ಯಲ್ಲಾಪುರ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಬೊಮ್ಮಾಯಿ ಸಾಂತ್ವನ

| Published : Jan 24 2025, 12:47 AM IST

ಯಲ್ಲಾಪುರ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಬೊಮ್ಮಾಯಿ ಸಾಂತ್ವನ
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಪುರ ಸಮೀಪ ಅರಬೈಲ್ ಘಾಟ್ ಹತ್ತಿರ ಟ್ರಕ್ ಪಲ್ಟಿಯಾಗಿ ಭೀಕರ ಅಪಘಾತದಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಕುಟುಂಬಸ್ಥರ ಮನೆಗೆ ಗುರುವಾರ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸಾಂತ್ವನ ಹೇಳಿದರು.

ಸವಣೂರು: ಯಲ್ಲಾಪುರ ಸಮೀಪ ಅರಬೈಲ್ ಘಾಟ್ ಹತ್ತಿರ ಟ್ರಕ್ ಪಲ್ಟಿಯಾಗಿ ಭೀಕರ ಅಪಘಾತದಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಕುಟುಂಬಸ್ಥರ ಮನೆಗೆ ಗುರುವಾರ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸಾಂತ್ವನ ಹೇಳಿದರು.ಅಪಘಾತದಲ್ಲಿ ಮೃತಪಟ್ಟ ಸವಣೂರ ಪಟ್ಟಣದ ಮಂಗಳವಾರ ಪೇಟೆಯ ನಿವಾಸಿ ಫಯಾಜ್ ಜಮಖಂಡಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೇರಿದ್ದ ಅಪಘಾತದಲ್ಲಿ ಮೃತಪಟ್ಟ ಸರ್ವ ಕುಟುಂಬಸ್ಥರಿಗೆ ನಿಮ್ಮ ಜೊತೆಗೆ ಸದಾ ನಾನೀದ್ದೇನೆ, ಧೈರ್ಯ ತಂದುಕೊಳ್ಳಿ ಎಂದು ಸಾಂತ್ವನ ಹೇಳಿದರು.ಅಪಘಾತದಲ್ಲಿ ಮೃತಪಟ್ಟ ಪ್ರತಿಯೊಬ್ಬರು ತೀರಾ ಕಡು ಬಡವರು. ದುಡಿಮೆಗೆ ಬೇರೆ ದಾರಿ ಇಲ್ಲದೇ ಅವರು ಊರು ಊರಿಗೆ ಹೋಗಿ ಸಂತೆ ವ್ಯಾಪಾರ ಮಾಡಿ ಅಲ್ಪಸ್ವಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಎದುರಿಗೆ ತಮ್ಮ ಗೋಳನ್ನು ತೋಡಿಕೊಂಡ ಸ್ಥಳೀಯ ಬೀದಿಬದಿ ವ್ಯಾಪಾರಸ್ಥರು, ಸವಣೂರ ಪಟ್ಟಣದಲ್ಲಿ ಬಹುತೇಕರು ಸಣ್ಣಪುಟ್ಟ ವ್ಯಾಪಾರಕ್ಕಾಗಿ ಊರು ಊರಿಗೆ ಹೋಗುವದನ್ನು ತಪ್ಪಿಸಲು ಕ್ಷೇತ್ರದಲ್ಲಿ ಬಡ ಕುಟುಂಬಗಳಿಗೆ ಉದ್ಯೋಗ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ ಬೀದಿಬದಿ ವ್ಯಾಪಾರಸ್ಥರು, ಶುಕ್ರವಾರ ಮತ್ತು ಶನಿವಾರ ರಾತ್ರಿ 9 ಗಂಟೆಗೆ ಸವಣೂರಿನಿಂದ ಖಾನಕೊಣ, ಗೋವಾಕ್ಕೆ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಖಾನಕೊಣ, ಕಾರವಾರ, ಬಂಕಾಪುರ, ಸವಣೂರಿಗೆ ಬರಲು ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿಕೊಂಡರು.ಬಿಜೆಪಿ ಮಹಿಳಾ ರಾಜ್ಯ ಕಾರ್ಯದರ್ಶಿ ಡಾ. ಶೋಭಾ ನಿಸ್ಸೀಮಗೌಡ್ರ, ಸವಣೂರ ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ಪ್ರಮುಖರಾದ ನಿಂಗಪ್ಪ ಮರಗಪ್ಪನವರ, ಸಂಗಪ್ಪ ಯರೇಶೀಮಿ, ಚನ್ನಬಸಯ್ಯ ಪ್ರಭಯ್ಯನವರಮಠ, ಬಿ.ಎಸ್.ಕೊಪ್ಪದ, ಶ್ರೀಕಾಂತ ಲಕ್ಷ್ಮೇಶ್ವರ, ಶ್ರೀಪಾದಗೌಡ ಪಾಟೀಲ, ಧರಿಯಪ್ಪಗೌಡ ಪಾಟೀಲ, ಬಸವರಾಜ ಸವೂರ, ಭಾಷಾ ಗೋಳಸಂಗಿ, ಸುಲೇಮಾನ ಮುರಡಿ, ಅಬ್ದುಲಗನಿ ನದಾಫ, ಯೂನಿಸಖಾನ ಅಳ್ನಾವರ ಹಾಗೂ ಇತರರು ಇದ್ದರು.ಇದಕ್ಕೂ ಮೊದಲು ಅಪಘಾತದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿದರು. ತದನಂತರ ಕುಟುಂಬದ ಸದಸ್ಯರೊಡನೆ ಮಾತನಾಡಿದರು. ಈ ಸಂದರ್ಭದಲ್ಲಿ ಕಿಮ್ಸ್ ನಿರ್ದೇಶಕರಾದ ಡಾ. ಕಮ್ಮಾರ ಉಪಸ್ಥಿತರಿದ್ದರು.