ಮೃತ ಬಾಲಕರ ಕುಟುಂಬಕ್ಕೆ ಸಚಿವ ಜಮೀರ್ ಸಾಂತ್ವನ, ಪರಿಹಾರ

| Published : Oct 11 2024, 11:52 PM IST

ಮೃತ ಬಾಲಕರ ಕುಟುಂಬಕ್ಕೆ ಸಚಿವ ಜಮೀರ್ ಸಾಂತ್ವನ, ಪರಿಹಾರ
Share this Article
  • FB
  • TW
  • Linkdin
  • Email

ಸಾರಾಂಶ

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಸಮೀಪದ ಕುಮತಿ ಗ್ರಾಮದಲ್ಲಿ ಮಂಗಳವಾರ ಮೂವರು ಬಾಲಕರು ಹಳ್ಳದ ನೀರಿನಲ್ಲಿ ಈಜಾಡುವಾಗ ಮೃತಪಟ್ಟ ಹಿನ್ನೆಲೆಯಲ್ಲಿ ಗುರುವಾರ ಸಚಿವ ಜಮೀರ್ ಅಹಮದ್‌ ಖಾನ್‌ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ತಲಾ ₹5 ಲಕ್ಷದಂತೆ ₹15 ಲಕ್ಷ ಪರಿಹಾರ ನೀಡಿದರು.

ಕೂಡ್ಲಿಗಿ: ತಾಲೂಕಿನ ಕಾನಹೊಸಹಳ್ಳಿ ಸಮೀಪದ ಕುಮತಿ ಗ್ರಾಮದಲ್ಲಿ ಮಂಗಳವಾರ ಮೂವರು ಬಾಲಕರು ಹಳ್ಳದ ನೀರಿನಲ್ಲಿ ಈಜಾಡುವಾಗ ಮೃತಪಟ್ಟ ಹಿನ್ನೆಲೆಯಲ್ಲಿ ಗುರುವಾರ ಸಚಿವ ಜಮೀರ್ ಅಹಮದ್‌ ಖಾನ್‌ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಶಾಸಕ ಡಾ.ಎನ್.ಟಿ. ಶ್ರೀನಿವಾಸ್‌ ಅವರೊಂದಿಗೆ ಕುಮತಿ ಗ್ರಾಮದ ಬಾಲಕರ ಮನೆಗೆ ಭೇಟಿ ನೀಡಿದರು. ಅಲ್ಲದೆ ಮೃತಪಟ್ಟ ಬಾಲಕರ ಕುಟುಂಬಗಳಿಗೆ ವೈಯಕ್ತಿಕವಾಗಿ ತಲಾ ₹5 ಲಕ್ಷದಂತೆ ₹15 ಲಕ್ಷ ಪರಿಹಾರ ನೀಡಿದರು. ಅಲ್ಲದೆ ಕುಟುಂಬದವರು ಗುಡಿಸಲಲ್ಲಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ವಸತಿ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿ ಮಾಹಿತಿ ನೀಡಿದ ಆನಂತರ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದಾಗಿ ಹೇಳಿದರು.

ಮಕ್ಕಳನ್ನು ಕಳೆದುಕೊಂಡ ಪೋಷಕರು ಅಳಲು ತೋಡಿಕೊಂಡರು. ಇರುವ ಒಬ್ಬ ಮಗಳು ಕೂಡ ಅಂಗವಿಕಲೆ, ಹೀಗಾಗಿ ನಮಗೆ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ, ಸೂಕ್ತ ನಿರ್ಧಾರ ತಿಳಿಸುವುದಾಗಿ ಹೇಳಿದರು.

ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ನೊಂಗ್ಜಾಯಿ ಮೊಹಮ್ಮದ್ ಆಕ್ರಂ ಅಲಿ ಷಾ, ಕೂಡ್ಲಿಗಿ ತಾಪಂ ಇಒ ನರಸಪ್ಪ, ತಹಸೀಲ್ದಾರ್ ಎಂ. ರೇಣುಕಾ, ಕೂಡ್ಲಿಗಿ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಜಿಪಂ ಮಾಜಿ ಸದಸ್ಯರಾದ ನರಸಿಂಹನಗಿರಿ ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಕೆ.ಎಂ. ಶಶಿಧರ್, ದಲಿತ ಮುಖಂಡರಾದ ಎಸ್. ದುರುಗೇಶ್, ಎಳ್ಳೆನೀರು ಗಂಗಣ್ಣ, ಬಿ.ಟಿ. ಗುದ್ದಿ ದುರುಗೇಶ್, ಕಂದಗಲ್ಲು ಪರಶುರಾಮ, ಬಂಡೆ ರಾಘವೇಂದ್ರ, ಹುಡೇಂ ಪಾಪನಾಯಕ, ವಿಶಾಲಾಕ್ಷಿ ರಾಜಣ್ಣ, ಜಿಂಕಲ್ ನಾಗಮಣಿ, ಗುರುಸಿದ್ದನಗೌಡ, ಕುಮಾರಗೌಡ, ಗ್ರೇಡ್-2 ತಹಸೀಲ್ದಾರ್ ನೇತ್ರಾವತಿ, ಸಿಪಿಐ ತಳವಾರ ಸುರೇಶ್, ಪಿಎಸ್‌ಐ ಸಿದ್ರಾಮ ಬಿದರಾಣಿ ಇದ್ದರು.