ಸಾರಾಂಶ
ನಿರ್ವಾಹಕ ಮಹೇಶ್ ನಿಖರ ಮಾಹಿತಿ ಪಡೆದು ಪರ್ಸ್ ವಾಪಾಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಗುಂಡ್ಲುಪೇಟೆ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ಓಲೆ ಹಾಗೂ ಹಣವನ್ನು ವಾರಸುದಾರರಿಗೆ ಸಾರಿಗೆ ಬಸ್ ನಿರ್ವಾಹಕ ಮಹೇಶ್ ಪ್ರಾಮಾಣಿಕತೆ ತೋರಿ ವಾಪಸ್ ನೀಡಿದ ಪ್ರಸಂಗ ನಡೆದಿದೆ. ತಾಲೂಕಿನ ಕಲಿಗೌಡನಹಳ್ಳಿ ಮಾರ್ಗದ ಬಸ್ ಹಂಗಳಕ್ಕೆ ತೆರಳುವಾಗ ಪ್ರಯಾಣಿಕರೊಬ್ಬರು ಪರ್ಸ್ ಬಿಟ್ಟು ಹೋಗಿದ್ದರು. ಬಸ್‌ನಲ್ಲಿ ಬಿದ್ದಿದ್ದ ಪರ್ಸ್ ಗಮನಿಸಿದ ನಿರ್ವಾಹಕ ಮಹೇಶ್ ಪರ್ಸ್ ತೆಗೆದುಕೊಂಡಿದ್ದಾರೆ. ಪರ್ಸ್ ಕಳೆದುಕೊಂಡಿದ್ದ ಹಂಗಳ ಗ್ರಾಮದ ರತ್ನಮ್ಮ ಸಹೋದರ ಕಲಿಗೌಡನಹಳ್ಳಿಗೆ ಹೋಗಿ ವಾಪಸ್ ಬಂದ ಬಸ್ ನ ನಿರ್ವಾಹಕರನ್ನು ಕೇಳಿದ್ದಾರೆ. ಆಗ ನಿರ್ವಾಹಕ ಮಹೇಶ್ ನಿಖರ ಮಾಹಿತಿ ಪಡೆದು ಪರ್ಸ್ ವಾಪಾಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.