ಮಹಾರಾಷ್ಟ್ರ, ಜಾರ್ಖಂಡನಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ- ಜೋಶಿ

| Published : Nov 19 2024, 12:45 AM IST

ಸಾರಾಂಶ

ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಹೋಗಿ ಬಂದಿದ್ದೇನೆ. ಹರಿಯಾಣಾದಲ್ಲಿ ಈಗಾಗಲೇ ಮೂರನೇ ಬಾರಿ ಗೆದ್ದಿದ್ದೇವೆ. ಅದೇ ರೀತಿ‌ ಮಹಾರಾಷ್ಟ್ರದಲ್ಲಿ ಗೆಲ್ಲುತ್ತೇವೆ.

ಧಾರವಾಡ:

ಮಹಾರಾಷ್ಟ್ರ ಮತ್ತು ಜಾರ್ಖಂಡನಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆಲ್ಲಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಹೋಗಿ ಬಂದಿದ್ದೇನೆ. ಹರಿಯಾಣಾದಲ್ಲಿ ಈಗಾಗಲೇ ಮೂರನೇ ಬಾರಿ ಗೆದ್ದಿದ್ದೇವೆ. ಅದೇ ರೀತಿ‌ ಮಹಾರಾಷ್ಟ್ರದಲ್ಲಿ ಗೆಲ್ಲುತ್ತೇವೆ. ಕೊನೆಯ 2019ರಲ್ಲಿ ವಾಸ್ತವಿಕವಾಗಿ ನಾವೇ ಗೆದ್ದಿದ್ದೇವು. 130 ಸೀಟು ನಮ್ಮದೇ‌ ಇದ್ದವು. 20 ಸೀಟಿಗಾಗಿ ಉದ್ಧವ ಠಾಕ್ರೆ ಶಿವಸೇನೆ ಬಿಜೆಪಿಗೆ ದ್ರೋಹ ಬಗೆದು ಸರ್ಕಾರ ಮಾಡಿತು. ಹಿಂದೂ ವಿರೋಧಿ‌ ಹಾಗೂ ಬಾಳಾ ಠಾಕ್ರೆ ವಿರೋಧಿಗಳ ಜೊತೆಗೂ ಉದ್ಧವ ಠಾಕ್ರೆ ಸರ್ಕಾರ ಮಾಡಿದ್ದರು. ಅದಕ್ಕೆ ಶಿವಸೇನಾ ಅನೇಕ ಶಾಸಕರು ಬಂಡೆದ್ದು ಮಹಾಯುತಿ‌ ನಿರ್ಮಾಣ ಮಾಡಿದ್ದರು. ನಂತರ ದೇವೇಂದ್ರ ಫಡ್ನವಿಸ್ ಹಾಗೂ ಏಕನಾಥ ಶಿಂಧೆ ನೇತೃತ್ವದಲ್ಲಿ ಅಲ್ಲಿ ಕೆಲಸ ಆಗಿವೆ. ಪ್ರಧಾನಿಗಳ‌ ಬಹುದೊಡ್ಡ ಜನಪ್ರಿಯತೆ ಇದ್ದು, ಮಹಾರಾಷ್ಟ್ರದಲ್ಲಿ ಗೆಲವಿನ ಪೂರ್ತಿ ವಿಶ್ವಾಸ ಇದೆ ಎಂದರು.

ಮಣಿಪುರ ಗಲಭೆ ಪ್ರಕರಣ ಕುರಿತು ಮಾತನಾಡಿದ ಜೋಶಿ, ಅಲ್ಲಿ ಎಲ್ಲವನ್ನೂ ಸರಿ ಮಾಡಲು ಸರ್ವ ರೀತಿಯ ಪ್ರಯತ್ನ ನಡೆದಿದೆ. ಅದು ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣ ವಿಚಾರ. ಹಿಂದೆಯೂ ಇದೇ ರೀತಿ ಮೂರು ನಾಲ್ಕು ವರ್ಷ ಘಟನೆಗಳು ನಡೆದಿವೆ. ಆಗ ಇಷ್ಟು ನಿಯಂತ್ರಣ ಇರಲಿಲ್ಲ. ಇಂತಹ ಘಟನೆಯಲ್ಲಿ ಒಬ್ಬರು ಮೃತರಾದರೂ ದೌರ್ಭಾಗ್ಯದ ಸಂಗತಿ. ಕೇಂದ್ರ ಸರ್ಕಾರ, ಗೃಹ ಇಲಾಖೆ ಇದನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮ ಕೈಗೊಂಡಿದೆ. ಮಾತುಕತೆ ಹಾಗೂ ಪೊಲೀಸ್ ಇಲಾಖೆ ಮೂಲಕ ಕಟ್ಟು ನಿಟ್ಟಿನ ಕ್ರಮ ನಡೆದಿವೆ ಎಂದರು.