ಸಾರಾಂಶ
ಚಿಂತಾಮಣಿ ತಾಲೂಕಿನ ಪೆದ್ದೂರಿನ ಸ.ನಂ.171/02 ರ ಹದ್ದುಬಸ್ತು ಅಳತೆಗೆ ಪರವಾನಗಿ ಭೂಮಾಪಕ ಕೆ.ಎಸ್.ವೆಂಕಟರವಣಪ್ಪ ಅವರು ಡಿ.26 ರಂದು ಪೊಲೀಸ್ ಬಂದೋಬಸ್ತ್ ನಲ್ಲಿ ಜಮೀನಿನ ಅಳತೆ ಕೆಲಸ ನಿರ್ವಹಿಸುತ್ತಿರುವಾಗ, ಬಾಜುದಾರರು ಭೂಮಾಪಕರ ಮೇಲೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದ ಘಟನೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಳೆದ ಡಿಸೆಂಬರ್ 26ರಂದು ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲ ಹೋಬಳಿ ಪೆದ್ದೂರು ಗ್ರಾಮದಲ್ಲಿನ ಸ.ನಂ.171/02 ಹದ್ದುಬಸ್ತು ಅಳತೆಯ ವೇಳೆ ಭೂಮಾಪಕರ ಮೇಲೆ ಕೆಲ ಭೂ ಮಾಲಿಕರು ಹಲ್ಲೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರದಲ್ಲಿ ಭೂಮಾಪಕರು ಕೆಲಸ ಸ್ಥಗಿಸಗೊಳಿಸಿ ಪ್ರತಿಭಟನೆ ನಡೆಸಿದರು.ಚಿಂತಾಮಣಿ ತಾಲೂಕಿನ ಪೆದ್ದೂರಿನ ಸ.ನಂ.171/02 ರ ಹದ್ದುಬಸ್ತು ಅಳತೆಗೆ ಪರವಾನಗಿ ಭೂಮಾಪಕ ಕೆ.ಎಸ್.ವೆಂಕಟರವಣಪ್ಪ ಅವರು ಡಿ.26 ರಂದು ಪೊಲೀಸ್ ಬಂದೋಬಸ್ತ್ ನಲ್ಲಿ ಜಮೀನಿನ ಅಳತೆ ಕೆಲಸ ನಿರ್ವಹಿಸುತ್ತಿರುವಾಗ, ಬಾಜುದಾರರು ಭೂಮಾಪಕರ ಮೇಲೆ ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿರುವುದು ಖಂಡನೀಯ ಎಂದರು.
ಅನಿರ್ದಿಷ್ಟಾವಧಿ ಪ್ರತಿಭಟನೆಆದ್ದರಿಂದ ಜಿಲ್ಲೆಯ ಪರವಾನಗಿ ಭೂಮಾಪಕರು ಡಿ.31ರಿಂದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದು, ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮಜರುಗಿಸಿ ನ್ಯಾಯ ಒದಗಿಸುವವರೆಗೆ ಕಾಲ ಕೆಲಸಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಪರವಾನಗಿ ಭೂಮಾಪಕರ ಲಾಗಿನ್ ಅನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.
ಉಪನಿರ್ದೇಶಕರಿಗೆ ಮನವಿ ಸಲ್ಲಿಕೆರಾಜ್ಯ ಸರ್ಕಾರಿ ಪರವಾನಗಿ ಭೂಮಾಪಕರ ಸಂಘ ದಿಂದ ಭೂದಾಖಲೆಗಳ ಉಪನಿರ್ದೇಶಕ ಮಂಜುನಾಥ್ ತವಾನೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಚಿಕ್ಕಬಳ್ಳಾಪುರ ಅಧ್ಯಕ್ಷ ಲಕ್ಷಿನಾರಾಯಣರೆಡ್ಡಿ, ಚಿಂತಾಮಣಿ ನಂಜರೆಡ್ಡಿ, ಶಿಡ್ಲಘಟ್ಟ ಬಚ್ಚಹಳ್ಳಿ ಬಿ.ಟಿ.ವೆಂಕಟೇಶ್, ಗೌರಿಬಿದನೂರಿನ ವೇಮಾರೆಡ್ಡಿ, ಬಾಗೇಪಲ್ಲಿ ಗಂಗರೆಡ್ಡಿ, ರಾಜ್ಯ ಸಮಿತಿ ಮುಖಂಡ ದ್ವಾರಕೇಶ್ , ಮತ್ತಿತರರು ಇದ್ದರು.