ಸಾರಾಂಶ
ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಬಳಕೆಯ ಅನಿವಾರ್ಯತೆಯಿದ್ದು, ವಿದ್ಯಾರ್ಥಿದೆಸೆಯಿಂದಲೇ ಅದರ ಪ್ರಾಥಮಿಕ ಅರಿವು ಮೂಡಿಸುವ ಉದ್ದೇಶ ಇದರಿಂದ ಈಡೇರಲಿದೆ ಎಂದು ಮಾಜಿ ಶಾಸಕ ಮತ್ತು ಅರಸೀಕಟ್ಟೆ ಅಮ್ಮ ದೇವಾಲಯದ ಸಮಿತಿ ಅಧ್ಯಕ್ಷ ಡಾ. ಎ.ಟಿ. ರಾಮಸ್ವಾಮಿ ಹೇಳಿದರು. ಕೋಟವಾಳು ಗ್ರಾಮದಲ್ಲಿರುವ ವಿದ್ಯಾನಿಕೇತನ ಶಾಲೆಯ ಸಭಾಂಗಣದಲ್ಲಿ ಅರಸೀಕಟ್ಡೆ ಅಮ್ಮ ದೇವಾಲಯದ ಸಮಿತಿವತಿಯಿಂದ 2 ಲಕ್ಷ 50 ಸಾವಿರ ರು. ವೆಚ್ಚದಲ್ಲಿ ಕಂಪ್ಯೂಟರ್ ಹಾಗೂ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ನಂತರ ಮಾತನಾಡಿದ ಅವರು, ಇಂದಿನ ಯುಗದಲ್ಲಿ ಅತಿಅವಶ್ಯವಾಗಿ ಕಂಪ್ಯೂಟರ್ ಬೇಕಾಗಿದ್ದು, ಶಾಲಾ ವಿದ್ಯಾರ್ಥಿಗಳು ಅಲ್ಲದೇ ಇತರೆ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ರಾಮನಾಥಪುರ: ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಬಳಕೆಯ ಅನಿವಾರ್ಯತೆಯಿದ್ದು, ವಿದ್ಯಾರ್ಥಿದೆಸೆಯಿಂದಲೇ ಅದರ ಪ್ರಾಥಮಿಕ ಅರಿವು ಮೂಡಿಸುವ ಉದ್ದೇಶ ಇದರಿಂದ ಈಡೇರಲಿದೆ ಎಂದು ಮಾಜಿ ಶಾಸಕ ಮತ್ತು ಅರಸೀಕಟ್ಟೆ ಅಮ್ಮ ದೇವಾಲಯದ ಸಮಿತಿ ಅಧ್ಯಕ್ಷ ಡಾ. ಎ.ಟಿ. ರಾಮಸ್ವಾಮಿ ಹೇಳಿದರು.
ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟವಾಳು ಗ್ರಾಮದಲ್ಲಿರುವ ವಿದ್ಯಾನಿಕೇತನ ಶಾಲೆಯ ಸಭಾಂಗಣದಲ್ಲಿ ಅರಸೀಕಟ್ಡೆ ಅಮ್ಮ ದೇವಾಲಯದ ಸಮಿತಿವತಿಯಿಂದ 2 ಲಕ್ಷ 50 ಸಾವಿರ ರು. ವೆಚ್ಚದಲ್ಲಿ ಕಂಪ್ಯೂಟರ್ ಹಾಗೂ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ನಂತರ ಮಾತನಾಡಿದ ಅವರು, ಇಂದಿನ ಯುಗದಲ್ಲಿ ಅತಿಅವಶ್ಯವಾಗಿ ಕಂಪ್ಯೂಟರ್ ಬೇಕಾಗಿದ್ದು, ಶಾಲಾ ವಿದ್ಯಾರ್ಥಿಗಳು ಅಲ್ಲದೇ ಇತರೆ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ವಿದ್ಯಾನಿಕೇತನ ವಿದ್ಯಾಸಂಸ್ಥೆ ಅಧ್ಯಕ್ಷರು ಕೋಟವಾಳು ವಿರೂಪಾಕ್ಷ, ಹಿರಿಯ ವಕೀಲರು ಜನಾರ್ದನಗುಪ್ತ, ತಾಪಂ ಮಾಜಿ ಅಧ್ಯಕ್ಷರು ಮಾದೇಶ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಕಾಳೇಗೌಡ, ಮಾಜಿ ಸದಸ್ಯ ದಿವಾಕರ್ ಮುಂತಾದವರು ಇದ್ದರು.