ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನ ರಂಭಾಪುರಿ ವಿದ್ಯಾಸಂಸ್ಥೆಯ ಆವರಣದಲ್ಲಿ ತಿಪಟೂರು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಿ.14ರಂದು ನಡೆಯಲಿರುವ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ಸಭೆಯನ್ನು ಉದ್ಘಾಟಿಸಿ ಕನ್ನಡ ನಾಡು ನುಡಿ ಭಾಷೆಗೆ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗಾಗಿ ಇಂತಹ ಸಮ್ಮೇಳನಗಳು ಸದಾ ಅಗತ್ಯವಾಗಿದ್ದು, ಇದಕ್ಕೆ ತಿಪಟೂರು ಕನ್ನಡ ಸಾಹಿತ್ಯ ಪರಿಷತ್ತು ಮಾದರಿಯಾಗಿದೆ ಎಂದರು. ನಿಯೋಜಿತ ಸಮ್ಮೇಳನಾಧ್ಯಕ್ಷ ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿ ಸಮ್ಮೇಳನಗಳು ಕೇವಲ ಗೋಷ್ಠಿಗಳಿಗೆ ಸೀಮಿತವಾಗದೆ ಮಕ್ಕಳು ಮತ್ತು ಜನಸಾಮಾನ್ಯರ ಮನ ಪರಿವರ್ತನೆಗೊಳಿಸಿ ಜನಮಾನಸವಾಗಬೇಕೆಂದರು. ಕಸಾಪ ತಾ. ಅಧ್ಯಕ್ಷ ಎಂ. ಬಸವರಾಜಪ್ಪ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ನಮ್ಮ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರು ಹೋಬಳಿ ಘಟಕದ ಪದಾಧಿಕಾರಿಗಳು ಶ್ರಮ ಹಾಕುತ್ತಿದ್ದಾರೆ. ಸ್ಥಳೀಯರ ಸಹಕಾರದಿಂದ ಸಮ್ಮೇಳನಕ್ಕೆ ಬೇಕಾದ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು ಶನಿವಾರ ನಡೆಯುವ ಸಮ್ಮೇಳನಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹ ನೀಡುವ ಮೂಲಕ ಯಶಸ್ವಿಗೊಳಿಸಬೇಕೆಂದರು. ಈ ಸಂದರ್ಭದಲ್ಲಿ ಹಿಂಡಿಸ್ಕೆರೆ ಗ್ರಾ.ಪಂ ಅಧ್ಯಕ್ಷೆ ವಿದ್ಯಾಮಲ್ಲೇಶ್, ಬಿಳಿಗೆರೆ ಗ್ರಾ.ಪಂ ಅಧ್ಯಕ್ಷೆ ಕಲ್ಪನಾದೇವಿ, ಸದಸ್ಯೆ ಜ್ಯೋತಿ, ಪಿಡಿಓಗಳಾದ ರಮೇಶ್, ಪ್ರಸನ್ನಾತ್ಮ, ದಶರಥ್, ಮುಖಂಡರುಗಳಾದ ಮಂಜುನಾಥ್, ಶಿವಸ್ವಾಮಿ, ಮಲ್ಲೇಶ್, ನಟರಾಜು, ಮಂಜುನಾಥ್ ಹಟ್ನ, ಶಾಲೆಯ ಮುಖ್ಯ ಶಿಕ್ಷಕ ನವೀನ್, ಪ್ರಾಂಶುಪಾಲ ಭರತ್, ಕಸಾಪ ಕಾರ್ಯದರ್ಶಿ ಮಂಜಪ್ಪ, ಕಿಬ್ಬನಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಶಂಕರಪ್ಪ ಬಳ್ಳೆಕಟ್ಟೆ, ಖಜಾಂಚಿ ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಶಾರದಮ್ಮ, ಸಾಮಾಜಿಕ ಕಾರ್ಯಕರ್ತ ಗೋವಿಂದರಾಜು, ರವೀಶ್ ಬಾಣಸಂದ್ರ ಮತ್ತಿತರರಿದ್ದರು.