ಮಹರ್ಷಿ ವಾಲ್ಮೀಕಿ ಭವನಕ್ಕೆ ಕಾಂಪೌಂಡ್ ಕಾಮಗಾರಿಗೆ ಚಾಲನೆ

| Published : Nov 21 2025, 02:30 AM IST

ಸಾರಾಂಶ

ವಾಲ್ಮೀಕಿ ಭವನ ಗ್ರಾಮದ ಸಮಗ್ರ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿರುವುದರಿಂದ ಇದಕ್ಕೆ ಕಾಂಪೌಂಡ್ ನಿರ್ಮಾಣ ಮಾಡುವುದು ನಮ್ಮ ಸಾಮಾಜಿಕ ಹೊಣೆಗಾರಿಕೆಯಾಗಿದೆ.

ಮರಿಯಮ್ಮನಹಳ್ಳಿ: ಸಮೀಪದ ಲೋಕಪ್ಪನಹೊಲ ಗ್ರಾಮದ ಬಳಿ ಇರುವ ಎಸ್‌.ಎಲ್‌.ಆರ್. ಮೆಟಾಲಿಕ್ಸ್ ಕಂಪನಿಯ ಸಿ.ಎಸ್.ಆರ್. ಅನುದಾನದಲ್ಲಿ ಲೋಕಪ್ಪನಹೊಲ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಭವನಕ್ಕೆ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಎಸ್‌ಎಲ್‌ಆರ್ ಮೆಟಾಲಿಕ್ಸ್ ಕಂಪನಿಯ ಅಧಿಕಾರಿ ತಂಬ್ರಳ್ಳಿ ಅಂಬರೀಶ್‌ ಮಾತನಾಡಿ, ಗ್ರಾಮಗಳ ಅಭಿವೃದ್ಧಿ ಹಾಗೂ ಸಾಮಾಜಿಕ ಮೂಲಸೌಕರ್ಯ ಸುಧಾರಣೆ ನಮ್ಮ ಸಂಸ್ಥೆಯ ಆದ್ಯತೆಯಾಗಿದೆ. ವಾಲ್ಮೀಕಿ ಭವನ ಗ್ರಾಮದ ಸಮಗ್ರ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿರುವುದರಿಂದ ಇದಕ್ಕೆ ಕಾಂಪೌಂಡ್ ನಿರ್ಮಾಣ ಮಾಡುವುದು ನಮ್ಮ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.

ಸಿ.ಎಸ್.ಆರ್. ಅನುದಾನದಡಿ ಕೈಗೊಳ್ಳಲಿರುವ ಈ ಯೋಜನೆಯು ಗ್ರಾಮದ ಸಾಂಸ್ಕೃತಿಕ ಕೇಂದ್ರವಾದ ವಾಲ್ಮೀಕಿ ಭವನಕ್ಕೆ ಭದ್ರತೆ ಮತ್ತು ಸೌಂದರ್ಯ ಹೆಚ್ಚಿಸುವುದರೊಂದಿಗೆ, ಸಾರ್ವಜನಿಕ ಚಟುವಟಿಕೆಗೆ ಉತ್ತಮ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದರು.

ಸ್ಥಳೀಯ ಮುಖಂಡರಾದ ಟಿ. ಹನುಮಂತಪ್ಪ ಮಾತನಾಡಿ, ಎಸ್‌ಆಲ್‌ಆರ್‌ ಮೆಟಾಲಿಕ್ಸ್‌ನ ಸಿ.ಎಸ್.ಆರ್. ಯೋಜನೆಯಡಿ ಲೋಕಪ್ಪನಹೊಲ ಗ್ರಾಮಕ್ಕೆ ಅನೇಕ ಉಪಯುಕ್ತ ಕೆಲಸಗಳು ನಡೆಯುತ್ತಿವೆ. ವಾಲ್ಮೀಕಿ ಭವನ ಅಭಿವೃದ್ಧಿಗೆ ಮಹತ್ತರ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಶಿಕ್ಷಣ, ಸಮುದಾಯದ ಅಭಿವೃದ್ಧಿಗಾಗಿ ಈಗಾಗಲೇ ಅನುದಾನ ನೀಡಿ ಅಭಿವೃದ್ಧಿಗೆ ಸಹಕಾರಿಯಾಗಿದ್ದಾರೆ ಎಂದು ತಿಳಿಸಿದರು

ಸ್ಥಳೀಯ ಮುಖಂಡರಾದ ಕೆ. ಸಕ್ರಪ್ಪ, ಸಿ. ಬಸವರಾಜ, ಸಿ. ಹನುಮಂತಪ್ಪ, ಟಿ. ಹನುಮಂತಪ್ಪ, ಮುರಾರಿ, ಚಂದ್ರಪ್ಪ, ಸೋಗಿ ನಾಗರಾಜ, ಟಿ. ಜಯಂತ್‌, ಕೆ. ಸೋಮಪ್ಪ, ಕೆ.ಬಿ. ಸತೀಶ್‌, ಪಿ. ಜಂಬಯ್ಯ, ಡಿ. ಮಂಜುನಾಥ, ಬಸಪ್ಪ ಸೇರಿದಂತೆ ಎಸ್‌ಎಲ್‌ಆರ್‌ ಕಂಪನಿಯ ಅಧಿಕಾರಿಗಳಾದ ವೇದವ್ಯಾಸ, ಸುನೀಲ್‌, ಮಲ್ಲಿಕಾರ್ಜುನ ಕೊಟ್ಟಾಲ್‌, ಮಾರುತಿ ಗೋಪಿ, ಶಿವಕುಮಾರ ಸೇರಿದಂತೆ ಗ್ರಾಮದ ಮುಖಂಡರು ಭಾಗವಹಿಸಿದ್ದರು.