ಶ್ರೀ ಶಾರದ ವಿದ್ಯಾಸಂಸ್ಥೆಗೆ ಸಮಗ್ರ ಪ್ರಶಸ್ತಿ

| Published : Sep 02 2024, 02:02 AM IST

ಸಾರಾಂಶ

ಅರಕಲಗೂಡು ತಾಲೂ ಕಿನ ರಾಮನಾಥಪುರ ಹೋಬಳಿ ಮಟ್ಟದ ೨೦೨೪-೨೫ ನೇ ಸಾಲಿನ ಕ್ರೀಡಾಕೂಟವು ಕೆ.ಪಿ.ಎಸ್ ಶಾಲೆಯ ಆವರಣದಲ್ಲಿ ಅರಕಲಗೂಡು ತಾಲೂಕು ಶಿಕ್ಷಣ ಇಲಾಖೆ ಶ್ರೀ ಶಾರದಾ ವಿದ್ಯಾಸಂಸ್ಥೆ ಜಿ ಎಚ್ ಪಿ ಎಸ್ ಕಾಳೇನಹಳ್ಳಿ, ಬಿಳಗೂಲಿ ಜಿ ಎಚ್ .ಪಿ ಎಸ್, ಬೆಟ್ಟಸೋಗೆ ಜಿಎಚ್‌ಪಿಎಸ್ ಕೇರಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ್ದು, ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಬಸವಾಪಟ್ಟಣ ಗ್ರಾಮದ ಶ್ರೀ ಶಾರದ ವಿದ್ಯಾಸಂಸ್ಥೆಯ ಕ್ರೀಡಾಪಟುಗಳು ತಮ್ಮದಾಗಿಸಿಕೊಂಡರು.

ಕನ್ನಡಪ್ರಭ ವಾರ್ತೆ ಬಸವಾಪಟ್ಟಣ

ರಾಮನಾಥಪುರ ಹೋಬಳಿ ಮಟ್ಟದ ೨೦೨೪-೨೫ ನೇ ಸಾಲಿನ ಕ್ರೀಡಾಕೂಟವು ಕೆ.ಪಿ.ಎಸ್ ಶಾಲೆಯ ಆವರಣದಲ್ಲಿ ಅರಕಲಗೂಡು ತಾಲೂಕು ಶಿಕ್ಷಣ ಇಲಾಖೆ ಶ್ರೀ ಶಾರದಾ ವಿದ್ಯಾಸಂಸ್ಥೆ ಜಿ ಎಚ್ ಪಿ ಎಸ್ ಕಾಳೇನಹಳ್ಳಿ, ಬಿಳಗೂಲಿ ಜಿ ಎಚ್ .ಪಿ ಎಸ್, ಬೆಟ್ಟಸೋಗೆ ಜಿಎಚ್‌ಪಿಎಸ್ ಕೇರಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ್ದು, ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಬಸವಾಪಟ್ಟಣ ಗ್ರಾಮದ ಶ್ರೀ ಶಾರದ ವಿದ್ಯಾಸಂಸ್ಥೆಯ ಕ್ರೀಡಾಪಟುಗಳು ತಮ್ಮದಾಗಿಸಿಕೊಂಡರು.

ಪ್ರಮಖವಾಗಿ ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಯಶ್ವಂತ್‌ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದರೆ, ೬೦೦ ಮೀ ಓಟ ಸ್ಪರ್ಧೆಯಲ್ಲಿ ೩ನೇ ಸ್ಥಾನ, ೪೦೦ ಮೀ ಓಟದಲ್ಲಿ ಪ್ರಥಮಸ್ಥಾನ, ಚಕ್ರ ಎಸೆತ ಸ್ಪರ್ದೆಯಲ್ಲಿ ಈ ಶಾಲೆಯ ಗೌತಮ್ ಗೌಡ ೨ನೇ ಸ್ಥಾನಗಳಿಸಿದರು. ನಿತಿನ್ ಗೌಡ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, ೨೦೦ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದರು. ಇದೇ ಶಾಲೆಯ ಕ್ರೀಡಾಪಟು ಋತ್ವಿಕ್ ಬಿ ಎಮ್ ೪೦೦ ಮೀ. ಓಟದಲ್ಲಿ ಪ್ರಥಮ, ೪೦೦ ಮೀ ಓಟದಲ್ಲಿ ದ್ವೀತಿಯ ಸ್ಥಾನ ಗಾನವಿ ೪೦೦ ಮೀ ಓಟದಲ್ಲಿ ದ್ವೀತಿಯ ಸ್ಥಾನ, ಕೃತಿಕ ೬೦೦ ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದು ಶಾರದಾ ವಿದ್ಯಾಸಂಸ್ಥೆಗೆ ಸಮಗ್ರ ಪ್ರಶಸ್ತಿ ಗಳಿಸುವಲ್ಲಿ ಶ್ರಮಿಸಿದ್ದು, ಕ್ರೀಡಾಪಟುಗಳ ಈ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರಾದ ರಮೇಶ್ ಕೆ, ಸಹ ಶಿಕ್ಷಕರಾದ ರಮೇಶ್ ಬಿ ನಟರಾಜು, ಮಂಜು ಎಚ್ ಎಲ್ ಮಧುಮೂರ್ತಿ ಅಲ್ಲದೆ ಶ್ರೀ ಶಾರದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು ಶಾಲೆಯ ಕ್ರೀಡಾಪಟುಗಳಿಗೆ ಅಬಿನಂಧನೆಯ ಜೊತೆಗೆ ಮುಂದಿನ ಹಂತದ ಕ್ರೀಡೆಯಲ್ಲ ಯಶಸ್ಸು ಗಳಿಸುವಂತೆ ಶುಭಕೋರಿದ್ದಾರೆ.