿಲ್ ಖಾನ್ ಅಲಿಯಾಸ್ ಇಸ್ಮಾಯಿಲ್ ಜಬೀವುಲ್ಲಾ ವಿರುದ್ಧ ತೀರ್ಪು ಪ್ರಕಟಿಸಿದರು. ಆರೋಪಿತ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರಿಂದ ಈ ಬಂಧನ ಅವಧಿ ಪರಿಗಣಿಸಿ, ಶಿಕ್ಷಾ ಅವಧಿ ಸೆಟ್ ಆಫ್ ಮಾಡಲಾಗಿದೆ. ದಂಡದ ಮೊತ್ತ ₹10 ವನ್ನು ಸಂತ್ರಸ್ತೆಗೆ ನೀಡುವಂತೆ ಹಾಗೂ ಸಂತ್ರಸ್ತೆಗೆ ಸರ್ಕಾರದಿಂದ ₹4 ಲಕ್ಷ ಪರಿಹಾರ ನೀಡುವಂತೆ ತೀರ್ಪು ನೀಡಲಾಗಿದೆ. ಪಿರ‍್ಯಾದಿ ಪರ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ನ್ಯಾಯ ಮಂಡನೆ ಮಾಡಿದ್ದರು.

- - -

(ಫೋಟೋ)