ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ನಿಧನಕ್ಕೆ ಸಂತಾಪ ಸೂಚಿಸಿ ಪಟ್ಟಣದ ವಕೀಲರು ಮಂಗಳವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದರು. ವಕೀಲರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ ನೇತೃತ್ವದಲ್ಲಿ ವಕೀಲರು ಎಸ್.ಎಂ.ಕೃಷ್ಣರ ಭಾವಚಿತ್ರಕ್ಕೆ ಪೂಜಿಸಿ ಶ್ರದ್ಧಾಂಜಲಿ ಸಲ್ಲಿಸಿದರು.ಸಭೆಯಲ್ಲಿ ಹಿರಿಯ ವಕೀಲರಾದ ಎಚ್.ವಿ.ಬಾಲರಾಜು, ಬಿ.ಅಪ್ಪಾಜಿಗೌಡ, ಎಚ್.ಮಾದೇಗೌಡ ಮಾತನಾಡಿ, ಮದ್ದೂರಿನಲ್ಲಿ ನ್ಯಾಯಾಲಯ ಸ್ಥಾಪನೆ, ಕಟ್ಟಡ ನಿರ್ಮಾಣ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಎಸ್.ಎಂ ಕೃಷ್ಣ ರವರ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.
ರಾಜ್ಯದ ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕೃಷ್ಣರವರು ತಮ್ಮದೇ ಆದ ದೂರದೃಷ್ಟಿ ಹೊಂದಿದ್ದರು. ಇವರ ಆಸೆ, ಆಕಾಂಕ್ಷೆಗಳಿಗೆ ಯಾವುದೇ ರಾಜಕಾರಣಿಗಳು ಸಹಕಾರ ನೀಡದಿರುವುದು ಜಿಲ್ಲೆಯ ದುರಾದೃಷ್ಟ ಎಂದು ಬೇಸರ ವ್ಯಕ್ತಪಡಿಸಿದರು.ಸಭೆಯಲ್ಲಿ ವಕೀಲರಾದ ಎಂ.ಎಂ.ಪ್ರಶಾಂತ್, ಜಿ. ಮಹದೇವಯ್ಯ, ಎ. ಶಿವಣ್ಣ, ಚೆಲುವರಾಜು, ಎಂ.ಸಿ.ಅಶೋಕ್ ಕುಮಾರ್,ವಿ.ಟಿ. ರವಿಕುಮಾರ್. ಪ್ರಿಯಾಂಕ. ದಯಾನಂದ್, ಕೆ.ಶಿವಣ್ಣ ಮತ್ತು ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.ಗ್ರಾಮಸ್ಥರಿಂದ ಎಸ್.ಎಂ.ಕೃಷ್ಣರಿಗೆ ಶ್ರದ್ಧಾಂಜಲಿ
ಮಳವಳ್ಳಿ: ಅಗಲಿದ ಹಿರಿಯ ಸಜ್ಜನ ಜನನಾಯಕ ಎಸ್.ಎಂ.ಕೃಷ್ಣರಿಗೆ ತಾಲೂಕಿನ ಟಿ.ಕಾಗೇಪುರ, ನೆಲಮಾಕನಹಳ್ಳಿ ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು.ಮುಖ್ಯಮಂತ್ರಿಗಳಾಗಿ, ಕೇಂದ್ರ ಸಚಿವರಾಗಿ ಸಲ್ಲಿಸಿದ ಸೇವೆಯನ್ನು ಗ್ರಾಮಸ್ಥರು ಸ್ಮರಿಸಿದರು. ಈ ವೇಳೆ ಮುಖಂಡರಾದ ಕೆ.ಪಿ.ನಾಗರಾಜು, ಗ್ರಾಪಂ ಸದಸ್ಯ ಕೆ.ಬಿ.ಆನಂದ್, ಪ್ರಸನ್ನ.ಕೆ.ಸಿ, ಲಂಕೇಶ್, ಬೋರಲಿಂಗೇಗೌಡ, ನಂಜುಂಡೇಗೌಡ, ಪ್ರಭುಸ್ವಾಮಿ, ಗಂಗಾಧರ, ನಂಜುಂಡಿ, ಮೊಗಣ್ಣ, ವಿಷಕಂಠೇಗೌಡ, ಮಹೇಶ್, ಸಿದ್ದರಾಜು, ಮಹೇಂದ್ರ, ಪುಟ್ಟ, ಶಿವಮಾದು, ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.ಕೀರ್ತಿ ಶೇಷರಾದ ಎಸ್.ಎಂ.ಕೃಷ್ಣ ಜಿಲ್ಲೆಯ ಆಸ್ತಿ, ಈ ಸಮಾಜದ ಸಂಪತ್ತು. ಬೆಂಗಳೂರು - ಮಂಡ್ಯ - ಮೈಸೂರು ನಡುವೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಿ ಆ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದರು. ಜಿಲ್ಲೆಯಲ್ಲಿ ನೀರಾವರಿ ಕ್ಷೇತ್ರಕ್ಕೆ ಒತ್ತು ನೀಡಿದ್ದರು. ಮೈಷುಗರ್ ಕಾರ್ಖಾನೆಗೆ ಕಾಯಕಲ್ಪ ನೀಡಿದವರು. ಎಸ್.ಎಂ.ಕೃಷ್ಣ, ಜಿ.ಮಾದೇಗೌಡರಿಬ್ಬರು ಮಹಾಚೇತನಗಳು.ಎಸ್.ಎಂ.ಕೃಷ್ಣರ ನಿಧನ ಸಮಾಜಕ್ಕೆ ತಂಬಲಾರದ ನಷ್ಟ ಉಂಟಾಗಿದೆ.
- ಎಂ.ಎಸ್.ಆತ್ಮಾನಂದ, ಮಾಜಿ ಸಚಿವರು, ಮಂಡ್ಯಮಾಜಿ ಸಿಎಂಎಸ್.ಎಂ.ಕೃಷ್ಣರ ನಿಧನದಿಂದ ಜಿಲ್ಲೆ, ರಾಜ್ಯಕ್ಕೆ ತುಂಬಲಾಗದ ಅಪಾರ ನಷ್ಟ ಉಂಟಾಗಿದೆ. ನಮ್ಮ ತಂದೆ ಮಾಜಿ ಶಾಸಕ ಡಿ.ಹಲಗೇಗೌಡರು, ಮಾವ ಮರೀದೇವೇಗೌಡರ ಆಪ್ತರಾಗಿ ರಾಜಕೀಯ ಗುರುಗಳಾಗಿದ್ದರು. ಎಸ್.ಎಂ.ಕೃಷ್ಣರ ರಾಜಕೀಯ ಜೀವನ ಯುವ ರಾಜಕಾರಣಿಗಳಿಗೆ ಮಾದರಿ. ಇಂತಹ ಸಜ್ಜನರಾಜಕಾರಣಿ ನಮ್ಮನ್ನು ಹಗಲಿರುವುದು ರಾಜ್ಯ ಹಾಗೂ ಕುಟುಂಬಕ್ಕೆ ತುಂಬಲಾಗದ ನಷ್ಟ. ಎಸ್.ಎಂ.ಕೃಷ್ಣ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬಸ್ಥರಿಗೆ ನೀಡಲಿದೆ.- ಎಚ್.ತ್ಯಾಗರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ