ಸಾರಾಂಶ
ಡಂಬಳ ಗ್ರಾಮ ಪಂಚಾಯತಿಯಲ್ಲಿ ಕೇವಲ ಧ್ವಜಾರೋಹಣ ಮಾಡಿ ವಿವಿಧ ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮ ರದ್ದುಪಡಿಸುವ ಮೂಲಕ ರಾಷ್ಟ್ರೀಯ ಹಬ್ಬಕ್ಕೆ ಧಕ್ಕೆ ತರಲಾಗಿದೆ. ತಕ್ಷಣ ಗ್ರಾಮ ಪಂಚಾಯಿತಿ ಸೂಪರ್ ಸೀಡ್ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಮಂಜಯ್ಯಸ್ವಾಮಿ ಅರವಟಿಗಿಮಠ ಒತ್ತಾಯ ಮಾಡಿದರು.
ಡಂಬಳ: ದೇಶದ ಪ್ರತಿಯೊಂದು ಗ್ರಾಮ ಹಾಗೂ ಮನೆ ಮನೆಯಲ್ಲಿಯು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಬ್ಬದ ವಾತವರಣ ನಿರ್ಮಾಣವಾಗಿದೆ. ಆದ್ರೆ ಡಂಬಳ ಗ್ರಾಮ ಪಂಚಾಯತಿಯಲ್ಲಿ ಕೇವಲ ಧ್ವಜಾರೋಹಣ ಮಾಡಿ ವಿವಿಧ ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮ ರದ್ದುಪಡಿಸುವ ಮೂಲಕ ರಾಷ್ಟ್ರೀಯ ಹಬ್ಬಕ್ಕೆ ಧಕ್ಕೆ ತರಲಾಗಿದೆ. ತಕ್ಷಣ ಗ್ರಾಮ ಪಂಚಾಯಿತಿ ಸೂಪರ್ ಸೀಡ್ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಮಂಜಯ್ಯಸ್ವಾಮಿ ಅರವಟಿಗಿಮಠ ಒತ್ತಾಯ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹೊಸಮನಿ ವಿವಿಧ ಶಾಲೆಗಳ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಗ್ರಾಮ ಪಂಚಾಯತಿ ಆವರಣದಲ್ಲಿ ಯಾಕೆ ಆಯೋಜನೆ ಮಾಡಿಲ್ಲ ಎನ್ನುವುದನ್ನು ತಿಳಿದುಕೊಳ್ಳಲು ಇದೇ ಮಂಗಳವಾರ 19ರಂದು ಗ್ರಾಮ ಪಂಚಾಯತಿಯಲ್ಲಿ ವಿಶೇಷ ಸಭೆ ಕರೆಯುವಂತೆ ಸೂಚನೆ ನೀಡಿದ್ದೇನೆ. ಸಭೆಯಲ್ಲಿ ವಿವಿಧ ಶಾಲೆಗಳ ಮುಖ್ಯಸ್ಥರು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಮತ್ತು ಮಾಜಿ ಸೈನಿಕರು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಯಾಕೆ ರದ್ದು ಪಡಿಸಿದ್ದಾರೆ ಎನ್ನುವದಕ್ಕೆ ಸ್ಪಷ್ಠ ಮಾಹಿತಿ ಸಿಗಲಿದೆ. ನಂತರ ಅಗತ್ಯ ಕ್ರಮ ಗೈಗೊಳ್ಳಲು ಸಹಕಾರಿಯಾಗುತ್ತದೆ ಎನ್ನುತ್ತಾರೆ.ಸ್ಥಳಕ್ಕೆ ಸಿಪಿಐ ಮಂಜುನಾಥ ಕುಸಗಲ್ ಭೇಟಿ ನೀಡಿದರು. ಪ್ರತಿಭಟನೆಯಲ್ಲಿ ಮಾಜಿ ಸೈನಿಕ ವಾಸಪ್ಪ ಕಾಶಭೋವಿ,ರಾಘವೇಂದ್ರ ಹಡಪದ, ಹನಮಂತ ಮೇಗೂರ, ಮಳ್ಳಪ್ಪ ಆದಮ್ಮನವರ, ಜನಪದ ಕಲಾವಿದ ಹುಲಗಪ್ಪ ಜೊಂಡಿ, ಗುಡದಪ್ಪ ತಳಗೇರಿ, ತಿಮ್ಮಣ್ಣ ವಡ್ಡರ, ರಾಮಣ್ಣ ಅಡವಿಸೋಮಾಪೂರ ಇದ್ದರು.