ಸಾರಾಂಶ
ದಾವಣಗೆರೆ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಬುಧವಾರ ಇಲ್ಲಿನ ಪಿ.ಬಿ.ರಸ್ತೆಯಲ್ಲಿರುವ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ಕ್ಯಾಂಡಲ್ ಹಚ್ಚಿ ಹುತಾತ್ಮರ ಆತ್ಮಕ್ಕೆ ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮಿಗಳ ನೇತೃತ್ವದಲ್ಲಿ ಶಾಂತಿ ಕೋರಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ದೂಡಾ ಅಧ್ಯಕ್ಷ, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಮಾಜಿ ಉಪ ಮಹಾಪೌರರಾದ ಗಾಯತ್ರಿ ಭಾಯಿ ಖಂಡೋಜಿ ರಾವ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವನಗೌಡ ಟಿ.ಪಾಟೀಲ್, ಎಚ್.ಎಸ್.ಗೋವಿಂದ ರಾಜ್, ಗಣೇಶ ರಾವ್, ತರಕಾರಿ ಶಿವು, ವಕೀಲ ಎ.ಸಿ. ರಾಘವೇಂದ್ರ, ರಾಜು ನಿಲಗುಂದ, ದುರುಗೇಶ್, ಆನಂದ ಹಿರೇಮಠ, ಕಿಶೋರ್ ಕುಮಾರ್, ಟಿಂಕರ್ ಮಂಜಣ್ಣ, ಗುರು ಸೋಗಿ, ಮಹಿಳಾ ಮುಖಂಡರಾದ ಚೇತುಬಾಯಿ, ಭಾಗ್ಯ ಪಿಸಾಳೆ, ಲೀಲಾವತಿ, ಹರೀಶ್ ಹೊನ್ನೂರ್, ರವಿಕುಮಾರ್.ಆರ್, ಮಂಜುನಾಥ್ ಪೈಲ್ವಾನ್, ನವೀನ ಕುಮಾರ್ ಎಚ್.ಬಿ.ಎಸ್.ಬಾಬು, ಶಿವಾನಂದ, ಬಾಲು, ಸಂತೋಷ್ ಕೋಟಿ, ಮಲತೇಶ್, ಎಚ್.ಓ.ದುಗ್ಗಪ, ಕರಾಟೆ ಕೃಷ್ಣ, ಯರಗುಂಟೆ ನಾಗಪ್ಪ, ಶಾಮನೂರ ಅಂಜಿನಪ್ಪ, ಯಲ್ಲೋಜೀರಾವ್, ಹನುಮಂತ ರಾವ್ ಸುರ್ವೆ, ಹಿಂದೂ ಬಾಂಧವರು ಉಪಸ್ಥಿತರಿದ್ದರು.