ಟ್ರಾಕ್ಟರ್ ರ್ಯಾಲಿ ಅವಕಾಶ ನೀಡದ ಪೋಲಿಸರ ಕ್ರಮಕ್ಕೆ ಖಂಡಿನೆ

| Published : Aug 18 2024, 01:45 AM IST

ಟ್ರಾಕ್ಟರ್ ರ್ಯಾಲಿ ಅವಕಾಶ ನೀಡದ ಪೋಲಿಸರ ಕ್ರಮಕ್ಕೆ ಖಂಡಿನೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆಯಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ರೈತರ ಟ್ಯಾಕ್ಟರ್ ರ್ಯಾಲಿಗೆ ಅವಕಾಶ ನೀಡದೆ ರೈತರ ಬಂಧನ ಮಾಡಿದ ಪೊಲೀಸ್ ಕ್ರಮದ ವಿರುದ್ಧ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸ್ವಾತಂತ್ರ್ಯ ದಿನಾಚರಣೆಯಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ರೈತರ ಟ್ಯಾಕ್ಟರ್ ರ್ಯಾಲಿಗೆ ಅವಕಾಶ ನೀಡದೆ ರೈತರ ಬಂಧನ ಮಾಡಿದ ಪೊಲೀಸ್ ಕ್ರಮದ ವಿರುದ್ಧ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಸಂಘಟನೆ ರೈತ ಮುಖಂಡರು ಸಭೆ ಸೇರಿ ಚರ್ಚಿಸಿ ಎಸ್ಪಿ ಕಚೇರಿಗೆ ಮುಂದೆ ಪ್ರತಿಭಟನೆ ಮಾಡಿದರು. ನಿಮ್ಮ ಪೊಲೀಸ್ ಇಲಾಖೆ ರೈತರ ಟ್ಯಾಕ್ಟರ್ ರ್ಯಾಲಿಯನ್ನು ತಡೆಗಟ್ಟುವ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದ್ದೀರಿ ಎಂದು ಪೋಲೀಸರನ್ನು ತರಾಟೆಗೆ ತೆಗೆದುಕೊಂಡರು.

ಡಿವೈಎಸ್ಪಿ ಲಕ್ಷ್ಮಯ್ಯ ಅವರು ಎಸ್ಪಿ ಬಳಿಗೆ ಪ್ರತಿಭಟನಾನಿತರನ್ನು ಕರೆದೊಯ್ಯುದ್ದರು. ರಾಜ್ಯದ ಎಲ್ಲ ಕಡೆ ರೈತರು ಟ್ರಾಕ್ಟರ್ ರ್ಯಾಲಿ ನಡೆಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಮಾತ್ರ ಅವಕಾಶ ಮಾಡಿಕೊಡಲಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಮುಖಂಡರು ದೂರಿದರು.

ಜಿಲ್ಲೆಯಲ್ಲಿ ಈ ರೀತಿಯಾಗಿ ಮಾಡಿರುವುದು ಸರಿಯಿಲ್ಲ. ಇದು ಖಂಡನೀಯ ನಮಗೆ ನ್ಯಾಯ ಬೇಕು ಈ ರೀತಿಯಾಗಿ ನಮ್ಮ ಪ್ರತಿಭಟನೆ ಹತ್ತಿಕ್ಕಲು ಪೊಲೀಸ್ ಇಲಾಖೆ ರೈತರ ಬಂಧನ ಮಾಡುವುದು ರೈತರ ಪ್ರತಿಭಟನೆಯನ್ನು ಹತ್ತಿಕ್ಕುವುದು ಸರಿಯಾದ ಕ್ರಮವಲ್ಲ ಅಕ್ರೋಶ ವ್ಯಕ್ತಪಡಿಸಿದರು.

ಪೋಲಿಸ್ ವರಿಷ್ಠಾಧಿಕಾರಿ ಡಾ.ಕವಿತಾ ಪ್ರತಿಭಟನೆಯನ್ನು ಕೈಬಿಡಿ ಸ್ವಾತಂತ್ರ್ಯ ದಿನಾಚರಣೆ ಇರುವುದರಿಂದ ಸ್ವಲ್ಪ ತೊಂದರೆ ಆಗಿದೆ. ಮುಂದೆ ಈ ರೀತಿ ರೈತರ ಹೋರಾಟಗಾರರಿಗೆ ಪೊಲೀಸ್ ಇಲಾಖೆಯಿಂದ ರೈತರ ಪ್ರತಿಭಟನೆ ರ್ಯಾಲಿ ಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ರಾಜ್ಯಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮೈಸೂರು ಜಿಲ್ಲೆ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಚಾಮರಾಜನಗರ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ ಉಪಾಧ್ಯಕ್ಷ ಮೂಡ್ಲುಪುರ ಪಟೇಲ್ ಶಿವಮೂರ್ತಿ, ಚಾಮರಾಜನಗರ ಜಿಲ್ಲಾ ಕಾರ್ಯದರ್ಶಿ ಎಚ್ ಮೂಕಳ್ಳಿ ಮಹದೇವಸ್ವಾಮಿ, ತಾಲೂಕ ಅಧ್ಯಕ್ಷ ನಂಜಪುರ ಸತೀಶ್, ಉಪಾಧ್ಯಕ್ಷ ಹೆಗ್ಗೋಠಾರ, ಶಿವಸ್ವಾಮಿ, ಮೂಕಳ್ಳಿ ಶಿವಕುಮಾರ್, ರಾಜು, ಮಾರ್ಬಳ್ಳಿ ನೀಲಕಂಠಪ್ಪ, ಸಿದ್ದರಾಮ, ಉಡಿಗಾಲ ಗುರುಪ್ರಸಾದ್, ಹಿಂದುವಾಡಿ ಮಾದೇಶ್ ,ಮಂಜು, ಹೆಗ್ಗಡಹಳ್ಳಿ ಮಾದೇವಪ್ಪ, ಚಾಮರಾಜನಗರ ಅಮರ್ ಖಾನ್, ಬಡಗಲ್ ಪುರ ಹರ್ಷ, ಬಸವರಾಜು ಇತರರು ಭಾಗವಹಿಸಿದ್ದರು.