ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಅತ್ಯಗತ್ಯ

| Published : Jan 25 2024, 02:02 AM IST

ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಅತ್ಯಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನುರಿತ ಶಿಕ್ಷಕರನ್ನು ಸರಕಾರಿ ಕಾಲೇಜಿಗಳಿಗೆ ನೇಮಕ ಮಾಡುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡಲಾಗುವುದು. ಶಿಕ್ಷಣದ ಗುಣಮಟ್ಟ ಹೆಚ್ಚಿಸಿದಾಗ ಮಾತ್ರ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಕ್ಕಳು ಬರುತ್ತಾರೆ

ಕನ್ನಡಪ್ರಭ ವಾರ್ತೆ ಕೆಜಿಎಫ್

ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಂಪ್ಯೂಟರ್ ಜ್ಞಾನ ಹೊಂದಬೇಕು, ಬದಲಾದ ಪರಿಸ್ಥಿತಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಈ ಜ್ಞಾನವು ಅಗತ್ಯ ಎಂದು ಶಾಸಕಿ ರೂಪಕಲಾಶಶಿಧರ್ ಹೇಳಿದರು.

ಕೆಜಿಎಫ್‌ನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯುಟಿಐನ ಸಿಎಸ್‌ಆರ್ ಅಡಿಯ 15 ಲಕ್ಷ ರು.ಗಳ ವೆಚ್ಚದ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.

ದಾನಿಗಳು ನೀಡಿದ ಕೊಡುಗೆ

ಯುಟಿಐ ಮ್ಯಾನೇಜ್ಮೆಂಟ್ ಕಂ.ಲಿಮಿಟೆಡ್, ಸಂಯೋಜಕರು ಕೆನರಾ ಬ್ಯಾಂಕ್, ಜ್ಯೂಬಲಿ ಶಿಕ್ಷಣ ನಿಧಿ ಬೆಂಗಳೂರು ಅವರು ಕಾಲೇಜಿಗೆ ೧೫ ಲಕ್ಷ ರೂ.ಗಳ ಕಂಪ್ಯೂಟರ್‌ಗಳನ್ನು ಕಾಲೇಜಿಗೆ ದಾನವಾಗಿ ನೀಡಿರುವುದಕ್ಕೆ ಶಾಸಕಿ ರೂಪಕಲಾ ಶಶಿಧರ್ ಪ್ರಶಂಸೆ ವ್ಯಕ್ತಪಡಿಸಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಕೂಡ ಸಾಕಷ್ಟು ಬದಲಾವಣೆಯಾಗಿವೆ, ಎಲ್ಲರಿಗೂ ಡಿಜಿಟಲ್ ಶಿಕ್ಷಣ ಸಿಗುವಂತಾಗಬೇಕು, ತಂತ್ರಜ್ಞಾನದ ಬಳಕೆಯ ಬಗ್ಗೆಯೂ ವಿದ್ಯಾರ್ಥಿಗಳು ತಿಳಿದಿರಬೇಕು, ಅತಂಹ ಶಿಕ್ಷಣ ಪ್ರತಿ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ನೀಡಬೇಕೆಂದು ಉಪಾನ್ಯಸಕರಿಗೆ ಕರೆ ನೀಡಿದರು.

ಕಾಲೇಜುಗಳಿಗೆ ಅಗತ್ಯ ಸೌಲಭ್ಯ

ಸರಕಾರಿ ಕಾಲೇಜುಗಳಲ್ಲಿ ಅತ್ಯಾಧುನಿಕ ಶೌಚಾಲಯಗಳ ನಿರ್ಮಾಣ, ಉತ್ತಮ ಗ್ರಂಥಾಲಯ, ಶಾಲೆಗೆ ಅಗತ್ಯವಿರುವ ಶುದ್ದ ಕುಡಿವ ನೀರು, ಅಗತ್ಯವಿರುವ ಪಿಠೋಪಕರಣ, ನುರಿತ ಶಿಕ್ಷಕರನ್ನು ಸರಕಾರಿ ಕಾಲೇಜಿಗಳಿಗೆ ನೇಮಕ ಮಾಡುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ ನೀಡಲಾಗುವುದೆಂದು. ಶಿಕ್ಷಣದ ಗುಣಮಟ್ಟ ಹೆಚ್ಚಿಸಿದಾಗ ಮಾತ್ರ ಸರಕಾರಿ ಶಾಲೆಗಳಿಗೆ ಮಕ್ಕಳು ಬರಲಿದ್ದಾರೆಂದು ಶಾಸಕರು ತಿಳಿಸಿದರು.

ಸರ್ಕಾರಿ ಕಾರ್‍ಯಕ್ರಮಗಳಲ್ಲಿ ಹಾರ ತೂರಾಯಿ ಹಾಕುವುದನ್ನು ಸರ್ಕಾರ ನಿಷೇಧಿಸಿದೆ, ಇದರ ಬದಲು ಪುಸಕ್ತಗಳನ್ನು ನೀಡಬೇಕೆಂದು ಕಾರ್‍ಯಕ್ರಮದ ಆಯೋಜಕರಿಗೆ ಶಾಸಕರು ತಿಳಿಸಿದರು. ಶಾಲು, ಹಾರ, ಹಣ್ಣುಗಳನ್ನು ಇನ್ನು ನೀಡಬಾರದೆಂದು ಸೂಚಿಸಿದರು.ಯುಟಿಐನ ಸದಸ್ಯ ಶೇಷಾದ್ರಿ ಮಾತನಾಡಿ, ಸರಕಾರಿ ಕಾಲೇಜುಗಳ ಶಿಕ್ಷಣದ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ಸರಕ್ಷತೆಯನ್ನೂ ಒದಗಿಸಬೇಕು, ಸರಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣಕ್ಕೆ ಉತ್ತಮ ಪರಿಸರದ ಜೊತೆಗೆ ನಿರ್ವಹಣೆ ಮಾಡಬೇಕೆಂದು ಸಲಹೆ ನೀಡಿದರು.

ಪದವಿ ಪೂರ್ವ ಕಾಲೇಜುಗಳ ಉಪ ನಿದೇರ್ಶಕ ರಾಮಚಂದ್ರಪ್ಪ, ಯುಟಿಐನ ಎನ್.ಎಸ್.ಶ್ರೀನಾಥ, ಪ್ರಾಂಶುಪಾಲ ಮುನಿರತ್ನಂ, ತಹಸೀಲ್ದಾರ್ ನಾಗವೇಣಿ, ಮುಖಂಡರಾದ ಅ.ಮು.ಲಕ್ಷ್ಮೀನಾರಾಯಣ್, ಪದ್ಮನಾಭರೆಡ್ಡಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಅಶ್ವತ್ಥ್‌ ಇದ್ದರು.