ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ಯುವಕನ ಮೇಲೆ ದೌರ್ಜನ್ಯಕ್ಕೆ ಖಂಡನೆ

| Published : Apr 19 2025, 12:32 AM IST

ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ಯುವಕನ ಮೇಲೆ ದೌರ್ಜನ್ಯಕ್ಕೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಬ್ರಾಹ್ಮಣರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ತೀವ್ರ ನೋವುಂಟಾಗಿದೆ. ತಕ್ಷಣ ಆ ಅಧಿಕಾರಿಗಳನ್ನು ಅಮಾನತ್ತು ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಬ್ರಾಹ್ಮಣರ ತಾಳ್ಮೆ ಹಾಗೂ ಸಹನೆಯನ್ನು ಯಾರು ಪರೀಕ್ಷಿಸಬೇಡಿ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿಯಲ್ಲಿ ಬ್ರಾಹ್ಮಣ ಯುವಕನ ಮೇಲೆ ನಡೆದ ದೌರ್ಜನ್ಯವನ್ನು ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ವೇದಮೂರ್ತಿ ಡಾ.ಭಾನುಪ್ರಕಾಶ್ ಶರ್ಮ ಖಂಡಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರನ್ನು ಭೇಟಿ ಮಾಡಿ ಮಾತನಾಡಿದ ಅವರು, ಗುರುವಾರ ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿಯಲ್ಲಿ ನಡೆದ ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ಬ್ರಾಹ್ಮಣ ವಿದ್ಯಾರ್ಥಿ ಜನಿವಾರವನ್ನು ತೆಗೆದು ಕಸದ ಬುಟ್ಟಿಗೆ ಎಸೆದ ಆಡಳಿತ ಮಂಡಳಿ ಕ್ರಮ ಖಂಡನೀಯ. ಜನಿವಾರ ತೆಗೆದ ನಂತರ ಆತನನ್ನು ಪರೀಕ್ಷೆಗೆ ಕುಳಿತುಕೊಳ್ಳುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚೆಗೆ ಬ್ರಾಹ್ಮಣರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ತೀವ್ರ ನೋವುಂಟಾಗಿದೆ. ತಕ್ಷಣ ಆ ಅಧಿಕಾರಿಗಳನ್ನು ಅಮಾನತ್ತು ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಬ್ರಾಹ್ಮಣರ ತಾಳ್ಮೆ ಹಾಗೂ ಸಹನೆಯನ್ನು ಯಾರು ಪರೀಕ್ಷಿಸಬೇಡಿ. ಸದಾ ಇಡೀ ಸಮಾಜದ ಒಳಿತು ಹಾಗೂ ಏಳಿಗೆಯನ್ನು ಬಯಸುವ ಬ್ರಾಹ್ಮಣ ಸಮಾಜಕ್ಕೆ ಧಕ್ಕೆ ತರುವಂತ ಕೆಲಸವನ್ನು ಯಾರು ಮಾಡಬಾರದು. ಇದೇ ರೀತಿ ಬ್ರಾಹ್ಮಣರ ಮೇಲಿನ ದೌರ್ಜನ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಹನುಮಂತೋತ್ಸವದಲ್ಲಿ ಕುಣಿದು ಸಂಭ್ರಮಿಸಿದ ಯುವಕರು

ಕಿಕ್ಕೇರಿ:

ಹನುಮಂತನಂತೆ ಬಣ್ಣ ಹಚ್ಚಿಕೊಂಡು ಯುವಕರು ಹನುಮಂತೋತ್ಸದಲ್ಲಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.

ಹಳೆ ಭಜನೆಮನೆ ಕುರುಹಿನಶೆಟ್ಟಿ ಜನಾಂಗ ರಾಮಮಂದಿರ ಹಮ್ಮಿಕೊಂಡಿದ್ದ ಹನುಮಂತ ದೇವರ ಉತ್ಸವದ ಅಂಗವಾಗಿ ಯುವಕರು, ಪುಟಾಣಿಗಳು ಕಪಿ ಸೇನೆಯಂತೆ ಕಾಣಿಸುತ್ತಿದ್ದ ನೋಟ ನೋಡುಗರಿಗೆ ಖುಷಿ ನೀಡಿತು.

ಮನೆ ಮುಂದೆ ಬಕೆಟ್‌ಗಳಲ್ಲಿ ಇಡಲಾಗಿದ್ದ ಬಣ್ಣ ಬಣ್ಣದ ನೀರು ತೆಗೆದುಕೊಂಡು ಪರಸ್ಪರ ಎರಚಾಡಿದರು. ಬಣ್ಣದ ಪುಡಿಯನ್ನು ಮುಖಕ್ಕೆ ಪೈಪೋಟಿಯಲ್ಲಿ ಮೆತ್ತಿ ಖುಷಿಪಟ್ಟರು. ಪರಿಚಿತರು ಬಣ್ಣ ಬಳಿದುಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದ ಯುವಕರ ದಂಡು ಕಂಡು ತಮಗೆ ಬಣ್ಣ ಹಚ್ಚಿದರೆ ಎಂಬ ದಿಗಿಲಿನಿಂದ ಕಣ್ಣಿಗೆ ಕಂಡ ಗಲ್ಲಿಗಳಲ್ಲಿ ಓಡಿದರು.

ಪರೀಕ್ಷೆ ಮುಗಿದು ಬೇಸಿಗೆ ರಜೆ ಇದ್ದ ಕಾರಣ ಮಕ್ಕಳಿಗೆ ಹೊಸ ಆಟದಂತೆ ಹನುಮಂತೋತ್ಸವ ಕಂಡು ಬಂದರೆ, ಅಜ್ಜಿ ಅಜ್ಜಂದಿರು ಮೊಮ್ಮಕ್ಕಳ ಬಣ್ಣದ ವೇಷ ಕಂಡು ಒಳಗೊಳಗೆ ಸಂಭ್ರಮಪಟ್ಟರು. ಇಡೀಗ್ರಾಮದಲ್ಲಿ ಶ್ರದ್ಧಾಭಕ್ತಿಯಿಂದ ನಡೆದಉತ್ಸವ ವೀಕ್ಷಿಸಲು ಸುತ್ತಮುತ್ತಲ ಗ್ರಾಮದಜನರು ಆಗಮಿಸಿದ್ದರು.