ಸಾರಾಂಶ
ಸರಳ ಜೀವಿ, ಸ್ನೇಹ ಜೀವಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಬೈಕೆರೆ ನಾಗೇಶ್ ಅನಾರೋಗ್ಯದ ಕಾರಣ ಮೃತಪಟ್ಟರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಾಸನದಲ್ಲಿ ಬುಧವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ಸಂತಾಪ ಸಭೆಕನ್ನಡಪ್ರಭ ವಾರ್ತೆ ಹಾಸನ
ಸರಳ ಜೀವಿ, ಸ್ನೇಹ ಜೀವಿ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಬೈಕೆರೆ ನಾಗೇಶ್ ಅವರು ಅನಾರೋಗ್ಯದ ಕಾರಣ ಮೃತಪಟ್ಟರು. ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಸಂತಾಪ ಸೂಚಿಸಲಾಯಿತು.ಜಿಲ್ಲಾ ಪತ್ರಕರ್ತರ ಭವನದಲ್ಲಿ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಎರಡು ನಿಮಿಷ ಮೌನ ಆಚರಿಸಿ ಮಡಿದ ಬೈಕೆರೆ ನಾಗೇಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಮಾತನಾಡಿ, ಬೈಕೆರೆ ನಾಗೇಶ್ ಎಂದರೆ ಜಿಲ್ಲೆಗೆ ಪರಿಚಿತರು. ಹಾಸನ ಜಿಲ್ಲೆಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಕುಗ್ರಾಮಕ್ಕೆ ಅಂತಹ ಅಧಿಕಾರಿ ಬರಬೇಕು ಎನ್ನುವ ಮಟ್ಟಕ್ಕೆ ಅವರು ತಮ್ಮ ಸ್ವಭಾವ ಬೆಳೆಸಿಕೊಂಡಿದ್ದರು. ದೆಹಲಿಯಲ್ಲಿದ್ದರೂ ಕೂಡ ತವರು ಜಿಲ್ಲೆಯನ್ನು ನೆನಪಿಸಿಕೊಳ್ಳುತ್ತಿದ್ದರು. ದೆಹಲಿಗೆ ಹೋದರೇ ನಮ್ಮ ಜಿಲ್ಲೆಯವರೆಂದು ಪ್ರೀತಿಯಿಂದ ಕಾಣುತ್ತಿದ್ದರು. ಅವರ ಸೇವೆ ಶಾಶ್ವತವಾಗಿದೆ ಎಂದು ನೆನಪಿಸಿಕೊಂಡರು.
ನಂತರದಲ್ಲಿ ಜಿಲ್ಲಾಧ್ಯಕ್ಷ ಬಾಳ್ಳುಗೋಪಾಲ್, ರಾಜ್ಯ ಪತ್ರಕರ್ತರ ಸಂಘದ ಸದಸ್ಯರಾದ ಎಚ್.ಬಿ. ಮದನ್ ಗೌಡ, ರವಿನಾಕಲಗೂಡು, ಪ್ರಧಾನ ಕಾರ್ಯದರ್ಶಿ ಬನವಾಸೆ ಮಂಜು, ಉಪಾಧ್ಯಕ್ಷರಾದ ನಂಜುಂಡೇಗೌಡ, ಕೆ.ಎಚ್. ವೇಣುಕುಮಾರ್, ಮಾಜಿ ಅಧ್ಯಕ್ಷರಾದ ಮಂಜುನಾಥ್, ವೆಂಕಟೇಶ್, ಉದಯಕುಮಾರ್, ಅತೀಖುರ್ ರೆಹಮನ್, ಉದಯರವಿ, ಆನಂದ್ ಇತರರು ಬೈಕೆರೆ ನಾಗೇಶ್ ಬಗ್ಗೆ ತಮ್ಮ ಮನದಾಳದ ಮಾತು ಹಂಚಿಕೊಂಡರು.ಬೈಕೆರೆ ನಾಗೇಶ್ ಅವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.