ಜನೌಷಧಿ ಕೇಂದ್ರ ಮುಚ್ಚುವ ರಾಜ್ಯಸರ್ಕಾರದ ನಡೆಗೆ ಖಂಡನೆ

| Published : May 31 2025, 12:02 AM IST / Updated: May 31 2025, 12:03 AM IST

ಜನೌಷಧಿ ಕೇಂದ್ರ ಮುಚ್ಚುವ ರಾಜ್ಯಸರ್ಕಾರದ ನಡೆಗೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೊಳಕಾಲ್ಮುರಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮೌನ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಜನೌಷಧಿ ಕೇಂದ್ರ ಮುಚ್ಚಲು ಆದೇಶಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ನರೇಂದ್ರ ಮೋದಿಯವರ ಸರ್ಕಾರದ ಮಹತ್ವಾಕಾಂಕ್ಷೆಯ ಜನ ಔಷಧಿ ಕೇಂದ್ರವನ್ನು ರಾಜ್ಯ ಸರ್ಕಾರ ಮುಚ್ಚುವ ನಿರ್ಧಾರ ಮಾಡಿರುವುದು ಖಂಡನೀಯ. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಆರಂಭಿಸಿರುವ ಜನಔಷಧಿ ಕೇಂದ್ರ ಸಾವಿರಾರು ಬಡ ಜನರಿಗೆ ನೆರವಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಇಲ್ಲಿನ ಕೇಂದ್ರ ಮುಚ್ಚುವ ನಿರ್ಧಾರ ಮಾಡಿರುವುದು ಸಲ್ಲದು. ಇದು ಜನವಿರೋಧಿ ನೀತಿ ಕ್ರಮವಾಗಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸುವಲ್ಲಿ ರಾಜ್ಯವನ್ನು ದಿವಾಳಿ ಹಂತಕ್ಕೆ ತಂದಿದ್ದಾರೆ. ಪ್ರಮುಖ ಯೋಜನೆಗಳು ಬಡ ಜನರಿಗೆ ಸಿಗದಾಗಿದೆ. ಅಭಿವೃದ್ಧಿ ಕಾರ್ಯಗಳು ಇಲ್ಲವಾಗಿದೆ ಇಂತಹ ಸ್ಥಿತಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮಾಡಿರುವ ಜನೌಷಧಿ ಕೇಂದ್ರ ಮುಚ್ಚಲು ಆದೇಶ ಮಾಡಿರುವ ನಿರ್ದಾರವನ್ನು ವಾಪಸ್ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಆರಂಭಿಸಿರುವ ಜನೌಷಧಿ ಕೇಂದ್ರಗಳನ್ನು ಯಥಾಸ್ಥಿತಿ ಮುಂದುವರೆಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಶ್ರೀರಾಮರೆಡ್ಡಿ ಹಾಗೂ ನಿಕಟಪೂರ್ವ ಅಧ್ಯಕ್ಷ ಡಾ.ಪಿ.ಎಮ್.ಮಂಜುನಾಥ ಹಿರಿಯ ಮುಖಂಡರಾದ ಡಿ.ಎಂ.ಈಶ್ವರಪ್ಪ, ಚಂದ್ರಶೇಖರ ಗೌಡ, ತಿಪ್ಪೇಸ್ವಾಮಿ,ಪ್ರಧಾನ ಕಾರ್ಯದಋಷಿ ಎನ್.ಪಿ.ಪ್ರಭಾಕರ ಹಾಗೂ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಸಿದ್ದಣ್ಣ ಹಾಗೂ ಉಪಾಧ್ಯಕ್ಷ ತಿಪ್ಪೇಸ್ವಾಮಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ.ಲಕ್ಷಣ,ಮಂಜಣ್ಣ ಭೀಮಣ್ಣ, ಪ್ರಥ್ವಿರಾಜ್ ,ಮೂರ್ತಿ ಶಾಂತಾರಾಂ ಬಸಪತಿ , ಹರೀಶ್, ರಾಮಾಂಜಿನಿ, ಪ್ರವಿಣ್, ನಿಂಗಣ್ಣ ಇದ್ದರು.