ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ವ್ಯಕ್ತಿ ಶಾಮನೂರು ಶಿವಶಂಕರಪ್ಪ ಅವರನ್ನು‌ ಕಳೆದುಕೊಂಡಿರುವುದು ನೋವಿನ ಸಂಗತಿ. ಇಂತಹ ಹಿರಿಯ ನಾಯಕ ಸಮಾಜಕ್ಕೆ ಆಸ್ತಿಯಾಗಿದ್ದರು. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಅಪಾರವಾಗಿದೆ ಎಂದು ವೀರಶೈವ ಲಿಂಗಾಯಿತ ಮಹಾ ಸಭಾ ತಾಲೂಕು ಗೌರವಾಧ್ಯಕ್ಷರಾದ ಬೆಟ್ಟಸೋಗೆ ವಿ.ಪಿ. ವೀರೇಶ್ ಸಂತಾಪ ಸೂಚಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ರಾಮನಾಥಪುರ ಹೋಬಳಿ ಬೆಟ್ಟಸೋಗೆ ಗ್ರಾಮದ ವೀರಶೈವ- ಲಿಂಗಾಯಿತ ಸಮಾಜ ಹಾಗೂ ಶರಣ ಸಾಹಿತ್ಯ ಪರಿಷತ್ತುವತಿಯಿಂದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆಯ ರಾಷ್ಟ್ರಾಧ್ಯಕ್ಷರಾದ ಶರಣ ಶಾಮನೂರು ಶಿವಶಂಕರಪ್ಪ ಅವರ ಭಾವಪೂರ್ವ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ನಾಯಕರ ಇಡೀ ಕುಟುಂಬವೇ ಸಾರ್ವಜನಿಕ ಜೀವನ ಮತ್ತು ರಾಜಕೀಯಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ವೀರೇಶ್ ಹೇಳಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಬಿ.ವಿ. ಶಿವಮೂರ್ತಿ, ಕೇರಳಾಪುರ ಬಿ.ಪಿ. ವೀರಭದ್ರಪ್ಪ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆರ್‌. ಕೆ‌. ಶ್ರೀನಿವಾಸ್, ಮಹಾಸಭಾ ಸದಸ್ಯರಾದ ನಟರಾಜು, ಬಿ.ಪಿ. ರಾಜಶೇಖರ್, ಚಂದ್ರಶೇಖರ್ ರುದ್ದೇಶ್, ನವೀನ, ಅನುಪತಿ, ಬಿ.ಪಿ. ನಂಜುಂಡಸ್ವಾಮಿ, ಬಿ.ಎಂ. ಯೋಗೇಶ್, ರೇವಣ್ಣ, ಗಂಗಾಧರ್ ಬಿ.ಪಿ. ರಘು, ಶಿವಮೂರ್ತಿ ಮುಂತಾದವರು ಶ್ರದ್ಧಾಂಜಲಿ ಸಲ್ಲಿಸಿದರು.