ಸಾರಾಂಶ
ಕೆ.ಆರ್.ಪೇಟೆ: ವಿಶ್ರಾಂತ ಐಎಎಸ್ ಅಧಿಕಾರಿ ಕೆ. ಶಿವರಾಂ ಅಕಾಲಿಕ ನಿಧನಕ್ಕೆ ತಾಲೂಕು ಬಿಜೆಪಿ ಘಟಕ ತೀವ್ರ ಸಂತಾಪ ಸೂಚಿಸಿದೆ. ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕೆ. ಶಿವರಾಮ್ ಅವರ ಅಕಾಲಿಕ ನಿಧನಕ್ಕೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಿದ ನಂತರ ಶಿವರಾಮ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು. ಬಡವರು ಹಾಗೂ ನೊಂದವರ ಪರ ಗಟ್ಟಿ ಧ್ವನಿಯಾಗಿ ಕೆಲಸ ಮಾಡುತ್ತಿದ್ದ ಶಿವರಾಂರ ಅಕಾಲಿಕ ನಿಧನವು ಶೋಷಿತ ವರ್ಗಗಳು ಹಾಗೂ ತುಳಿತಕ್ಕೊಳಗಾದ ಜನರಿಗೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು. ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್. ನೀಲಕಂಠ, ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಪರಮೇಶ್ ಅರವಿಂದ್, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಎಸ್.ಸಿ. ಮೋರ್ಚಾ ಅಧ್ಯಕ್ಷ ರವಿ ಶಿವಕುಮಾರ್, ವಿಸ್ತಾರಕ ರಾಜಶೇಖರ್, ಹಿರಿಯ ಪತ್ರಕರ್ತರಾದ ಎಂ.ಕೆ. ಹರಿಚರಣ ತಿಲಕ್, ಸೈಯ್ಯದ್ ಖಲೀಲ್, ತಾಲೂಕು ಹಂದಿಜೋಗಿ ಸಂಘದ ಅಧ್ಯಕ್ಷ ಸ್ವಾಮಿ ಜೋಗಿ, ಹಂದಿಜೋಗಿ ಸಮುದಾಯದ ಮುಖಂಡರಾದ ಟಿ.ಎಸ್.ಸ್ವಾಮಿ, ಎಲ್.ಆರ್. ಸ್ವಾಮಿ, ಶಿವಣ್ಣ ಸೇರಿ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.