ಸಾರಾಂಶ
ಸಾಗರ: ಸತ್ಯದ ಹಾದಿಯಲ್ಲಿ ನಮ್ಮ ಕರ್ತವ್ಯ ನಿರ್ವಹಿಸಿದರೆ ಯಾರಿಗೂ ಭಯಪಡುವ ಅಗತ್ಯವಿಲ್ಲ. ನಾವು ಪಾಲಿಸಿಕೊಂಡು ಬಂದ ಸತ್ಯವೇ ನಮ್ಮನ್ನು ಕಾಪಾಡುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕಿ ಬಿಂಬ.ಕೆ.ಆರ್. ಅಭಿಪ್ರಾಯಪಟ್ಟರು.
ಸಾಗರ: ಸತ್ಯದ ಹಾದಿಯಲ್ಲಿ ನಮ್ಮ ಕರ್ತವ್ಯ ನಿರ್ವಹಿಸಿದರೆ ಯಾರಿಗೂ ಭಯಪಡುವ ಅಗತ್ಯವಿಲ್ಲ. ನಾವು ಪಾಲಿಸಿಕೊಂಡು ಬಂದ ಸತ್ಯವೇ ನಮ್ಮನ್ನು ಕಾಪಾಡುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕಿ ಬಿಂಬ.ಕೆ.ಆರ್. ಅಭಿಪ್ರಾಯಪಟ್ಟರು.
ಇಲ್ಲಿನ ರೋಟರಿ ಸಭಾಂಗಣದಲ್ಲಿ ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಸೇವಾ ಸ್ಮರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ವೃತ್ತಿ ಬದುಕಿನಲ್ಲಿ ಅನೇಕ ಸವಾಲುಗಳು ಎದುರಾಗುತ್ತದೆ. ಅವುಗಳನ್ನು ಎದುರಿಸುವ ಆತ್ಮಸ್ಥೈರ್ಯ ನಮ್ಮಲ್ಲಿರಬೇಕು ಎಂದರು.ಜನಪರವಾದ ಆಲೋಚನೆ ಇರಿಸಿಕೊಂಡು ಅತ್ಯಂತ ಕಾಳಜಿಯಿಂದ ನಾವು ವೃತ್ತಿ ನಿರ್ವಹಿಸಬೇಕು. ಶಿಕ್ಷಕರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚು ಇರುತ್ತದೆ. ಸಮಾಜದ ಕಣ್ಗಾವಲಿನಲ್ಲಿ ಕೆಲಸ ಮಾಡುತ್ತಿರುವ ನೀವು ಹೆಚ್ಚು ಜಾಗೃತೆಯಿಂದ ಇರಬೇಕು ಎಂದರು.
ಸಾಗರದ ಜನತೆ, ಶಿವಮೊಗ್ಗ ಜಿಲ್ಲೆಯ ಜನತೆ ನನಗೆ ನೀಡಿದ ಪ್ರೋತ್ಸಾಹದಿಂದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಉಪ ನಿರ್ದೇಶಕಿಯಾಗಿ ಉತ್ತಮ ಕೆಲಸ ಮಾಡಲು ಸಹಕಾರಿಯಾಯಿತು. ವೃತ್ತಿ ಬದುಕು ನನಗೆ ತೃಪ್ತಿ ನೀಡಿದ್ದು ಇದು ಮುಂದಿನ ಬದುಕಿಗೆ ಸ್ಫೂರ್ತಿ ನೀಡಿದೆ ಎಂದು ಹೇಳಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್ ಮಾತನಾಡಿದರು.
ಇದೇ ವೇಳೆ ಬಿಂಬ ಅವರ ವೃತ್ತಿಬದುಕಿನ ಸಾಧನೆ ಕುರಿತ ಪ್ರತಿಬಿಂಬ ಪುಸ್ತಕ ಬಿಡುಗಡೆ ಮಾಡಲಾಯಿತು.ನಿವೃತ್ತ ಪ್ರಾಧ್ಯಾಪಕ ಡಾ.ಜಗದೀಶ್ ಭಂಡಾರಿ, ಡಯಟ್ ಉಪನ್ಯಾಸಕ ಹನುಮಂತಪ್ಪ, ಜಬಿಯುಲ್ಲಾ, ನಿರಂಜನ ಹೆಗಡೆ, ಡಾ.ಅನ್ನಪೂರ್ಣ, ಭೂಮೇಶ್, ರಮೇಶ್, ಪ್ರೇಮಕುಮಾರಿ, ಮಹಾಬಲೇಶ್ವರ, ಲಕ್ಷ್ಮಣ್ ನಾಯ್ಕ್, ಬೂಕೇಶ್ವರಪ್ಪ, ಜಗನ್ನಾಥ್ ಕೆ. ಇನ್ನಿತರರು ಹಾಜರಿದ್ದರು. ಯಮನೂರಪ್ಪ ಸ್ವಾಗತಿಸಿದರು. ದತ್ತಾತ್ರೇಯ ಭಟ್ ವಂದಿಸಿದರು. ವಿ.ಟಿ.ಸ್ವಾಮಿ ನಿರೂಪಿಸಿದರು.