ಅಬಾಕಸ್ ಅಭ್ಯಾಸದಿಂದ ಏಕಾಗ್ರತೆ ಹೆಚ್ಚುವುದು: ರಾಥೋಡ

| Published : Jun 02 2024, 01:47 AM IST

ಸಾರಾಂಶ

ತುರ್ವಿಹಾಳ ಪಟ್ಟಣದಲ್ಲಿ ಎನ್ ಬಿಸಿಇ ಸಂಸ್ಥೆಯ ಐದನೇಯ ವಾರ್ಷಿಕೋತ್ಸವ ಸಮಾರಂಭ ಮತ್ತು ಇಂಟರ್ ಕಾಂಪಿಟೇಷನ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ತುರ್ವಿಹಾಳ

ಅಬಾಕಸ್ ಅಭ್ಯಾಸದಿಂದ ಮಕ್ಕಳ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಎಂದು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದೇವಿದಾಸ ರಾಠೋಡ ಹೇಳಿದರು.

ಪಟ್ಟಣದಲ್ಲಿ ಎನ್‌ಬಿಸಿಇ ಸಂಸ್ಥೆಯ ಐದನೇಯ ವಾರ್ಷಿಕೋತ್ಸವ ಸಮಾರಂಭ ಮತ್ತು ಇಂಟರ್ ಕಾಂಪಿಟೇಷನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಬಾಕಸ್ ವಿಧಾನದ ಮೂಲ ಸಾಧನ. ಇದನ್ನು ಭಾರತೀಯ ಶಾಲೆಗಳಲ್ಲಿ ಉಪಯೋಗಿಸುತ್ತಿದ್ದರೂ ಅದರ ಮಹತ್ವವನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ. ಅಬಾಕಸ್ ವಿಧಾನ ಅಭ್ಯಾಸ ಮಾಡಿದರೆ ಅತ್ಯಂತ ವೇಗವಾಗಿ ಗಣಿತದ ಲೆಕ್ಕಗಳನ್ನು ಮಾಡ ಬಹುದಾಗಿದೆ. ಎಷ್ಟೇ ದೊಡ್ಡ ಸಂಖ್ಯೆ ಇದ್ದರೂ ಕೂಡಿಸುವುದು, ಕಳೆಯುವುದು, ಗುಣಿಸುವುದು ಹಾಗೂ ಭಾಗಿಸುವುದನ್ನು ಕೆಲವೇ ಕ್ಷಣಗಳಲ್ಲಿ ಮಾಡಬಹುದಾಗಿದೆ. ಈ ವಿಧಾನದಲ್ಲಿ ನೆನಪಿನ ಶಕ್ತಿ ವೃದ್ಧಿಸುತ್ತದೆ ಮತ್ತು ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಎಂದರು.

ಆರ್‌ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶಂಕರ ಮಾತನಾಡಿ, ಅಬಾಕಸ್‌ ತರಬೇತಿ ಪಡೆಯುವುದರಿಂದ ಮಕ್ಕಳಲ್ಲಿ ಸೃಜನಶೀಲತೆ, ಊಹಾತ್ಮ ಕೌಶಲ್ಯ, ಮನಸ್ಸು ಕೇಂದ್ರೀಕರಣ, ಜ್ಞಾಪಕ ಶಕ್ತಿ ಅಭಿವೃದ್ಧಿ ಸೇರಿ ಸರ್ವತೋಮುಖ ಜ್ಞಾನಾಭಿವೃದ್ಧಿಯಾಗಲಿದೆ ಎಂದರು.

ಕಾರ್ಯಕ್ರಮವನ್ನು ಗುಂಡಯ್ಯ ಅಪ್ಪಾಜಿ ಸರ್ವೇಶ್ವರ ಮಠ ಅವರು ಉದ್ಘಾಟಿಸಿದರು. ಇಂಟರ್ ಕಾಂಪಿಟೇಷನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಬಹುಮಾನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕರೇಶಪ್ಪ ಸಾಹುಕಾರ, ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಕಳಕಪ್ಪ ಗಡೇದ, ವಿಎಸ್ಎಸ್ಎನ್ ವ್ಯವಸ್ಥಾಪಕ ವಿರೇಶ್, ಎನ್‌ಬಿಸಿಇ ಕಂಪ್ಯೂಟರ್ ಮತ್ತು ಅಬಾಕಸ್ ಅಕಾಡೆಮಿ ವ್ಯವಸ್ಥಾಪಕಿ ಲಕ್ಷ್ಮಿ ಹೂಗಾರ, ಕಂಪ್ಯೂಟರ್ ಶಿಕ್ಷಕರಾದ ಶಾಂಭವಿ, ಸುನೀಲ್, ಬಸವರಾಜ್, ಸರಸ್ವತಿ ಹಾಗೂ ಅಬಾಕಸ್ ಶಿಕ್ಷಕಿ ನಾಗರತ್ನ ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.