ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಿ: ಮೆಂಡೇಗಾರ

| Published : Dec 29 2024, 01:18 AM IST

ಸಾರಾಂಶ

ವಿದ್ಯಾರ್ಥಿಗಳು ಕಡ್ಡಾಯವಾಗಿ ವಾಹನ ಲೈಸನ್ಸ್‌ ಪಡೆದ ನಂತರವೇ ವಾಹನ ಚಲಾಯಿಸಬೇಕು. ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್‌ ಧರಿಸಬೇಕು

ಕನ್ನಡಪ್ರಭ ವಾರ್ತೆ ಜಮಖಂಡಿ

ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಬೇಕು ಎಂದು ಶಹರಠಾಣೆ ಎಎಸ್‌ಐ ಎಚ್‌.ಎಸ್‌.ಮೆಂಡೆಗಾರ ಹೇಳಿದರು.

ಶಹರ ಪೊಲೀಸ್ ಠಾಣೆ ಹಾಗೂ ಬಾಲಕರ ಸರಕಾರಿ ಪ.ಭಾ.ಪದವಿ ಪೂರ್ವ ಕಾಲೇಜು ಜಮಖಂಡಿ ಸಹಯೋಗದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಇಕೋಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಡ್ಡಾಯವಾಗಿ ವಾಹನ ಲೈಸನ್ಸ್‌ ಪಡೆದ ನಂತರವೇ ವಾಹನ ಚಲಾಯಿಸಬೇಕು. ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್‌ ಧರಿಸಬೇಕು ಮತ್ತು ಸಂಚಾರಿ ನಿಯಮ ಪಾಲಿಸಬೇಕೆಂದರು. ಪೊಲೀಸ್ ಅಧಿಕಾರಿ ಎಸ್.ಬಿ. ಹೊಸೂರ ಮಾತನಾಡಿ, ನಾವೆಲ್ಲರೂ ಸಂವಿಧಾನ ಬದ್ಧ ಕಾನೂನು ಪಾಲಿಸುವುದರಿಂದ ಅಪರಾಧಗಳ ಸಂಖ್ಯೆ ಕಡಿಮೆ ಮಾಡಬಹುದೆಂದರು. ಅತಿಥಿಯಾಗಿ ಭಾಗವಹಿಸಿದ್ದ ಪಿ.ಬಿ.ಕಾಖಂಡಕಿಯವರು ಮಾತನಾಡಿ, ಸೈಬರ್ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿನೀಡಿದರು.

ಉಪನ್ಯಾಸಕಿ ಭವಾನಿ ಗುಗ್ಗರಿ ಪ್ರಾರ್ಥನಾಗೀತೆ ಹಾಡಿದರು. ಉಪನ್ಯಾಸಕಿ ಬಿ.ಎಸ್.ಭಾಗೋಜಿ ಸ್ವಾಗತಿಸಿ, ಸುನೀಲ ಕೋರೆ ಅತಿಥಿಗಳ ಪರಿಚಯಿಸಿ, ಡಾ.ಲಿಂಗಾನಂದ ಗವಿಮಠ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಸುರೇಶ ಬಿರಾದಾರ ವಹಿಸಿದ್ದರು. ವೇದಿಕೆ ಮೇಲೆ ಪೊಲೀಸ್ ಇಲಾಖೆ ಲೋಕೇಶ ಯಲಶೆಟ್ಟಿ, ಆರ್.ವೈ.ಪೂಜಾರಿ ಹಾಗೂ ಹಿರಿಯ ಉಪನ್ಯಾಸಕ ಅಶೋಕ ರಾಮದುರ್ಗ, ಎನ್‌ಎಸ್‌ಎಸ್ ಸಂಯೋಜಕ ಐ.ಎಸ್.ಹೆಬ್ಬಾಳ ಇದ್ದರು. ಉಪನ್ಯಾಸಕಿ ಸಿ.ಎಸ್.ಜನಗೊಂಡ ನಿರೂಪಿಸಿದರು. ಉಪನ್ಯಾಸಕ ಕೆ.ಎಸ್. ಪೂಜಾರಿ ವಂದಿಸಿದರು.