ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

| Published : Jul 11 2024, 01:35 AM IST

ಸಾರಾಂಶ

ಅಂಗನವಾಡಿ ಕಾರ್ಯಕರ್ತರು ಶಕ್ತಿಮೀರಿ ಎಲ್ಲ ಕ್ಷೇತ್ರಗಳನ್ನು ನಿಭಾಯಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

2024-25ನೇ ಬಜೆಟ್ ನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಣ ಮೀಸಲಿಡಬೇಕು, ಅಂಗನವಾಡಿಗಳನ್ನು ಬಲಪಡಿಸಬೇಕು ಹಾಗೂ ನೌಕರರಿಗೆ ಶಾಸನಬದ್ಧ ಸೌಲಭ್ಯ ಒದಗಿಸಬೇಕೆಂದು ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ. ಕಾವೇರಿ ಸರ್ಕಾರವನ್ನು ಒತ್ತಾಯಿಸಿದರು.

ತಾಲೂಕು ಆಡಳಿತ ಭವನ ಮುಂಭಾಗ ಧರಣಿ ನಡೆಸಿ ಘೋಷಣೆ ಕೂಗುತ್ತಾ ಅಂಗನವಾಡಿ ಕಾರ್ಯಕರ್ತರು ಶಕ್ತಿಮೀರಿ ಎಲ್ಲ ಕ್ಷೇತ್ರಗಳನ್ನು ನಿಭಾಯಿಸುತ್ತಿದ್ದಾರೆ. ಶ್ರಮಕ್ಕೆ ತಕ್ಕ ಸಂಬಳ ನೀಡದೆ ಸರ್ಕಾರ ನಮ್ಮನ್ನು ವಂಚಿಸುತ್ತಿದೆ, ಕಳೆದ ಐದು ದಶಕಗಳಿಂದಲೂ ನಿಸ್ವಾರ್ಥ ಸೇವೆಯಿಂದ ದುಡಿಯುತ್ತಿರುವ ಸುಮಾರು 26 ಲಕ್ಷ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರನ್ನು ಇನ್ನೂ ಕಾರ್ಮಿಕರಾಗಿ ಗುರುತಿಸಲು ಸರ್ಕಾರ ಜವಾಬ್ದಾರಿ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ, ನಮ್ಮ ಯೋಜನೆಯನ್ನು ಕಾರ್ಯಕರ್ತರನ್ನು ಕಾರ್ಮಿಕರೆಂದು ಗುರುತಿಸಿ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರನ್ನು ಕಾಯಂ ಮಾಡಿ ಕೂಡಲೇ ಆದೇಶ ಹೊರಡಿಸಬೇಕು, ಅದೇ ರೀತಿ ವೇತನನ್ನು ಹೆಚ್ಚು ಮಾಡಬೇಕು ಗ್ರಾಜುಟಿಯನ್ನು ತಕ್ಷಣವೇ ಜಾರಿಗೊಳಿಸಬೇಕು, ಶ್ರಮಿಕರಿಗೆ ಮಾರಕವಾಗಿರುವ ಕಾರ್ಮಿಕ ಹಿತಗಳನ್ನು ತೆಗೆಯಬೇಕು ಎಂದು ಒತ್ತಾಯಿಸಿದರು.

ಶಿರಸ್ತೆದಾರ್ ಶಕೀಲಾ ಬಾನು ಮನವಿ ಪತ್ರ ಸ್ವೀಕರಿಸಿದರು. ಕಾರ್ಯದರ್ಶಿ ಎಸ್.ಕೆ. ರಾಣಿ, ಖಜಾಂಚಿ ಸುಧಾಮಣಿ, ಜಯಂತಿ, ತಾಲೂಕು ಪದಾಧಿಕಾರಿಗಳು, ಅಂಗನವಾಡಿ ಸದಸ್ಯರು, ಸಹಾಯಕರು ಇದ್ದರು.