ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ಆಧಾರ್‌ ತೋರಿಸಿದರೂ ಹಣ ಪಡೆದ ಕಂಡೆಕ್ಚರ್

| Published : Mar 11 2025, 12:50 AM IST

ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ಆಧಾರ್‌ ತೋರಿಸಿದರೂ ಹಣ ಪಡೆದ ಕಂಡೆಕ್ಚರ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿದರೂ ಹಣ ಕೇಳಿದ ಕಂಡಕ್ಟರ್‌ಗೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆದಿದೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯವರಿಂದ ತರಾಟೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಮಹಿಳೆಯರು ಆಧಾರ್ ಕಾರ್ಡ್ ತೋರಿಸಿದರೂ ಹಣ ಕೇಳಿದ ಕಂಡಕ್ಟರ್‌ಗೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆದಿದೆ.

ತಾಲೂಕಿನ ಬಿ.ಎಚ್.ಕೈಮರದಿಂದ ಮಹಿಳೆಯರು ಪ್ರತಿನಿತ್ಯ ಎನ್.ಆರ್.ಪುರ ಪಟ್ಟಣಕ್ಕೆ ಬೆಳಿಗ್ಗೆ ಶೃಂಗೇರಿಯಿಂದ ಶಿವಮೊಗ್ಗಕ್ಕೆ ಹೋಗುವ ಸರ್ಕಾರಿ ಬಸ್ಸಿನಲ್ಲಿಯೇ ಹೋಗುತ್ತಾರೆ. ಕೆಲವು ಮಹಿಳೆಯರು ಆಧಾರ್ ಕಾರ್ಡ್ ತೋರಿಸಿದರೂ ಹಣ ನೀಡದೆ ಟಿಕೆಟ್ ನೀಡುವುದಿಲ್ಲ ಎಂದು ಬಸ್ಸಿನ ಕಂಡಕ್ಟರ್ ದರ್ಪ ತೋರಿಸಿದ್ದು ಮಹಿಳೆಯರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ರಘು ಹಾಗೂ ಬೇಸಿಲ್ ಅವರಿಗೆ ದೂರು ನೀಡಿದ್ದಾರೆ.

ರಘು ಹಾಗೂ ಬೇಸಿಲ್ ಅವರು ಮಹಿಳೆಯರು ಬಿ.ಎಚ್.ಕೈಮರದಿಂದ ಮಹಿಳೆಯರು ಹತ್ತುವ ಬಸ್ಸಿಗೇ ಹತ್ತಿದ್ದಾರೆ. ಮಹಿಳೆ ಯರಿಂದ ಹಣ ಪಡೆದು ಟಿಕೆಟ್ ನೀಡುತ್ತಿದ್ದ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಬಸ್ಸಿನ ಕಂಡಕ್ಟರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಭಾಗ್ಯ ನೀಡಿದೆ. ನಿಮ್ಮಂತಹ ನಿರ್ವಾಹಕರಿಂದ ಮಹಿಳೆಯರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ ನಿರ್ವಾಹಕ ಹಣ ಕೇಳುತ್ತಿರುವಾಗಲೇ ಮೊಬೈಲ್‌ನಿಂದ ವೀಡಿಯೋ ಮಾಡಿಕೊಂದ್ದು. ಬಸ್ಸಿನ ನಿರ್ವಾಹಕ ಅದನ್ನು ಪ್ರಶ್ನೆ ಮಾಡಲು ನೀವು ಯಾರು ? ಎಂದು ಸಮಿತಿ ಸದಸ್ಯರಿಗೆ ಗದರಿದ್ದಾನೆ. ಆಗ ಸದಸ್ಯರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯತ್ವದ ಗುರುತಿನ ಚೀಟಿ ತೋರಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ರಘು, ಬೇಸಿಲ್ ಚಿಕ್ಕಮಗಳೂರು ಡಿಪೋ ಮ್ಯಾನೇಜರ್ ಕರೆ ಮಾಡಿ ಬಸ್ ನಿರ್ವಾಹಕನ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

ಮಹಿಳೆಯರಿಗೆ ಹಣ ಕೇಳದ ನಿರ್ವಾಹಕನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಡಿಪೋ ಮ್ಯಾನೇಜರ್ ಸಮ್ಮತಿಸಿದ್ದಾರೆ ಎಂದು ಸಮಿತಿ ಸದಸ್ಯರಾದ ರಘು ಹಾಗೂ ಬೇಸಿಲ್ ಪತ್ರಿಕೆಗೆ ತಿಳಿಸಿದ್ದಾರೆ.