ವಿಜ್ರಂಭಣೆಯ ತೆಪ್ಪೋತ್ಸವ ನಡೆಸಿ: ಸಚಿವ ರಾಜಣ್ಣ

| Published : Oct 08 2024, 01:01 AM IST

ಸಾರಾಂಶ

ಮಧುಗಿರಿ: ಮಧುಗಿರಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಚೋಳೇನಹಳ್ಳಿ ಕೆರೆಯಲ್ಲಿ ಪಣ್ದೆ ರೈತರ ಮುಖಂಡತ್ವ ಹಾಗೂ ಎಲ್ಲರ ಸಹಕಾರದಿಂದ ದಂಡಿಮಾರಮ್ಮ ದೇವಿಯ ತೆಪ್ಪೋತ್ಸವ ಆಚರಿಸುವಂತೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಸಲಹೆ ನೀಡಿದರು.

ಮಧುಗಿರಿ: ಮಧುಗಿರಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಚೋಳೇನಹಳ್ಳಿ ಕೆರೆಯಲ್ಲಿ ಪಣ್ದೆ ರೈತರ ಮುಖಂಡತ್ವ ಹಾಗೂ ಎಲ್ಲರ ಸಹಕಾರದಿಂದ ದಂಡಿಮಾರಮ್ಮ ದೇವಿಯ ತೆಪ್ಪೋತ್ಸವ ಆಚರಿಸುವಂತೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಸಲಹೆ ನೀಡಿದರು.

ಸೋಮವಾರ ತಾಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಬಿಜವರ ಕೆರೆ ವೀಕ್ಷಿಸಿದ ಬಳಿಕ ಕೆರೆ ಅಚ್ಚುಕಟ್ಟುದಾರರು ಮತ್ತು ಪಣ್ಣೆ ರೈತರ ಪರವಾಗಿ ಸಿದ್ದಾಪುರ ಕೆರೆ ಮತ್ತು ಚೋಳೇನಹಳ್ಳಿ ಕೆರೆಗಳು ಕೋಡಿ ಹರಿದಿರುವ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಸಿದ್ದಾಪುರ ಮತ್ತು ಚೋಳೇನಹಳ್ಳಿ ಕೆರೆಗಳಿಗೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಸಮರ್ಪಿಸಿ ವರುಣ ದೇವನ ಕೃಪೆ ಹೀಗೆ ಸದಾ ಮುಂದುವರಿಯಲಿ ರೈತರು,ಕೃಷಿಕರು ಸಂತದಿಂದಿರಲೆಂದು ಪ್ರಾರ್ಥಿಸಿದರು.

ಇದೇ ಸಂದರ್ಭದಲ್ಲಿ ಕಳೆದ ಐದು ದಶಕಗಳ ಹಿಂದೆ ಈ ಕೆರೆಯಲ್ಲಿ ದಂಡಿಮಾರಮ್ಮ ತೆಪ್ಪೋತ್ಸವ ನಡೆಸಿದ್ದೆವು. ಆಗ ತೆಪ್ಪದಲ್ಲಿ ಜಾಸ್ತಿ ಜನರು ಕೂತಿದ್ದರಿಂದ ತೆಪ್ಪ ಮುಳುಗುವ ಮೂಲಕ ಅವಘಡ ಸಂಭವಿಸಿತ್ತು. ಅಂದಿನಿಂದ ಇಂದಿನವರೆಗೆ ತೆಪ್ಪೋತ್ಸವ ನಡೆದಿಲ್ಲ, ಪ್ರಸ್ತುತ ನಿಮ್ಮ ಕಾಲದಲ್ಲಿ ತಾಲೂಕಿನಲ್ಲಿ ಅತ್ಯಧಿಕ ಮಳೆ ಬಿದ್ದಿರುವುದರಿಂದ ಬಹುತೇಕ ಎಲ್ಲ ಕೆರೆಗಳು ತುಂಬಿವೆ ಈ ಪೈಕಿ ಚೋಳೇನಹಳ್ಳಿ ಕೆರೆ ಕೂಡ ತುಂಬಿ ಕೋಡಿ ಬಿದ್ದಿದೆ. ಹಾಗಾಗಿ ತೆಪ್ಪೋತ್ಸವ ಧಾರ್ಮಿಕ ಆಚರಣೆ ನಡೆಸಿ ಕೊಡುವಂತೆ ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು ಗಮನಕ್ಕೆ ತಂದಾಗ ಸಚಿವ ಕೆ.ಎನ್‌.ರಾಜಣ್ಮ ಸಕಾರತ್ಮಕವಾಗಿ ಸ್ಪಂದಿಸಿ ಎಲ್ಲರ ಸಹಕಾರದಿಂದ ದಂಡಿಮಾರಮ್ಮ ತೆಪ್ಪೋತ್ಸವವನ್ನು ಅನುಭವಸ್ತರನ್ನು ಕರೆಸಿ ಊರೊಟ್ಟಿಗೆ ಬೆರೆತು ಸಮಾಲೋಚಿಸಿ ವಿಜೃಂಭಣೆಯಿಂದ ಆಚರಿಸುವ ಮೂಲಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡುವಂತೆ ತಿಳಿಸಿದರು.

ಬಿಜವರ ಕೆರೆ ಕೋಡಿ ಬಳಿ ನೀರು ಪೋಲಾಗುತ್ತಿರುವುದನ್ನು ಮನಗಂಡ ಸಚಿವರು, ಸುಸ್ಸಜ್ಜಿತವಾದ ಕೆರೆ ಕೋಡಿ ನಿರ್ಮಿಸಿ, ಕೆರೆ ಏರಿ ಎತ್ತರಿಸಿ ನೀರು ಪೋಲಾಗದಂತೆ ತಡೆಗಟ್ಟಬೇಕು. ರೈತರಿಗೆ.ಕೃಷಿಕರಿಗೆ ಹಾಗೂ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಬಿದ್ದ ಮಳೆ ನೀರುನ್ನು ಹಿಡಿದಿಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆರೆಗಳ ಸ್ಥಿರತೆ ಕಾಪಾಡುವ ಮೂಲಕ ಅಂತರ್ಜಲ ವೃದ್ಧಿಗೆ ಶ್ರಮಿಸಬೇಕು. ಯಾವುದೇ ಕೆರೆಗಳಲ್ಲಿ ನೀರು ಪೋಲಾಗದಂತೆ ಅಧಿಕಾರಿಗಳು ಎಚ್ಚರ ವಹಿಸುವಂತೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಎಂಎಲ್‌ಸಿ ಆರ್‌.ರಾಜೇಂದ್ರ, ಜಿಪಂ.ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌, ಉಪಾಧ್ಯಕ್ಷೆ ಸುಜಾತ ಶಂಕರನಾರಾಯಣ್‌, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್‌ ಶರೀನ್‌ತಾಜ್‌, ಇಒ ಲಕ್ಷ್ಮಣ್‌, ನೀರಾವರಿ ಇಲಾಖೆ ತಿಪ್ಪೇಸ್ವಾಮಿ, ಲೋಕೇಶ್ವರಪ್ಪ, ಮಾಜಿ ಅಧ್ಯಕ್ಷರಾದ ಎಂ.ವಿ.ಗೋವಿಂದರಾಜು, ಎಂ.ಕೆ.ನಂಜುಂಡರಾಜು, ಎನ್‌ಗಂಗಣ್ಣ, ಸದಸ್ಯ ಮಂಜನಾಥ್‌ ಆಚಾರ್‌, ಆಲೀಮ್‌, ಕಾಂಗ್ರೆಸ್‌ ಮುಖಂಡರಾದ ತುಂಗೋಟಿ ರಾಮಣ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಪಾಲಯ್ಯ,

ಸುವರ್ಣಮ್ಮ,ಡಿಸಿಸಿ ಬಿ.ನಾಗೇಶ್‌ಬಾಬು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಹಂತದ ಜನಪ್ರತಿನಿಧಿಗಳು ಸಾರ್ವಜನಿಕರು ಇದ್ದರು.