ಸಾಲ ವಸೂಲಿಯಲ್ಲಿ ರೈತರ ಮೇಲೆ ದೌರ್ಜನ್ಯಕ್ಕೆ ಖಂಡನೆ

| Published : Nov 09 2023, 01:00 AM IST / Updated: Nov 09 2023, 01:01 AM IST

ಸಾಲ ವಸೂಲಿಯಲ್ಲಿ ರೈತರ ಮೇಲೆ ದೌರ್ಜನ್ಯಕ್ಕೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಮುಖಂಡರ ಆಕ್ರೋಶ

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಾಲ ವಸೂಲಾತಿಗಾಗಿ ರೈತರ ಮೇಲೆ ಬ್ಯಾಂಕ್ ಸಿಬ್ಬಂದಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘ ಸೇನೆ ನೇತೃತ್ವದಲ್ಲಿ ಬುಧವಾರ ನಗರದ ಕೆನರಾ ಬ್ಯಾಂಕ್ ವೃತ್ತ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಹೊಳೆಹಟ್ಟಿ ಗ್ರಾಮದ ಕುಪೇಂದ್ರಪ್ಪ ಹೊಳಲೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಬೆಳೆ ಸಾಲ ₹19,000, ಅಭಿವೃದ್ಧಿ ಸಾಲ ₹62,000, ಮನೆ ರಿಪೇರಿ ಸಾಲ ₹3 ಲಕ್ಷ, ಟ್ರ್ಯಾಕ್ಟರ್ ಸಾಲ ₹5.10 ಲಕ್ಷ ಸೇರಿ ₹9.52 ಲಕ್ಷ ಸಾಲ ಪಡೆದಿದ್ದಾರೆ. ಈಗಾಗಲೇ ₹4.50 ಲಕ್ಷ ಪಾವತಿ ಸಹ ಮಾಡಿದ್ದಾರೆ. ಬಾಕಿ ₹5.02 ಲಕ್ಷ ಪಾವತಿ ಮಾಡಲು ಸಿದ್ಧರಿದ್ದಾರೆ. ಸಾಲಗಾರ ಕುಪೇಂದ್ರಪ್ಪ ಅನಾರೋಗ್ಯಪೀಡಿತ ಆಗಿದ್ದಾರೆ. ಅವರ ಪತ್ನಿ ರಾಜೇಶ್ವರಿ ಮೆದುಳಿನಲ್ಲಿ ರಕ್ತಸ್ರಾವ ಆಗಿ ಜ್ಞಾನ ಕಳೆದುಕೊಂಡಿದ್ದಾರೆ. ವಯೋವೃದ್ಧ ಅಜ್ಜಿ ಶಾಂತಮ್ಮ ಹಾಸಿಗೆ ಹಿಡಿದಿದ್ದಾರೆ. ಈ ಮೂರು ಜನರ ಚಿಕಿತ್ಸೆಗೆ ಜಮೀನು ಮಾರಾಟ ಮಾಡಿದ್ದಾರೆ ಎಂದು ವಿವರಿಸಿದರು.

ಈಗ ಬ್ಯಾಂಕ್‌ನವರು ಮನೆ ಸ್ವಾಧೀನ ಪಡೆಯಲು ನೋಟಿಸ್ ಅಂಟಿಸಿದ್ದಾರೆ. ಕುಟುಂಬಕ್ಕೆ ಈಗ ಆತ್ಮಹತ್ಯೆ ಒಂದೇ ಉಳಿದಿರುವ ದಾರಿ. ಸಾಲ ಮರುಪಾವತಿಸಲು ಬ್ಯಾಂಕ್‌ಗೆ ಹೋದಾಗ ₹1 ಕೋಟಿ ಆಗಿದೆ ಎಂದು ಹೇಳಿದ್ದಾರೆ. ಇದು ಮೀಟರ್ ಬಡ್ಡಿ ಹಾಕುವ ಬ್ಯಾಂಕೇ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ಬಾಕಿ ಹಣ ಕಟ್ಟಿಸಿಕೊಂಡು ಸಾಲಮುಕ್ತ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಜಿಲ್ಲಾಧ್ಯಕ್ಷ ಶಿವಮೂರ್ತಿ, ಈರಣ್ಣ ಅರಬಿಳಚಿ, ಹಿಟ್ಟೂರು ರಾಜು ಇನ್ನಿತರರು ಇದ್ದರು.

- - -

-8ಎಸ್‌ಎಂಜಿಕೆಪಿ01:

ಶಿವಮೊಗ್ಗ ನಗರದ ಕೆನರಾ ಬ್ಯಾಂಕ್ ವೃತ್ತ ಕಚೇರಿ ಎದುರು ಜಿಲ್ಲಾ ಸಾಲ ವಸೂಲಾತಿಗಾಗಿ ಬ್ಯಾಂಕ್ ಸಿಬ್ಬಂದಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘ ಸೇನೆ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.