ಬಿಜೆಪಿಯಿಂದ ಮಾತ್ರ ಸಮಗ್ರ ಅಭಿವೃದ್ಧಿ: ಹಾಲಪ್ಪ ಆಚಾರ

| Published : Apr 26 2024, 12:52 AM IST

ಸಾರಾಂಶ

ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಮೋದಿ ಅವರನ್ನು ಮತ್ತೊಮ್ಮ ಪ್ರಧಾನಮಂತ್ರಿ ಮಾಡಲು ಬಿಜೆಪಿ ಚಿಹ್ನೆಗೆ ಮತ ನೀಡಬೇಕು

ಲೋಕಸಭಾ ಚುನಾವಣೆಯ ಬಹಿರಂಗ ಸಭೆಯಲ್ಲಿ ಭಾಗವಹಿಸಿದ ಮಾಜಿ ಸಚಿವ

ಕನ್ನಡಪ್ರಭ ವಾರ್ತೆ ಕೊಪ್ಪಳ

ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಸಿಂದೋಗಿ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ದೇಶವೇ ತಲೆ ಬಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಮೋದಿ ಅವರನ್ನು ಮತ್ತೊಮ್ಮ ಪ್ರಧಾನಮಂತ್ರಿ ಮಾಡಲು ಬಿಜೆಪಿ ಚಿಹ್ನೆಗೆ ಮತ ನೀಡಬೇಕು ಎಂದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ದೊರೆತಿವೆ. ಅವರ ಬದುಕನ್ನು ಹಸನಾಗಿಸುವ ಮತ್ತು ದೇಶದ ಅಭಿವೃದ್ಧಿಯ ಓಟವನ್ನು ಇನ್ನು ಹೆಚ್ಚಿನ ವೇಗ ಪಡೆಯುವಂತೆ ಕಳೆದ ಹತ್ತು ವರ್ಷಗಳಿಂದ ಮೋದಿಯವರು ಮಾಡುತ್ತಾ ಬಂದಿದ್ದಾರೆ ಎಂದರು.ಸುಭದ್ರ ಆಡಳಿತಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಬೇಕು. ಆದ್ದರಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸಬೇಕು.

ಈ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ಪ್ರದೀಪ ಹಿಟ್ನಾಳ, ಪ್ರಮುಖರಾದ ಮಹಾಂತೇಶ ಮೈನಳ್ಳಿ, ಈಶಪ್ಪ ಮಾದಿನೂರ, ಗುರುಮೂರ್ತಿ ಸ್ವಾಮಿಗಳು, ಅಶೋಕ, ವೆಂಕಟೇಶ ಹಾಲವರ್ತಿ, ಹನುಮಂತಗೌಡ ಪಾಟೀಲ, ಶರಣಪ್ಪ, ಚಂದ್ರಶೇಖರ ಕವಲೂರು, ನಜೀರ ಸಾಬ್, ಮಹಾಂತೇಶ ಸಂಗತಿ, ಕರಿಯಪ್ಪ ಮೇಟಿ, ಅಜಯ ಅಂಗಡಿ, ನಾಗನಗೌಡ, ಗಣೇಶ ಹೊರ್ತಟ್ನಾಳ, ಮಹಿಳಾ ಮೋರ್ಚಾದ ವಾಣಿ, ಶೋಭಾ ನಗರಿ, ಮಹಾಲಕ್ಷ್ಮಿ ಕಂದಾರಿ ಹಾಗೂ ಉಭಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.