ಬಸ್ ಸೌಕರ್ಯದ ಅವ್ಯವಸ್ಥೆ ಸರಿಪಡಿಸಲು ಒತ್ತಾಯ

| Published : May 30 2024, 12:46 AM IST

ಸಾರಾಂಶ

ಮುದಗಲ್ ಪಟ್ಟಣದ ಮೂಲಕ ಹಾದುಹೋಗುವ ಬಸ್ ಸೌಕರ್ಯದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಕರವೇ ಘಟಕದವರು ಮನವಿ ಸಲ್ಲಿಸಿದರು.

ಮುದಗಲ್: ಪಟ್ಟಣದ ಮೂಲಕ ರಾತ್ರಿ ಪಾಳಯದಲ್ಲಿ ಹಾದುಹೋಗುವ ಕೆಲ ಬಸ್‌ಗಳು ಬೈಪಾಸ್ ಮಾರ್ಗದ ಮೂಲಕ ತೆರಳುತ್ತಿದ್ದು, ಇದರಿಂದಾಗಿ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿವೆ. ಈ ಮುಂಚೆಯಂತೆ ಬಸ್‌ಗಳನ್ನು ಸಂಚರಿಸುವಂತೆ ಮಾಡಿ ತೊಂದರೆಯನ್ನು ಶೀಘ್ರವೇ ಪರಿಹರಿಸುವಂತೆ ಒತ್ತಾಯಿಸಿ ಕರವೇ ಘಟಕದ ವತಿಯಿಂದ ಲಿಂಗಸಗುರು ಡಿಪೋ ವ್ಯವಸ್ಥಾಪಕ ರಾಹುಲ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಕರವೇ ಘಟಕಾಧ್ಯಕ್ಷ ಎಸ್.ಎ. ನಯೀಮ್ ಮಾತನಾಡಿ, ಬೆಳಗ್ಗೆ ಶಾಲೆ ಕಾಲೇಜು ಅವಧಿಯಲ್ಲಿ ಸರಿಯಾಗಿ ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಸೂಕ್ತ ಸಾರಿಗೆ ಸೌಕರ್ಯ ಒದಗಿಸಬೇಕು. ರಾತ್ರಿ ಪಾಳಯದಲ್ಲಿ ಮುದಗಲ್ ಮಾರ್ಗದ ಮೂಲಕ ಹಾದುಹೋಗುವ ಎಲ್ಲಾ ಬಸ್‌ಗಳು ಪಟ್ಟಣದೊಳಗೆ ಬಂದು ಹೋಗುವ ವ್ಯವಸ್ಥೆ ಕಡ್ಡಾಯವಾಗಿ ಆಗಬೇಕು ಎಂಬ ಇತ್ಯಾದಿ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿ ಆಗ್ರಹಿಸಲಾಯಿತು.ಈ ಹಿಂದೆ ಕರವೇ ಘಟಕದವರೇ ಹೋರಾಟದ ಮೂಲಕ ಬಸ್ ಸೌಕರ್ಯವನ್ನು ಸಾರ್ವಜನಿಕ ಸೇವೆಗೆ ನೀಡಬೇಕು ಎಂದು ಒತ್ತಾಯಿಸಿತ್ತು.

ಈ ಸಂದರ್ಭದಲ್ಲಿ ಕರವೇ ಘಟಕದ ಪದಾಧಿಕಾರಿಗಳಾದ ಎಸ್.ಎನ್. ಖಾದ್ರಿ, ಮಹಾಂತೇಶ, ಸಾಬುಹುಸೇನ್, ಚನ್ನಪ್ಪ ಉಪ್ಪಾರ, ನಾಗರಾಜ ಮಟ್ಟೂರ, ಆವೆಜ್ ಪಾಷಾ, ರೆಹಮಾನ್ ಜಂಬಾಳಿ, ಗ್ಯಾನಪ್ಪ, ಖಾನ್ ರಫಿ, ಇಸ್ಮಾಯಿಲ್ ಸೇರಿ ಮುದಗಲ್ ಬಸ್ ನಿಲ್ದಾಣದ ಅಧಿಕಾರಿಗಳಿದ್ದರು.