ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು

| Published : Apr 29 2024, 01:31 AM IST

ಸಾರಾಂಶ

ಇಂದಿನ ವ್ಯಾಪಾರಿ ಮನೋಭಾವದ ಯಾಂತ್ರಿಕ ಜೀವನದ ಬದುಕಿನಲ್ಲಿ ಭಾವನೆಗಳು ಮಾನವೀಯ ಸಂಬಂಧಗಳ ಮೌಲ್ಯಗಳು ಧಾರ್ಮಿಕ ಪರಂಪರೆ ಯುವ ಪೀಳಿಗೆಗೆ ತಲುಪುತ್ತಿಲ್ಲ ಅಂತಹ ವಾತವರಣ ಕುಟುಂಬಗಳಲ್ಲಿ ಕಾಣಸಿಗುತ್ತಿಲ್ಲದಿರುವುದು ದುರಂತ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರಇಂದಿನ ವ್ಯವಸ್ಥೆಯಲ್ಲಿ ಮಾತಾಪಿತೃಗಳು ದೇವರಿಗೆ ಸಮಾನ ಎಂಬ ಭಾವನೆ ಮಕ್ಕಳಲ್ಲಿ ಮೂಡಿಸಬೇಕು. ಹೆತ್ತವರು ಅಂತಹ ವಾತವರಣ ಮನೆಯಲ್ಲಿ ನಿರ್ಮಾಣ ಮಾಡಿದರೆ ಮಕ್ಕಳಲ್ಲಿ ಸಂಸ್ಕಾರ ಕಾಣಬಹುದಾಗಿದೆ ಎಂದು ನಂದಗೋಕುಲ ಆಶ್ರಮದ ಮುಖ್ಯಸ್ಥ ಚೈತನ್ಯ ಸುಧೀರಾನಂದಗಿರಿ ಸ್ವಾಮೀಜಿ ಹೇಳಿದರು.ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮಾತೃ ಭೋಜನ ಮತ್ತು ಮಾತಾಪಿತೃಗಳ ಪಾದ ಪೂಜೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಮಾನವೀಯ ಮೌಲ್ಯಗಳ ಕುಸಿತ

ಇಂದಿನ ವ್ಯಾಪಾರಿ ಮನೋಭಾವದ ಯಾಂತ್ರಿಕ ಜೀವನದ ಬದುಕಿನಲ್ಲಿ ಭಾವನೆಗಳು ಮಾನವೀಯ ಸಂಬಂಧಗಳ ಮೌಲ್ಯಗಳು ಧಾರ್ಮಿಕ ಪರಂಪರೆ ಯುವ ಪೀಳಿಗೆಗೆ ತಲುಪುತ್ತಿಲ್ಲ ಅಂತಹ ವಾತವರಣ ಕುಟುಂಬಗಳಲ್ಲಿ ಕಾಣಸಿಗುತ್ತಿಲ್ಲದಿರುವುದು ದುರಂತ. ಪ್ರತಿ ಮನುಷ್ಯನಲ್ಲಿ ಹೆತ್ತವರು ಗುರುಗಳು ಮಹತ್ತರ ಪಾತ್ರಗಳು ಇವರು ಮಕ್ಕಳಿಗೆ ಅರ್ಥ ಆಗುವಂತೆ ಸಂಸ್ಕಾರ ಬೋಧಿಸಬೇಕು ಎಂದರು.

ಆದರೆ ತಮ್ಮ ಮಕ್ಕಳನ್ನು ಲಾಲಿಸಲು ಪಾಲಿಸಲು ಪೋಷಕರಿಗೆ ಪುರುಸೊತ್ತಿಲ್ಲ. ಇಂತಹ ಕಾಲಘಟ್ಟದಲ್ಲಿ ಇದ್ದೀವಿ ಮಕ್ಕಳ ಜೀವನದಲ್ಲಿ ಹೆತ್ತವರ ಪಾತ್ರ ಏನು ಎಂಬುದನ್ನು ತಾಯಿ ಮೊದಲ ಗುರುವಾಗಿ ತಂದೆ ಪಾತ್ರ ಯಾರು ಏನು ಯಾಕೆ ಎಂಬುದಾಗಿ ತಾಯಿ ಮಗುವಿಗೆ ತಿಳಿಸಬೇಕಾಗುತ್ತದೆ ಹಾಗೆ ಪಾಠಶಾಲೆ ಅಲ್ಲಿ ಅಕ್ಷರ ಸಮಾಜ ವ್ಯವಸ್ಥೆ ಇವುಗಳನ್ನು ಬೋಧಕರು ಕಲಿಸುವಂತಾಗಬೇಕು ಎಂದರು.

ಮಕ್ಕಳಿಗೆ ಸಂಸ್ಕಾರ ಕಲಿಸಿ

ಮಗುವಿಗೆ ಪೋಷಕರು ಸಂಸ್ಕಾರ ಕಲಿಸದೆ ಹೋದರೆ ಮಗು ಕಲಿತ ವಿದ್ಯೆಗೂ ಗೌರವ ಸೀಗುವುದಿಲ್ಲ ಹಾಗೆ ಸಂಸ್ಕಾರ ಇಲ್ಲದ ವ್ಯಕ್ತಿ ಎಷ್ಟು ಧಾರ್ಮಿಕ ಕಾರ್ಯಗಳನ್ನು ಕೈಗೊಂಡರೇನು ಫಲ ಸಿಗುತ್ತದೆ ಇದಕ್ಕೆಲ ಪರಿಹಾರ ಎಂಬಂತೆ ಇಲ್ಲಿ ಆಯೋಜಿಸಿರುವ ಮಾತೃ ಭೋಜನ ಕೈ ತುತ್ತು ಹಾಗು ಮಾತಾ ಪಿತೃಗಳ ಪಾದ ಪೂಜೆ ನಿಜಕ್ಕೂ ಶ್ಲಾಘನೀಯ ಎಂದರು.ಯೋಗ ಶಿಕ್ಷಣ ಸಮಿತಿ ಮುಖ್ಯಸ್ಥ ಚೌಡಪ್ಪ,ಸಮಿತಿ ಕಾರ್ಯದರ್ಶಿ ವೆಂಕಟರವಣಪ್ಪ,ವಿಭಾ, ವರಲಕ್ಷ್ಮೀ, ಉಮಾದೇವಿ,ಪ್ರಭಾವತಮ್ಮ ಇದ್ದರು.

೨೮ಎಸ್.ವಿ.ಪುರ-೧.........ಶ್ರೀನಿವಾಸಪುರ ಪಟ್ಟಣದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮಾತೃ ಭೋಜನ ಮತ್ತು ಮಾತಾಪಿತೃಗಳ ಪಾದ ಪೂಜೆ ಕಾರ್ಯಕ್ರಮ ನಡೆಯಿತು.