ಸಾರಾಂಶ
ಕಾಡಂಚಿನ ಪ್ರದೇಶದಲ್ಲಿ ಸಾಗುವಳಿ ಚೀಟಿ ನೀಡುವ ಭೂಮಿ ನಮಗೆ ಸೇರಿದ್ದು ಎಂದು ಅರಣ್ಯ, ಕಂದಾಯ ಇಲಾಖೆ ತಕರಾರಿದೆ. ತುರ್ತಾಗಿ ಜಂಟಿ ಸರ್ವೆ ನಡೆಸಿ ಎಂದು ಕಂದಾಯ, ಅರಣ್ಯ ಹಾಗೂ ಭೂ ಮಾಪನ ಇಲಾಖೆ ಅಧಿಕಾರಿಗಳಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸೂಚಿಸಿದರು.
ಕನ್ನಪಡ್ರಭ ವಾರ್ತೆ, ಗುಂಡ್ಲುಪೇಟೆ
ಕಾಡಂಚಿನ ಪ್ರದೇಶದಲ್ಲಿ ಸಾಗುವಳಿ ಚೀಟಿ ನೀಡುವ ಭೂಮಿ ನಮಗೆ ಸೇರಿದ್ದು ಎಂದು ಅರಣ್ಯ, ಕಂದಾಯ ಇಲಾಖೆ ತಕರಾರಿದೆ. ತುರ್ತಾಗಿ ಜಂಟಿ ಸರ್ವೆ ನಡೆಸಿ ಎಂದು ಕಂದಾಯ, ಅರಣ್ಯ ಹಾಗೂ ಭೂ ಮಾಪನ ಇಲಾಖೆ ಅಧಿಕಾರಿಗಳಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸೂಚಿಸಿದರು.ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ಕಂದಾಯ, ಅರಣ್ಯ ಹಾಗೂ ಭೂ ಮಾಪನ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ತಿಂಗಳ ಅಂತ್ಯದೊಳಗೆ ಸರ್ವೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ರೈತರು ಹಲವು ವರ್ಷಗಳಿಂದ ಭೂಮಿ ಉಳುತ್ತಿದ್ದಾರೆ. ಸಾಗುವಳಿ ಚೀಟಿಗಾಗಿ ಅಲೆಯುತ್ತಿದ್ದಾರೆ. ಆದರೆ ದಾಖಲೆಗಳಲ್ಲಿ ಕಂದಾಯ ಇಲಾಖೆ ಜೊತೆ ಅರಣ್ಯ ಇಲಾಖೆ ಎಂದಿದ್ದರೆ ಅರಣ್ಯ ಇಲಾಖೆ ಒಪ್ಪುತ್ತಿಲ್ಲ ಎಂಬ ದೂರಿರುವ ಕಾರಣ ಈ ಸಭೆ ನಡೆಸಲಾಗುತ್ತಿದೆ ಎಂದರು.ಈಗ ಕಂದಾಯ,ಅರಣ್ಯ ಇಲಾಖೆಗೆ ಸೇರಿದ ಭೂಮಿಯಿದ್ದರೆ ಭೂ ಮಾಪನ ಇಲಾಖೆ ಜೊತೆಗೂಡಿ ಜಂಟಿ ಸರ್ವೆ ನಡೆಸಬೇಕು ಅದು ಇನ್ನೆರಡು ತಿಂಗಳಲ್ಲಿ ಸರ್ವೆ ಮುಗಿಸಿ ಜಾಗ ಗುರುತಿಸಿಕೊಳ್ಳಿ. ರೈತರಿಗೆ ಸಾಗುವಳಿ ಚೀಟಿ ಸಾದ್ಯವಾಗಷ್ಟು ರೈತರಿಗೆ ನೀಡಬೇಕಿರುವ ಕಾರಣ ಅರಣ್ಯ ಹಾಗೂ ಕಂದಾಯ ಇಲಾಖೆ ಸಬೂಬು ಹೇಳದೆ ನಿಮ್ಮ ಇಲಾಖೆಗೆ ಸೇರಿದ ಜಾಗ ಮೊದಲು ಗುರುತಿಸಿ, ನಂತರ ಸಾಗುವಳಿ ಚೀಟಿ ನೀಡಲು ಅನುಕೂಲವಾಗುತ್ತದೆ ಎಂದರು.
ತಹಸೀಲ್ದಾರ್ ತನ್ಮಯ್ ಎಂ.ಎಸ್,ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್,ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಮೇಘ,ಕುಂದಕೆರೆ ವಲಯ ಅರಣ್ಯಾಧಿಕಾರಿ ಎಚ್.ಎನ್.ನಾಗೇಂದ್ರ ನಾಯಕ್,ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಇದ್ದರು.