ಯಾವುದೇ ಆಮಿಷಕ್ಕೊಳಗಾಗದೇ ಕಡ್ಡಾಯ ಮತದಾನ ಮಾಡಿ: ದಯಾವತಿ

| Published : Apr 14 2024, 01:55 AM IST

ಯಾವುದೇ ಆಮಿಷಕ್ಕೊಳಗಾಗದೇ ಕಡ್ಡಾಯ ಮತದಾನ ಮಾಡಿ: ದಯಾವತಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಆಮಿಷಕ್ಕೊಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಯೋಗ್ಯ ಆರ್ಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕ ಅಧಿಕಾರಿ ದಯಾವತಿ ಹೇಳಿದರು.

ಚುನಾವಣಾ ಆಯೋಗ- ಜಿಲ್ಲಾ ಸ್ವಿಪ್‌ ಸಮಿತಿ ಮತದಾನ ಜಾಗೃತಿ ಬೈಕ್‌ ಜಾಥಾಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಯಾವುದೇ ಆಮಿಷಕ್ಕೊಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಯೋಗ್ಯ ಆರ್ಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಕ ಅಧಿಕಾರಿ ದಯಾವತಿ ಹೇಳಿದರು.ಶುಕ್ರವಾರ ತಾಪಂ ಕಚೇರಿ ಆವರಣದಲ್ಲಿ ಚುನಾವಣಾ ಆಯೋಗ ಮತ್ತು ಜಿಲ್ಲಾ ಸ್ವಿಪ್‌ ಸಮಿತಿಯಿಂದ ನಡೆದ ಮತದಾನ ಜಾಗೃತಿ ಬೈಕ್‌ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಏ.26 ರಂದು ಆಯಾ ಗ್ರಾಮದ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 18 ವರ್ಷ ವಯಸ್ಸು ತುಂಬಿದ ಯುವ ಸಮೂಹ ಮೊದಲು ಮತದಾನ ಮಾಡುವ ಸಂಭ್ರಮದಲ್ಲಿ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ ನಂತರ ಗ್ರಾಮದ ಇತರೆ ಮತದಾರರಿಗೆ ಕಡ್ಡಾಯ ಮತದಾನದ ಬಗ್ಗೆ ತಿಳಿ ಹೇಳುವ ಕೆಲಸ ಮಾಡಿದರೆ ಮತದಾನದ ಶೇಕಡವಾರು ಪ್ರಮಾಣದಲ್ಲಿ ಏರಿಕೆ ಕಾಣಲಿದೆ. ಶೇ.100 ರಷ್ಟು ಮತದಾನವಾದರೆ ಚುನಾವಣಾ ಆಯೋಗ ಮಾಡಿದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದಂತಾಗುತ್ತದೆ ಎಂದು ತಿಳಿಸಿದರು.85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತದಾನಕ್ಕಾಗಿ ಮತಗಟ್ಟೆಗೆ ಹಾಜರಾಗಬೇಕಿಲ್ಲ. ಮತದಾರರ ಓಟ್ಟಿಯ ಸಂಖ್ಯೆ ನೀಡಲು ಬಿಎಲ್‌ಒಗಳು ಮನೆಗಳಿಗೆ ಭೇಟಿ ನೀಡಿದಾಗ ಮುಂಚಿತವಾಗಿ ಅವರಿಗೆ ತಿಳಿಸಿದರೆ ಅಂತಹವರನ್ನು ಗುರುತಿಸಿ ಅವರ ಮನೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಎಂದು ಖಾತ್ರಿಪಡಿಸಿಕೊಳ್ಳಲು ಓಟರ್ ಹೆಲ್ಪ್ ಲೈನ್‌ ಆಪ್ ಮೂಲಕ ಪರಿಶೀಲನೆ ನಡೆಸಬಹುದಾಗಿದೆ. ಮತದಾರರಿಗೆ ಹಣ ಅಥವಾ ಇತರೆ ಯಾವುದೇ ಉಡುಗೊರೆ ವಸ್ತು ಹಂಚಿದರೆ ಅಥವಾ ಆಮಿಷ ಒಡ್ಡುವುದು ಕಂಡು ಬಂದರೆ 1905 ಸಂಖ್ಯೆಗೆ (ಟೋಲ್ ಫ್ರೀ) ಕರೆ ಮಾಡಿ ತಿಳಿಸಿದರೆ ಆಕ್ರಮವೆಸಗುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹಳೆ ಮೂಡಿಗೆರೆ ಗ್ರಾಮ ವಿಡಿಯೋ ಪ್ರಶಾಂತ್, ಪಿಡಿಒ ಗಳಾದ ದುಗ್ಗಮ್ಮ ಕಿರುಗುಂದ, ಸಾಹಿತ್ಯ, ಪುನರ್ವ, ಪಟ್ಟಣ ಪಂಚಾಯ್ತಿ ಅಮಿನ ಇದ್ದರು. 12 ಕೆಸಿಕೆಎಂ 6ಮೂಡಿಗೆರೆ ತಾಪಂ ಕಚೇರಿ ಆವರಣದಲ್ಲಿ ಮತದಾನ ಜಾಗೃತಿ ಜಾಥಾಕ್ಕೆ ತಾಪಂ ಇಒ ದಯಾವತಿ ಚಾಲನೆ ನೀಡಿದರು.