ಸಾರಾಂಶ
ಎಸ್‌ಎಲ್‌ಆರ್ ಮೆಟಾಲಿಕ್ಸ್ ಸಿಎಸ್‌ಆರ್ ಯೋಜನೆಯ ಅನುದಾನವು ಮರಿಯಮ್ಮನಹಳ್ಳಿ ಪಟ್ಟಣ ಹಾಗೂ ಕಂಪನಿ ಸುತ್ತಮುತ್ತಲ ಹಳ್ಳಿಗಳ ಅಭಿವೃದ್ಧಿಗೆ ಮೀಸಲಾಗಿದೆ.
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಎಸ್‌ಎಲ್‌ಆರ್ ಮೆಟಾಲಿಕ್ಸ್ ಸಿಎಸ್‌ಆರ್ ಯೋಜನೆಯ ಅನುದಾನವು ಮರಿಯಮ್ಮನಹಳ್ಳಿ ಪಟ್ಟಣ ಹಾಗೂ ಕಂಪನಿ ಸುತ್ತಮುತ್ತಲ ಹಳ್ಳಿಗಳ ಅಭಿವೃದ್ಧಿಗೆ ಮೀಸಲಾಗಿದೆ ಎಂದು ಎಸ್‌ಎಲ್‌ಆರ್ ಕಂಪನಿ ಅಧಿಕಾರಿ ಧನಂಜಯಕುಮಾರ ಹೇಳಿದರು.ಪಟ್ಟಣದ ನಾಡಕಚೇರಿಯ ಆವರಣದ ರಕ್ಷಣಾ ಗೋಡೆ (ಕಾಂಪೌಂಡ್) ಸಿಎಸ್ಆರ್ ಯೋಜನೆಯಲ್ಲಿ ನಿರ್ಮಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಎಸ್‌ಎಲ್‌ಆರ್ ಕಂಪನಿ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಮೂಲಸೌಕರ್ಯ ಒದಗಿಸುವ ಕಾರ್ಯ ಮಾಡುತ್ತಿದೆ. ನಾಡಕಚೇರಿಯ ಕಾಂಪೌಂಡ್ ನಿರ್ಮಾಣಕ್ಕೆ ಸುಮಾರು ₹8 ರಿಂದ ₹9 ಲಕ್ಷವರೆಗೆ ಅನುದಾನ ನೀಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಇದರಿಂದ ಕಚೇರಿ ಆವರಣದಲ್ಲಿನ ಇತರೆ ಚಟುವಟಿಕೆ ಹಾಗೂ ಸಾರ್ವಜನಿಕರಿಂದ ಆಗುವ ತೊಂದರೆಗಳು ಈ ಗೋಡೆ ನಿರ್ಮಾಣದಿಂದ ಕಡಿವಾಣ ಹಾಕಿದಂತಾಗುತ್ತದೆಂದು ತಿಳಿಸಿದರು.ಕಂದಾಯ ನಿರೀಕ್ಷಕ ಶರಿಫ್ ಮಾತನಾಡಿ, ಎಸ್‌ಎಲ್‌ಆರ್ ಮೆಟಾಲಿಕ್ಸ್ ತನ್ನ ವ್ಯಾಪ್ತಿಯ ಹಳ್ಳಿಗಳಲ್ಲಿ ಶಿಕ್ಷಣಕ್ಕಾಗಿ ವಿದ್ಯಾರ್ಥಿ ಮಿತ್ರ, ರೈತ ಮಿತ್ರ, ಸಾಮಾಜಿಕ ಮಿತ್ರ ಮತ್ತು ಆರೋಗ್ಯ ಮಿತ್ರ ಯೋಜನೆಗಳ ಅಡಿಯಲ್ಲಿ ಅನೇಕ ಸಾಮಾಜಿಕ ಕೆಲಸ ಮಾಡುತ್ತಾ ಬಂದಿದೆ. ಸ್ಥಳೀಯವಾಗಿ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ನೀಡುತ್ತಾ ಬರುತ್ತಿದೆ ಹಾಗೂ ಇನ್ನಿತರ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸಾಮಾಜಿಕ ಕೆಲಸ ಮಾಡುತ್ತಾ ಬರಬೇಕು ಎಂದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ ಶ್ರೀನಿವಾಸ್ ಶ್ರೀಧರ್, ಎಲ್.ಆರ್.ಮೆಟಾಲಿಕ್ಸ್ ಕಂಪನಿಯ ಅಧಿಕಾರಿ ಶೇಷಸಾಯಿ, ಕೆ. ಮಲ್ಲಿಕಾರ್ಜುನ, ಮಾರುತಿ ಗೋಸಿ, ಡಣಾಪುರ ಗ್ರಾಪಂ ಸದಸ್ಯ ಗಾಳೇಶ್, ನಾಡಕಚೇರಿಯ ಮನೋಜ್, ಕೊಟ್ರೇಶ್, ಕರಿಬಸಪ್ಪ, ರಂಗಪ್ಪ, ಗುರುಸ್ವಾಮಿ, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.