ಸಾರಾಂಶ
2 ವರ್ಷದ ನಿಮ್ಮ ಸಾಧನೆ ಏನು ? । ಸಂಭ್ರಮ ಹಾಸ್ಯಾಸ್ಪದ, ಅಭಿವೃದ್ಧಿ ಮರೀಚಿಕೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬೆಲೆ ಏರಿಕೆ ನಿಮ್ಮ ನಿತ್ಯದ ಕೆಲಸವಾಗಿದೆ. ಎರಡು ವರ್ಷದ ನಿಮ್ಮ ಸಾಧನೆ ಏನು ಎಂದು ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.ನಾಳೆ ಕಾಂಗ್ರೆಸ್ ಪಕ್ಷ ನಡೆಸಲು ಉದ್ದೇಶಿಸಿರುವ ಸಾಧನಾ ರ್‍ಯಾಲಿ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದ ಅವರು, ಇದೊಂದು ಬೇಜವಾಬ್ದಾರಿ ಸರ್ಕಾರ, ಬೆಲೆ ಏರಿಕೆಯ ತನ್ನ ಚಾಳಿ ಬಿಟ್ಟಿಲ್ಲ. ಖಜಾನೆ ಖಾಲಿ, ಆಸ್ಪತ್ರೆಯಲ್ಲಿ ಔಷಧಿ ಇಲ್ಲ, ಮೂರು ಬಾರಿ ಮದ್ಯದ ಬೆಲೆ ಏರಿಕೆ. ಇದು, ನಿಮ್ಮ ಸಾಧನೆ ಎಂದು ಹೇಳಿದರು.ಮದ್ಯದ ಟ್ಯಾಕ್ಸ್ ಶೇ. 100 ರಷ್ಟು ಹೆಚ್ಚಳ ಮಾಡಲಾಗಿದೆ. ಲೈಸನ್ಸ್ ಶುಲ್ಕ 27 ರಿಂದ 50 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಐಎಂಎಲ್ ಲೈಸನ್ಸ್ 45 ರಿಂದ 95 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮದ್ಯದ ದರ ಹೆಚ್ಚು ಮಾಡುವುದರಿಂದ ಮದ್ಯ ಕುಡಿಯು ವವರ ಸಂಖ್ಯೆ ಕಡಿಮೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಛೇಡಿಸಿದ್ದಾರೆ. ಮದ್ಯದ ದರ ಹೆಚ್ಚಳ ಆಗಿರುವುದರಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಇದೊಂದು ತುಘಲಕ್ ದರ್ಬಾರ್ ಎಂದು ಆರೋಪಿಸಿದರು.ರಾಜ್ಯದ ಜನತೆಗೆ ಐದು ಗ್ಯಾರಂಟಿ ಕೊಡುತ್ತೇವೆ. ಯಾವುದೇ ಟ್ಯಾಕ್ಸ್ ಹಾಕೋದಿಲ್ಲ ಎಂದು ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ಈ ಮಾತು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಗ್ಯಾರಂಟಿ ಯೋಜನೆ ಗಳನ್ನು ಜಾರಿಗೆ ತರಲು ಹಣದ ಕೊರತೆಯಾಗಿದ್ದರಿಂದ ಎಲ್ಲಾ ವಸ್ತುಗಳ ಮೇಲೆ ಮನಬಂದಂತೆ ತೆರಿಗೆ ವಿಧಿಸುತ್ತಿದ್ದಾರೆ ಎಂದು ಹೇಳಿದ ಅಶೋಕ್, ಕಳೆದ ಎರಡು ವರ್ಷಗಳಲ್ಲಿ ಎಷ್ಟು ಅಣೆಕಟ್ಟನ್ನು ಕಟ್ಟಿದ್ದಿರಾ ?, ಎಷ್ಟು ಅಣೆಕಟ್ಟುಗಳನ್ನು ಎತ್ತರಿಸಿದ್ದೀರಾ ಎಂದು ಪ್ರಶ್ನಿಸಿದರು.ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಹಣ ಕೊಡುತ್ತಿಲ್ಲವೆಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಅಭಿವೃದ್ಧಿ ಮರೀಚಿಕೆ ಯಾಗಿದೆ. ಇಂತಹ ಸಂದರ್ಭದಲ್ಲಿ ಸಂಭ್ರಮಾಚರಣೆ ಹಾಸ್ಯಸ್ಪದ. ಮೂಡಾ ಅವ್ಯವಹಾರ, ವಾಲ್ಮೀಕಿ ಹಗರಣ, ಪ್ರಾಮಾಣಿಕ ಅಧಿಕಾರಿಗಳು ಬಲಿ, ಸುಮಾರು 2 ಸಾವಿರ ಮಂದಿ ರೈತರ ಆತ್ಮಹತ್ಯೆ. ರೈತರ ಸಾವಿಗೆ ನೀವೇ ಕಾರಣವೆಂದು ಸಂಭ್ರಮ ಮಾಡ್ತಾ ಇದೀರಾ ಎಂದು ಪ್ರಶ್ಸಿಸಿದ್ದರು.ಬಾಣಂತಿಯರ ಸಾವು, ಲವ್ ಜಿಹಾದ್ ಹೆಸರಿನಲ್ಲಿ ಕೊಲೆ, ಗಣೇಶ ವಿಗ್ರಹವನ್ನು ಪೊಲೀಸ್ ವಾಹನದಲ್ಲಿ ತೆಗೆದುಕೊಂಡು ಹೋಗುವುದು ಇದು ನಿಮ್ಮ ಸಾಧನೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಿಲ್ಲ. ಸಾರಿಗೆ ನೌಕರರಿಗೆ ಸಂಬಳ ಕೊಟ್ಟಿಲ್ಲ, ರೈತರಿಗೆ ಹಾಲಿನ ಬಾಕಿ ಹಣ ಕೊಟ್ಟಿಲ್ಲ, ರಸ್ತೆಗಳಲ್ಲಿ ಬಿದ್ದಿರೋ ಗುಂಡಿ ಮುಚ್ಚಲು ಆಗ್ತಾ ಇಲ್ಲ. ಹಣ ಇಲ್ಲದೆ ಖಜಾನೆ ಖಾಲಿ ಆದ್ರೂ ದೊಂಬರಾಟ ನಿಂತಿಲ್ಲ. ಜನರು ಕಟ್ಟಿರೋ ತೆರಿಗೆ ಹಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಜನರನ್ನು ಪಾತಾಳಕ್ಕೆ ತಳ್ಳಿ, ಇವರು ಬಿರಿಯಾನಿ ಊಟ ಮಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ರೈತರ, ನಿಷ್ಟಾವಂತ ಅಧಿಕಾರಿಗಳ ಸಮಾಧಿಯ ಮೇಲೆ ಸರ್ಕಾರ ಸಮಾವೇಶ ಮಾಡುತ್ತಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ರವಿಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರಡಪ್ಪ, ಮುಖಂಡರಾದ ದೀಪಕ್ ದೊಡ್ಡಯ್ಯ, ಪುಷ್ಪರಾಜ್, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.--- ಬಾಕ್ಸ್ --ತಲೆ ಕೆಟ್ಟಿದೆ: ತಾಕತ್ತು ಇದ್ರೆ ಹೋಗಿ ಬರ್ಲಿದೇಶದಲ್ಲಿ ಸಿಂದೂರ ಸಮರ ನಿಂತಿಲ್ಲ. ಗಡಿ ಭಾಗದಲ್ಲಿ ಇಂದಿಗೂ ಕೂಡ ಯುದ್ಧದ ವಾತಾವರಣ ಇದೆ. ಇಂತಹ ಸಂದರ್ಭ ದಲ್ಲಿ ನಿಮಗೆ ಸಮಾವೇಶ ಬೇಕಾಗಿತ್ತಾ.. ಕಾಂಗ್ರೆಸ್‌ನ ಹಿರಿಯ ಮತ್ತು ಮರಿ ಮುಖಂಡರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. 4 ಪ್ಲೇನ್ ಹಾರಿಸಿದ್ದು ಬಿಟ್ರೆ ಉಗ್ರರಿಗೆ ಏನೂ ಮಾಡಿಲ್ಲವೆಂದು ಹೇಳಿರುವವರಿಗೆ ತಲೆ ಕೆಟ್ಟಿದೆ. ಅವರಿಗೆ ತಾಕತ್ತು ಇದ್ರೆ ಯುದ್ಧದ ಗಡಿಯಲ್ಲಿ ನಿಂತು ಬರಲಿ ಎಂದು ಆರ್. ಅಶೋಕ್ ಸವಾಲ್ ಹಾಕಿದರು.ಕಾಂಗ್ರೆಸ್ ಪಕ್ಷದ ಕಿರಿಯ ಮುಖಂಡರಿಗೆ ದೇಶದ ಬಗ್ಗೆ ಗೌರವ ಇಲ್ಲ, ಸೈನಿಕರ ಮೇಲೆ ವಿಶ್ವಾಸ ಇಲ್ಲ. ಮತೀಯ ವಾದ, ವೋಟ್ ಪಾಲಿಟಿಕ್ಸ್ ಬಿಟ್ಟರೆ ಬೇರೇನೂ ಇವರ ತಲೆಯಲ್ಲಿ ಇಲ್ಲ. ಈ ಸಮಾವೇಶ ಆದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದರು.ಬ್ರಾಂಡ್ ಬೆಂಗಳೂರು ಹೋಗಿದೆ. ಮುಳುಗುತ್ತಿರುವ, ಕಸದ ರಾಶಿ, ಗುಂಡಿ ಬಿದ್ದಿರುವ ರಸ್ತೆಯ ಡಿಕೆಶಿ ಬೆಂಗಳೂರು ಆಗಿದೆ ಎಂದು ಆರೋಪಿಸಿದರು.--
ಕಾಂಗ್ರೆಸ್ ನುಗ್ಗೆ ಮರಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರ ಬೀಳೋ ನುಗ್ಗೆ ಮರ ಇದ್ದ ಹಾಗೆ. ಅದು, ಬೀಳುವ ಸ್ಥಿತಿಯಲ್ಲಿದೆ. ಅವರಿಂದ ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ತಮ್ಮನ್ನು ರಾಜೀನಾಮೆ ನೀಡಬೇಕೆಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನ ಕಾಂಗ್ರೆಸ್ನವರು ನೇಮಿಸಿದ್ರೆ, ಅವರು ಹೇಳಿದಂಗೆ ರಾಜೀನಾಮೆ ಕೊಡಬಹುದು. ನನ್ನನ್ನು ನೇಮಿಸಿರುವುದು ಬಿಜೆಪಿ, ಈ ದೇಶದಲ್ಲಿ ಎಲ್ಲಾ ರಾಜ್ಯದಲ್ಲಿರುವ ಪಾರ್ಟಿ ಬಿಜೆಪಿ. ಇವರು ಕಾಂಗ್ರೆಸ್ನವರು ಎಲ್ಲೋ ಎರಡು ಕಡೆ ಕ್ರಾಸ್ ಆಗಿ ಅಧಿಕಾರದಲ್ಲಿ ಇದ್ದಾರೆ. ಆ ಎರಡು ರಾಜ್ಯದಲ್ಲೂ ಯಾವಾಗ ಕಾಂಗ್ರೆಸ್ ಸರ್ಕಾರ ಬಿದ್ದೋಗುತ್ತೋ ಗೊತ್ತಿಲ್ಲ ಎಂದರು.ಕಾಂಗ್ರೆಸ್ ನವರಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ. ನಮ್ಮದು ಇಡೀ ಪ್ರಪಂಚದಲ್ಲಿ ನಂಬರ್ ಒನ್ ಪಾರ್ಟಿ, ಕೋಮ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಾರ್ಟಿ ಯಿಂದ ಬುದ್ಧಿವಾದ ಕಲಿಯುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
18 ಕೆಸಿಕೆಎಂ 1ಚಿಕ್ಕಮಗಳೂರಿನಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದರು. ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ, ರವಿಕುಮಾರ್, ಪಕ್ಷದ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಸೋಮಶೇಖರ್ ಇದ್ದರು.