ವಕೀಲ ಸದಾಶಿವರೆಡ್ಡಿ ಮೇಲಿನ ಹಲ್ಲೆಗೆ ಖಂಡನೆ

| Published : Apr 22 2025, 01:48 AM IST

ಸಾರಾಂಶ

ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಮುಂದೇ ರಾಜ್ಯದಲ್ಲಿ ಎಲ್ಲಿಯೂ ಕೂಡಾ ವಕೀಲರ ಮೇಲೆ ಇಂತಹ ಘಟನೆಗಳು ನಡೆಯದಂತೆ ತುರ್ತು ಕ್ರಮಕೈಗೊಳ್ಳಬೇಕು.

ಕುಷ್ಟಗಿ:

ಭಾರತೀಯ ವಕೀಲರ ಪರಿಷತ್‌ ಅಧ್ಯಕ್ಷ ಸದಾಶಿವರೆಡ್ಡಿ ಅವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಖಂಡಿಸಿ ವಕೀಲರ ಸಂಘ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.

ಈ ವೇಳೆ ಮಾತನಾಡಿದ ವಕೀಲರ ಸಂಘದ ತಾಲೂಕಾಧ್ಯಕ್ಷ ಸಂಕನಗೌಡ ಪಾಟೀಲ, ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಮುಂದೇ ರಾಜ್ಯದಲ್ಲಿ ಎಲ್ಲಿಯೂ ಕೂಡಾ ವಕೀಲರ ಮೇಲೆ ಇಂತಹ ಘಟನೆಗಳು ನಡೆಯದಂತೆ ತುರ್ತು ಕ್ರಮಕೈಗೊಳ್ಳಬೇಕು. ವಕೀಲರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಒಂದು ವೇಳೆ ಆರೋಪಿಗಳನ್ನು ಪತ್ತೆ ಹಚ್ಚುವುದು ವಿಳಂಬವಾದರೆ ರಾಜ್ಯಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ರಾಜ್ಯ ಸರ್ಕಾರ ಶೀಘ್ರ ವಕೀಲರ ರಕ್ಷಣಾ ಕಾಯ್ದೆ ಕಾರ್ಯರೂಪಕ್ಕೆ ತಂದು ಇಂತಹ ಘಟನೆಗಳು ನಡೆಯದಂತೆ ತಡೆಹಿಡಿಯಬೇಕು ಎಂದರು.

ಈ ಘಟನೆ ಖಂಡಿಸಿ ವಕೀಲರ ಸಂಘದ ಸದಸ್ಯರು ಕೋರ್ಟ್‌ ಕಲಾಪದಿಂದ ದೂರವುಳಿದು ಕೈಗೆ ಕೆಂಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಆರ್‌.ಕೆ. ದೇಸಾಯಿ, ಎಂ.ಎಚ್. ಗೋಡಿ, ಎಸ್‌.ಎಸ್‌. ಪಾಟೀಲ್, ರಾಮನಗೌಡ, ಎಂ.ಬಿ. ಕೊನಸಾಗರ, ಅರವಿಂದ ಚಳಗೇರಿ, ಶರಣು ಬಂಡಿ, ಎಚ್.ಡಿ. ಪಾಟೀಲ್, ಹುಲಗಪ್ಪ ಚೂರಿ, ಶುಖಮುನಿ, ಕನಕರಾಯ, ಮದನ, ಹೊನ್ನಪ್ಪ, ನೇತ್ರಾವತಿ, ಚೈತ್ರಾ, ರೇಣುಕಾ, ಕವಿತಾ, ಎ.ಎಸ್. ಡೊಳ್ಳಿನ್ ಸೇರಿದಂತೆ ಅನೇಕರು ಇದ್ದರು.