ಸಾರಾಂಶ
ಸರ್ಕಾರಿ ಶಾಲೆ, ಸಮಗ್ರ ಪ್ರಶಸ್ತಿ, ಆಲೂರು ಸುದ್ದಿ, ಹಾಸನ ಸುದ್ದಿ, ಕ್ರೀಡಾಕೂಟ, ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟ,ವಿದ್ಯಾರ್ಥಿಗಳು,Govt School, Comprehensive Award, Aluru News, Hassan News, Sports Event, Primary School Sports Event, Studentsಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟದಲ್ಲಿ ಪಟ್ಟಣದ ಸರ್ಕಾರಿ ನೂತನ ಹಿರಿಯ ಪ್ರಾಥಮಿಕ ಪಾಠಶಾಲಾ ವಿದ್ಯಾರ್ಥಿಗಳು " ಸಮಗ್ರ ಪ್ರಶಸ್ತಿ " ಪಡೆಯುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಖೋ ಖೋ ಪ್ರಥಮ, ಥ್ರೋ ಬಾಲ್ ಪ್ರಥಮ, 100×4 ರಿಲೇ ಪ್ರಥಮ, ವಾಲಿಬಾಲ್ ದ್ವಿತೀಯ ಸೇರಿದಂತೆ ರಿಷಿತ್ ಗೌಡ 400 ಮೀ ದ್ವಿತೀಯ, 100 ಮೀ ತೃತೀಯ, ವಿದ್ಯಾಸಾಗರ್ 600 ಮೀ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕನ್ನಡಪ್ರಭ ವಾರ್ತೆ ಆಲೂರು
ತಾಲೂಕು ಕ್ರೀಡಾಂಗಣದಲ್ಲಿ ನಡೆದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟದಲ್ಲಿ ಪಟ್ಟಣದ ಸರ್ಕಾರಿ ನೂತನ ಹಿರಿಯ ಪ್ರಾಥಮಿಕ ಪಾಠಶಾಲಾ ವಿದ್ಯಾರ್ಥಿಗಳು " ಸಮಗ್ರ ಪ್ರಶಸ್ತಿ " ಪಡೆಯುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಬಾಲಕಿಯರ ಸಮಗ್ರ ಪ್ರಶಸ್ತಿ: 100×4 ರಿಲೇ ಪ್ರಥಮ, ವಾಲಿಬಾಲ್ ಪ್ರಥಮ, ಖೋ ಖೋ ಪ್ರಥಮ, ಕಬಡ್ಡಿ ದ್ವಿತೀಯ ಸ್ಥಾನ ಪಡೆದಿದೆ. ಬಿ ಆಯೆಷಾ ವೈಯಕ್ತಿಕ ಚಾಂಪಿಯನ್ನಾಗಿ ಹೊರಹೊಮ್ಮಿದ್ದು 4000 ಮೀ. ಪ್ರಥಮ, ಲಾಂಗ್ ಜಂಪ್ ಪ್ರಥಮ, 600 ಮೀ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಣೀತ 100 ಮೀ ದ್ವಿತೀಯ, 600 ಹಾಗೂ 400 ಮೀ ತೃತೀಯ, ಆದ್ಯಾ 200 ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ ಖೋ ಖೋ ಪ್ರಥಮ, ಥ್ರೋ ಬಾಲ್ ಪ್ರಥಮ, 100×4 ರಿಲೇ ಪ್ರಥಮ, ವಾಲಿಬಾಲ್ ದ್ವಿತೀಯ ಸೇರಿದಂತೆ ರಿಷಿತ್ ಗೌಡ 400 ಮೀ ದ್ವಿತೀಯ, 100 ಮೀ ತೃತೀಯ, ವಿದ್ಯಾಸಾಗರ್ 600 ಮೀ ದ್ವಿತೀಯ ಸ್ಥಾನ ಪಡೆದಿದ್ದಾರೆ.ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯ ಭೂಪಾಲಯ್ಯ, ದೈಹಿಕ ಶಿಕ್ಷಕ ಪರಮೇಶ್ ಸೇರಿದಂತೆ ಶಾಲಾ ಸಹ ಶಿಕ್ಷಕರು ಅಭಿನಂದಿಸಿದ್ದಾರೆ.