ಸಾರಾಂಶ
ಮಹಿಳಾ ಸಬಲೀಕರಣಕ್ಕಾಗಿ ಯೋಗ, ಯೋಗದ ಪ್ರಾಚೀನತೆ, ಯೋಗದ ವೈಜ್ಞಾನಿಕ ಸಂಶೋಧನೆಗಳ ಪಕ್ಷಿನೋಟ, ಭಾನುವಾರ ಭಗವದ್ಗೀತೆಯಲ್ಲಿ ಯೋಗದ ಅನಾವರಣ,
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಪ್ರಥಮ ಯೋಗ ಸಮ್ಮೇಳನಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು. ಸಮಾರೋಪ ಸಮಾರಂಭದಲ್ಲಿ ಸಾಧಕರಿಗ ಯೋಗ ರತ್ನಾಕರ ಪ್ರಶಸ್ತಿ ಪ್ರದಾನ ಮಾಡಲಾಯಿತು.ಎ.ಎನ್. ಮೂರ್ತಿ, ಡಾ.ಶಶಿರೇಖಾ, ಸಂತೋಷ್ ಕುಮಾರ್, ಸಿ. ರಮೇಶ್ ಶೆಟ್ಟಿ, ಎಂ.ಎಸ್. ರಮೇಶ್ ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟವು ಸರ್ಕಾರಿ ಆಯುರ್ವೇದ ಕಾಲೇಜು, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜು, ವಿವಿಧ ಯೋಗ ಸಂಸ್ತೆಗಳ ಸಹಯೋಗದಲ್ಲಿ ಈ ಸಮ್ಮೇಳನವನ್ನು ಏರ್ಪಡಿಸಿದ್ದವು.ಸಮ್ಮೇಳಾಧ್ಯಕ್ಷ ಡಾ.ಕೆ.ಎಲ್. ಶಂಕರನಾರಾಯಣ ಜೋಯಿಸ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ರವಿಶಾಸ್ತ್ರಿ, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರಾಧಾಕೃಷ್ಣ ರಾಮರಾವ್,ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ, ಪ್ರಧಾನ ಸಂಚಾಲಕ ಎನ್. ಅನಂತ, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮೂರ್ತಿ, ಉಪಾಧ್ಯಕ್ಷ ಪಿ.ಎನ್. ಗಣೇಶಕುಮಾರ್, ಖಜಾಂಚಿ ಅರವಿಂದ ಶರ್ಮ ಮೊದಲಾದವರು ಇದ್ದರು.
ಶನಿವಾರ ಉದ್ಘಾಟನೆಯ ನಂತರ ಮಹಿಳಾ ಸಬಲೀಕರಣಕ್ಕಾಗಿ ಯೋಗ, ಯೋಗದ ಪ್ರಾಚೀನತೆ, ಯೋಗದ ವೈಜ್ಞಾನಿಕ ಸಂಶೋಧನೆಗಳ ಪಕ್ಷಿನೋಟ, ಭಾನುವಾರ ಭಗವದ್ಗೀತೆಯಲ್ಲಿ ಯೋಗದ ಅನಾವರಣ, ಯೋಗ ಪ್ರಾತ್ಯಕ್ಷಿಕೆ, ಅಧ್ಯಾತ್ಮಿಕ ಸಾಧನೆಗೆ ಯೋಗ, ಪತಂಜಲಿ ಯೋಗಸೂತ್ರಗಲಲ್ಲಿ ವೈಜ್ಞಾನಿಕ ನೋಟ, ಚಿಕಿತ್ಸೆಯಾಗಿ ಯೋಗ ಕುರಿತ ಗೋಷ್ಠಿಗಳು ನಡೆದವು.